For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್ ಶುರು

  By Pavithra
  |

  ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳನ್ನ ಬಳಸಿಕೊಂಡು ಸಿನಿಮಾ ಚಿತ್ರೀಕರಣ ಮಾಡುವುದು ಸಾಕಷ್ಟು ಕಷ್ಟದ ಕೆಲಸ ಆಗಿದೆ. ಚಿತ್ರಗಳಲ್ಲಿ ಪ್ರಾಣಿಗಳ ಬಳಕೆ ಮಾಡಲು ಅನಿಮಲ್ ವೆಲ್ಫೇರ್ ಬೋರ್ಡ್ ನಿಂದ ಮಾನ್ಯತೆ ಪಡೆದುಕೊಂಡೆ ಚಿತ್ರೀಕರಣ ಮಾಡಬೇಕು. ಸಾಕಷ್ಟು ವರ್ಷಗಳ ಹಿಂದೆ ಹೆಚ್ಚಾಗಿ ಪ್ರಾಣಿಗಳು ಇರುವ ಸಿನಿಮಾಗಳು ಬರುತ್ತಿತ್ತು.

  ಮಕ್ಕಳಿಗಂತು ಪ್ರಾಣಿಗಳು ಇರುವ ಸಿನಿಮಾ ನೋಡಿ ಖುಷಿ ಪಡುತ್ತಿದ್ದರು. ಆದರೆ ಇತ್ತಿಚಿನ ದಿನಗಳಲ್ಲಿ ಪ್ರಾಣಿಗಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲ್ಲ ಅಂತ ಮೂಗು ಮುರಿಯುತ್ತಿದ್ದ ಸಿನಿಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಶ್ವಾನಗಳ ದರ್ಬಾರ್ ಹೆಚ್ಚಾಗಿದೆ. ಉತ್ತಮ ಟ್ರೈನರ್ ಗಳಿಂದ ಪಳಗಿರುವ ಶ್ವಾನಗಳು ಕನ್ನಡದ ಚಿತ್ರಗಳಲ್ಲಿ ಅಭಿನಯಿಸುತ್ತಿವೆ.

  ಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾ

  ಚಿತ್ರಗಳಲ್ಲಿ ಶ್ವಾನಗಳ ಬಳಕೆ ಯಾಕೆ ಹೆಚ್ಚಾಗಿದೆ? ಯಾವ ಯಾವ ಚಿತ್ರದಲ್ಲಿ ಯಾವ ರೀತಿಯ ನಾಯಿಗಳು ಅಭಿನಯ ಮಾಡುತ್ತಿವೆ. ಶ್ವಾನ ಇರುವ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕಲಾವಿದರುಗಳು ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

  ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್

  ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್

  ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್ ಹೆಚ್ಚಾಗಿದೆ. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಾಯಿಯನ್ನೂ ಒಂದು ಪಾತ್ರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ನಾಯಕ ಅಥವಾ ನಾಯಕಿ ಜೊತೆಯಲ್ಲಿ ಕಲಾವಿದನ ರೀತಿಯಲ್ಲೇ ಚಿತ್ರಗಳಲ್ಲಿ ಶ್ವಾನ ಕಾಣಿಸಿಕೊಳ್ಳುತ್ತಿದೆ.

  ಚೇಸ್ ಚಿತ್ರದಲ್ಲಿ ಮ್ಯಾಕ್ಸ್ ಅಭಿನಯ

  ಚೇಸ್ ಚಿತ್ರದಲ್ಲಿ ಮ್ಯಾಕ್ಸ್ ಅಭಿನಯ

  ರಾಧಿಕಾ ಚೇತನ್ ಹಾಗೂ ಅವಿನಾಶ್ ನರಸಿಂಹರಾಜು ಅಭಿನಯದ ಚೇಸ್ ಚಿತ್ರದಲ್ಲಿ ಮ್ಯಾಕ್ಸ್ ಎನ್ನುವ ಶ್ವಾನ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದೆ. 'ಚೇಸ್' ಸಿನಿಮಾದಲ್ಲಿ ಮ್ಯಾಕ್ಸ್, ಬ್ರೂನೋ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ.

  ನಾನು ಮತ್ತು ಗುಂಡ ಚಿತ್ರದಲ್ಲಿ ಶ್ವಾನ

  ನಾನು ಮತ್ತು ಗುಂಡ ಚಿತ್ರದಲ್ಲಿ ಶ್ವಾನ

  ಶಿವರಾಜ್ ಕೆ ಆರ್ ಪೇಟೆ ಹಾಗೂ ಸಂಯುಕ್ತ ಹೊರನಾಡು ಅಭಿನಯಿಸಿರುವ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಶ್ವಾನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಪೂರ್ತಿ ನಾಯಿ ಚಿತ್ರದ ನಾಯಕನ ಜೊತೆಯಲ್ಲಿಯೇ ಇರುತ್ತದೆ. ಈ ಚಿತ್ರದಲ್ಲಿ ಸ್ಯಾಮ್, ಗುಂಡ ಹಾಗೂ ಸಿಂಬಾ ಎನ್ನುವ ಮೂರು ಶ್ವಾನಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ.

  ಚಾರ್ಲಿ 777 ಚಿತ್ರಲ್ಲಿಯೂ ಶ್ವಾನ

  ಚಾರ್ಲಿ 777 ಚಿತ್ರಲ್ಲಿಯೂ ಶ್ವಾನ

  ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ 'ಚಾರ್ಲಿ 777' ಚಿತ್ರದಲ್ಲಿಯೂ ಶ್ವಾನ ಪ್ರಮುಖ ಪಾತ್ರಧಾರಿ ಆಗಿ ಕಾಣಿಸಿಕೊಳ್ಳಲಾಗಿದೆ. ಈಗಾಗಲೇ ಚಾರ್ಲಿ ಹೆಸರಿನ ನಾಯಿ ರಕ್ಷಿತ್ ಆಫೀಸ್ ನಲ್ಲಿ ಆಶ್ರಯ ಪಡೆದುಕೊಂಡಿದ್ದು ಟ್ರೈನಿಂಗ್ ಕೂಡ ನಡೆಯುತ್ತಿದೆ.

  ಪ್ರಿಯಾಮಣಿ ಜೊತೆಯಲ್ಲಿ ರಾಖಿ

  ಪ್ರಿಯಾಮಣಿ ಜೊತೆಯಲ್ಲಿ ರಾಖಿ

  ಪ್ರಿಯಾಮಣಿ ಹಾಗೂ ಕಿಶೋರ್ ಅಭಿನಯದ 'ನನ್ನ ಪ್ರಕಾರ' ಸಿನಿಮಾದಲ್ಲಿ ಪ್ರಿಯಾಮಣಿ ಜೊತೆಯಲ್ಲಿ ರಾಖಿ ಎನ್ನುವ ಶ್ವಾನ ಅಭಿನಯಿಸಿದೆ. ಟ್ರೈನಿಂಗ್ ಪಡೆದುಕೊಂಡಿರುವ ನಾಯಿಯನ್ನೇ ಸಿನಿಮಾಗಳಲ್ಲಿ ಬಳಸಿ ಕೊಳ್ಳಲಾಗುತ್ತಿದೆ.

  ಸಿನಿಮಾಗಳಲ್ಲಿ ಲ್ಯಾಬ್ರಡಾರ್ ಶ್ವಾನಗಳು

  ಸಿನಿಮಾಗಳಲ್ಲಿ ಲ್ಯಾಬ್ರಡಾರ್ ಶ್ವಾನಗಳು

  ಈಗಾಗಲೇ ಹತ್ತಾರು ಚಿತ್ರಗಳಲ್ಲಿ ಇದೇ ಶ್ವಾನಗಳು ಅಭಿನಯಿಸಲು ಆರಂಭ ಮಾಡಿವೆ. ಟ್ರೈನರ್ ಗಳಿಂದ ಉತ್ತಮ ಅಭ್ಯಾಸವನ್ನು ಪಡೆದುಕೊಂಡಿರುವ ನಾಯಿಗಳು ಕ್ಯಾಮೆರಾ ಮುಂದೆ ಸತ್ತಿರುವಂತೆಯೂ ನಟಿಸುತ್ತವೆ. ಅಷ್ಟೇ ಅಲ್ಲದೆ ಹೆಚ್ಚಿನವು ಲ್ಯಾಬ್ರಡಾರ್ ತಳಿಯವೇ ಆಗಿವೆ.

  ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣ

  English summary
  Dogs are playing lead roles in Kannada Movies such as Nanna prakara, Naanu Mattu Gunda, Charlie 777.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X