ರವಿಚಂದ್ರನ್ ಸಿನಿಮಾದಲ್ಲಿ ನಾಯಿಗೂ ದುಬಾರಿ ಸುಂಭಾವನೆ! ಎಷ್ಟು ಲಕ್ಷ ಗೊತ್ತೆ?

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾಗಳಲ್ಲಿ ನಾಯಕ ನಟ-ನಾಯಕಿಗೆ ದೊಡ್ಡ ಮೊತ್ತದ ಸಂಭಾವನೆ ದೊರೆಯುತ್ತದೆ. ಇನ್ನೆಲ್ಲರಿಗೂ ಸಾಮಾನ್ಯ ಸಂಭಾವನೆಯಷ್ಟೆ. ಆದರೆ ರವಿಚಂದ್ರನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಿಗೂ ದುಬಾರಿ ಸಂಭಾವನೆ ನೀಡಲಾಗುತ್ತಿದೆ.

ರವಿಚಂದ್ರನ್, 'ಗೌರಿಶಂಕರ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ನಾಯಿಯೊಂದು ಸಹ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದೆ. ಈ ನಾಯಿಗೆ ಭಾರಿ ದುಬಾರಿ ಸಂಭಾವನೆಯನ್ನು ಸಿನಿಮಾದ ನಿರ್ಮಾಪಕ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ವಿಶ್ವದ ದುಬಾರಿ ನಾಯಿಯೆಂದು ಸುದ್ದಿಯಾಗಿದ್ದ ಕಕೇಶಿಯನ್ ಶೆಫರ್ಡ್‌ ನಾಯಿ, ರವಿಚಂದ್ರನ್‌ ನಟನೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಸತೀಶ್ ಎಂಬುವರಿಗೆ ಸೇರಿದ ಈ ನಾಯಿಯ ಬೆಲೆ ಬರೊಬ್ಬರಿ 20 ಕೋಟಿಯಂತೆ!

Dog Getting 10 Lakh Rs Remuneration For Acting Along With Ravichandrans

ಈ ದುಬಾರಿ ನಾಯಿಗೆ ದುಬಾರಿ ಸಂಭಾವನೆಯನ್ನೇ 'ಗೌರಿಶಂಕರ್' ಸಿನಿಮಾದ ನಿರ್ಮಾಪಕ ನೀಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ಈ ನಾಯಿಗೆ 10 ಲಕ್ಷ ರುಪಾಯಿ ಸಂಭಾವನೆಯನ್ನು ನೀಡಲಾಗಿದೆ. ಅಲ್ಲದೆ, ನಾಯಿಗಾಗಿ ವಿಶೇಷವಾಗಿ ಎಸಿ ಕಾಟೆಜ್, ವಿಶೇಷ ಆಹಾರ ವ್ಯವಸ್ಥೆಗಳನ್ನು ಸಹ ಚಿತ್ರತಂಡ ಮಾಡಿದೆ.

ಸತೀಶ್ ಅವರ ನಾಯಿಯು ಕಕೇಶಿಯನ್ ಶೆಫರ್ಡ್‌ ಜಾತಿಯ ನಾಯಿಗಳಲ್ಲಿಯೇ ಬಹಳ ದೊಡ್ಡ ನಾಯಿಯಂತೆ. ಧೈರ್ಯಶಾಲಿ ಹಾಗೂ ಬುದ್ಧಿವಂತ ನಾಯಿ ಸಹ. ಹಾಗಾಗಿಯೇ ಈ ನಾಯಿಗೆ ಕೋಟ್ಯಂತರ ಬೆಲೆ. ಈ ನಾಯಿಯನ್ನು ರಷ್ಯಾದಿಂದ ಸತೀಶ್ ಆಮದು ಮಾಡಿಕೊಂಡಿದ್ದಾರಂತೆ.

ನಾಯಿಗಳನ್ನು ಸಾಕುವ ಹವ್ಯಾಸವಿರುವ ಸತೀಶ್, ಅಪ್ಪಟ ಶ್ವಾನ ಪ್ರೇಮಿ. ಭಾರತೀಯ ಶ್ವಾನ ತಳಿ ಸಂರಕ್ಷಕರ ಸಂಘದ ಅಧ್ಯಕ್ಷರೂ ಆಗಿದ್ದಾರೆ ಸತೀಶ್.

ಇದೇ ಮೊದಲ ಬಾರಿಗೆ ಹೈದರ್ ಹೆಸರಿನ ಈ ನಾಯಿ ಸಿನಿಮಾಗಳಲ್ಲಿ ನಟಿಸುತ್ತಿದೆ. ನಾಯಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿರುವುದನ್ನು ವಿಡಿಯೋ ಒಂದರಲ್ಲಿ ನಾಯಿಯ ಮಾಲೀಕ ಸತೀಶ್ ಅವರೇ ಖಚಿತಪಡಿಸಿದ್ದಾರೆ.

More from Filmibeat

English summary
Dog getting 10 lakh rs remuneration for acting along with Ravichandran in Gowrishankar movie. Dog owner Satish shares details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X