twitter
    For Quick Alerts
    ALLOW NOTIFICATIONS  
    For Daily Alerts

    ರವಿಚಂದ್ರನ್ ಸಿನಿಮಾದಲ್ಲಿ ನಾಯಿಗೂ ದುಬಾರಿ ಸುಂಭಾವನೆ! ಎಷ್ಟು ಲಕ್ಷ ಗೊತ್ತೆ?

    By ಫಿಲ್ಮಿಬೀಟ್ ಡೆಸ್ಕ್
    |

    ಸಿನಿಮಾಗಳಲ್ಲಿ ನಾಯಕ ನಟ-ನಾಯಕಿಗೆ ದೊಡ್ಡ ಮೊತ್ತದ ಸಂಭಾವನೆ ದೊರೆಯುತ್ತದೆ. ಇನ್ನೆಲ್ಲರಿಗೂ ಸಾಮಾನ್ಯ ಸಂಭಾವನೆಯಷ್ಟೆ. ಆದರೆ ರವಿಚಂದ್ರನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಿಗೂ ದುಬಾರಿ ಸಂಭಾವನೆ ನೀಡಲಾಗುತ್ತಿದೆ.

    ರವಿಚಂದ್ರನ್, 'ಗೌರಿಶಂಕರ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ನಾಯಿಯೊಂದು ಸಹ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದೆ. ಈ ನಾಯಿಗೆ ಭಾರಿ ದುಬಾರಿ ಸಂಭಾವನೆಯನ್ನು ಸಿನಿಮಾದ ನಿರ್ಮಾಪಕ ನೀಡಿದ್ದಾರೆ.

    Haripriya-Vasishta Simha: ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ 'ಸಿಂಹಪ್ರಿಯ' Haripriya-Vasishta Simha: ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ 'ಸಿಂಹಪ್ರಿಯ'

    ಕೆಲ ತಿಂಗಳ ಹಿಂದೆ ವಿಶ್ವದ ದುಬಾರಿ ನಾಯಿಯೆಂದು ಸುದ್ದಿಯಾಗಿದ್ದ ಕಕೇಶಿಯನ್ ಶೆಫರ್ಡ್‌ ನಾಯಿ, ರವಿಚಂದ್ರನ್‌ ನಟನೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ಸತೀಶ್ ಎಂಬುವರಿಗೆ ಸೇರಿದ ಈ ನಾಯಿಯ ಬೆಲೆ ಬರೊಬ್ಬರಿ 20 ಕೋಟಿಯಂತೆ!

    Dog Getting 10 Lakh Rs Remuneration For Acting Along With Ravichandrans

    ಈ ದುಬಾರಿ ನಾಯಿಗೆ ದುಬಾರಿ ಸಂಭಾವನೆಯನ್ನೇ 'ಗೌರಿಶಂಕರ್' ಸಿನಿಮಾದ ನಿರ್ಮಾಪಕ ನೀಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ಈ ನಾಯಿಗೆ 10 ಲಕ್ಷ ರುಪಾಯಿ ಸಂಭಾವನೆಯನ್ನು ನೀಡಲಾಗಿದೆ. ಅಲ್ಲದೆ, ನಾಯಿಗಾಗಿ ವಿಶೇಷವಾಗಿ ಎಸಿ ಕಾಟೆಜ್, ವಿಶೇಷ ಆಹಾರ ವ್ಯವಸ್ಥೆಗಳನ್ನು ಸಹ ಚಿತ್ರತಂಡ ಮಾಡಿದೆ.

    ಸತೀಶ್ ಅವರ ನಾಯಿಯು ಕಕೇಶಿಯನ್ ಶೆಫರ್ಡ್‌ ಜಾತಿಯ ನಾಯಿಗಳಲ್ಲಿಯೇ ಬಹಳ ದೊಡ್ಡ ನಾಯಿಯಂತೆ. ಧೈರ್ಯಶಾಲಿ ಹಾಗೂ ಬುದ್ಧಿವಂತ ನಾಯಿ ಸಹ. ಹಾಗಾಗಿಯೇ ಈ ನಾಯಿಗೆ ಕೋಟ್ಯಂತರ ಬೆಲೆ. ಈ ನಾಯಿಯನ್ನು ರಷ್ಯಾದಿಂದ ಸತೀಶ್ ಆಮದು ಮಾಡಿಕೊಂಡಿದ್ದಾರಂತೆ.

    ನಾಯಿಗಳನ್ನು ಸಾಕುವ ಹವ್ಯಾಸವಿರುವ ಸತೀಶ್, ಅಪ್ಪಟ ಶ್ವಾನ ಪ್ರೇಮಿ. ಭಾರತೀಯ ಶ್ವಾನ ತಳಿ ಸಂರಕ್ಷಕರ ಸಂಘದ ಅಧ್ಯಕ್ಷರೂ ಆಗಿದ್ದಾರೆ ಸತೀಶ್.

    ಇದೇ ಮೊದಲ ಬಾರಿಗೆ ಹೈದರ್ ಹೆಸರಿನ ಈ ನಾಯಿ ಸಿನಿಮಾಗಳಲ್ಲಿ ನಟಿಸುತ್ತಿದೆ. ನಾಯಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಿರುವುದನ್ನು ವಿಡಿಯೋ ಒಂದರಲ್ಲಿ ನಾಯಿಯ ಮಾಲೀಕ ಸತೀಶ್ ಅವರೇ ಖಚಿತಪಡಿಸಿದ್ದಾರೆ.

    English summary
    Dog getting 10 lakh rs remuneration for acting along with Ravichandran in Gowrishankar movie. Dog owner Satish shares details.
    Wednesday, February 1, 2023, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X