ಸಪ್ತಮಿ ಗೌಡ 'ವರ್ಕೌಟ್' ಹಿಂದಿನ 'ರಹಸ್ಯ' ಏನು ? 'ಸಿಂಗಾರಿ ಸಿರಿ'ಯ ಮುಂದಿನ 'ಚಿತ್ರ' ಯಾವುದು ..?

ಸಪ್ತಮಿ ಗೌಡ ಮುಂದೆ ಏನ್ಮಾಡ್ತಾರೆ ..? ಸದ್ಯಕ್ಕೆ ಅನೇಕರನ್ನ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ ಇದು. ಯಾಕೆಂದರೆ .. ಯುವ ತೆರೆಗೆ ಬಂದಿದೆ. ಅಭಿಮಾನಿಗಳ ಹೃದಯ ಗೆದ್ದಿದೆ. ಸಿರಿ ಪಾತ್ರದಲ್ಲಿ ಈ ಸಿಂಗಾರ ಸಿರಿಯನ್ನ ಕಣ್ತುಂಬಿಕೊಳ್ಳುವುದೇ ಸೌಭಾಗ್ಯ ಅನ್ನುವ ಅಭಿಪ್ರಾಯವನ್ನ ಚಿತ್ರ ನೋಡಿದವರು ವ್ಯಕ್ತಪಡಿಸಿದ್ದಾರೆ. ಮುಂದಿನ ಚಿತ್ರದ ಬಗ್ಗೆ ಏನಾದರೂ ಮಾತನಾಡಿ ಎಂಬ ಮನವಿಯನ್ನೂ ಸಪ್ತಮಿ ಗೌಡ ಅವರಲ್ಲಿ ಅನೇಕರು ಮಾಡಿಕೊಳ್ಳುತ್ತಿದ್ದಾರೆ.

ಆದರೆ.. ಸಪ್ತಮಿ ಗೌಡ ಮಾತ್ರ ಸುಳಿವನ್ನೂ ಬಿಟ್ಟು ಕೊಡ್ತಿಲ್ಲ. ಬದಲಿಗೆ ಬೆವರು ಸುರಿಸುತ್ತಿದ್ದಾರೆ. ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಹೀಗಾಗಿಯೇ ಯಾಕಿಷ್ಟು ಕಸರತ್ತು ಎಂಬ ಅನುಮಾನ ಅನೇಕರನ್ನ ಈಗ ಕಾಡುತ್ತಿದೆ.

ಹೌದು, ಸಾಮಾನ್ಯವಾಗಿ ಒಂದು ಸಿನಿಮಾ ಗೆದ್ದ ಮೇಲೆ, ತಮ್ಮ ಪಾತ್ರಕ್ಕೆ ಪ್ರೀತಿ ಸಿಕ್ಕ ಮೇಲೆ.. ಗಂಟುಮೂಟೆ ಕಟ್ಟಿಕೊಂಡು ಪ್ರವಾಸಕ್ಕೆ ಹೋಗುವ ಸಂಪ್ರದಾಯ, ಈ ಬಣ್ಣದ ಪ್ರಪಂಚದಲ್ಲಿ ಇದೆ. ಬಹುತೇಕರು ಈ ಸಂಪ್ರದಾಯವನ್ನ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಕೂಡ. ಆದರೆ.. ಸಪ್ತಮಿಗೌಡ ಮಾತ್ರ ಇದಕ್ಕೆ ತದ್ವಿರುದ್ದ. ಕಟ್ಟು ನಿಟ್ಟಾದ ವ್ಯಾಯಾಮವನ್ನ ಸಪ್ತಮಿ ಗೌಡ ಮಾಡುತ್ತಿದ್ದಾರೆ. ವರ್ಕೌಟ್.. ಡಯಟ್.. ಎಂದು ದಿನ ದೂಡುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಸಪ್ತಮಿ ಗೌಡ ಮಾಡಿಕೊಳ್ಳುತ್ತಿರುವ ತಯಾರಿನಾ ಇದು..? ಗೊತ್ತಿಲ್ಲ. ಆದರೆ ಸಪ್ತಮಿ ಗೌಡ ಅವರ ಈ ಶ್ರದ್ದೆ ಹಾಗೂ ಶ್ರಮವನ್ನ ನೋಡಿರುವ ಅನೇಕರು ಸಪ್ತಮಿ ಗೌಡ ಅವರಿಂದ ಹೊಸ ಸಿನಿಮಾದ ಸುದ್ದಿಯನ್ನ ನಿರೀಕ್ಷೆ ಮಾಡುತ್ತಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಕೋಮಲ ತ್ವಚೆಯ ಸಪ್ತಮಿ ಗೌಡ ಮಾಡುತ್ತಿರುವ ತಪಸ್ಸು ಇದು ಎಂದು ತಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳುತ್ತಿದ್ದಾರೆ.

Does Saptami Gowda is preparing for her next film

ಇನ್ನೂ ಕಾಂತಾರದ ಚೆಲುವೆ ಪೊಲೀಸ್ ಪಾತ್ರವನ್ನೇನಾದರೂ ಮಾಡುತ್ತಿದ್ದಾರಾ ಅನ್ನುವ ಅನುಮಾನಕ್ಕೂ ಈ ದೇಹದಂಡನೆ ಎಡೆ ಮಾಡಿಕೊಟ್ಟಿದೆ. ಗೊತ್ತ್ ಇಲ್ಲ.. ಇದು ಸಿಕ್ಸ್ ಪ್ಯಾಕ್ ಸೆಳೆತ ಇದ್ದರೂ ಇರಬಹುದು. ಅಥವಾ ಸಪ್ತಮಿ ಗೌಡ ಅವರ ಫಿಟ್ನೆಸ್ ಮಂತ್ರ ಇದ್ದರೂ ಇರಬಹುದು. ಯಾಕೆಂದರೆ ಸಪ್ತಮಿ ಗೌಡ ಅವರಿಗೆ ಫಿಟ್ನೆಸ್ ಹುಚ್ಚು ಹಿಡಿದಿದ್ದು ಇವತ್ತು ನಿನ್ನೆಯಲ್ಲ. ಅನೇಕ ವರ್ಷಗಳಿಂದ ಸಪ್ತಮಿ ಗೌಡ ಜಿಮ್ ನಲ್ಲಿ ದೇಹ-ಮನಸಿನ ನಡುವೆ ಸಮನ್ವಯತೆ ಸಾಧಿಸುವ ಪ್ರಯತ್ನ ಮಾಡ್ತಾನೇ ಬಂದಿದ್ದಾರೆ.

ಅಂದ್ಹಾಗೇ ಸಪ್ತಮಿಗೌಡ ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ಈ ನಾಲ್ಕು ವರ್ಷದಲ್ಲಿ ಸಪ್ತಮಿ ಗೌಡ ಅಭಿನಯಿಸಿದ್ದು ನಾಲ್ಕು ಸಿನಿಮಾಗಳಲ್ಲಿ ಮಾತ್ರ. ನಾಲ್ಕು ಸಿನಿಮಾಗಳು ಒಂದಕ್ಕಿಂತೊಂದು ಭಿನ್ನ. ಇನ್ನೂ ಸಪ್ತಮಿಗೌಡ ಅವರಿಗೆ ಮರ ಸುತ್ತುವ ಪಾತ್ರಗಳನ್ನ ಮಾಡಲು ಮನಸಿಲ್ಲ. ಗಟ್ಟಿಯಾದ ಪಾತ್ರ ನಿರ್ವಹಿಸುವ ಮೂಲಕ, ಹೃದಯ ಗೆಲ್ಲುವ ಇರಾದೆ ಸಪ್ತಮಿಗೌಡ ಅವರದ್ದು. ಇದಕ್ಕೆ ಅವರ ಹಿಂದಿನ ನಾಲ್ಕು ಸಿನಿಮಾ ಸಾಕ್ಷಿ. ಈ ಕಾರಣಕ್ಕೆ ಸಪ್ತಮಿ ಗೌಡ ಅವರ ಈ ವರ್ಕೌಟ್ ವಿಡಿಯೋ ಈಗ ಕುತೂಹಲ ಕೇಂದ್ರ ಬಿಂದುವಾಗಿದೆ. ಹತ್ತಾರು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಒಟ್ನಲ್ಲಿ ಸಪ್ತಮಿ ಗೌಡ ಅವರ ಈ ವರ್ಕೌಟ್ ಸೆಷನ್, ಸೆನ್ಸೇಶನ್ ಸೃಷ್ಟಿ ಮಾಡಿದೆ. ಅರವತ್ತು ಸಾವಿರ ಜನರ ಹೃದಯವನ್ನೂ ಈ ವಿಡಿಯೋ ಗೆದ್ದಿದೆ. ಇನ್ನೇನ್ ಇದ್ದರೂ ಸಪ್ತಮಿ ಗೌಡ ತಮ್ಮ ಮುಂದಿನ ಕುರಿತು ಮಾಹಿತಿಯನ್ನ ನೀಡಬೇಕು. ಆ ಕಾಲ ಆದಷ್ಟು ಬೇಗ ಬರಲಿ ಅನ್ನುವುದು ಇವರ ಅಭಿಮಾನಿಗಳ ಆಶಯ

More from Filmibeat

English summary
Kantara And Yuva Fame Actress Sapthami Gowda Sweating Out At The Gym, Many People Are Doubting Whether Saptami Gowda Is Preparing For Her Next Film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X