twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಡೊಳ್ಳು ಚಿತ್ರಕ್ಕೆ ಮತ್ತೊಂದು ಪ್ರಶಸ್ತಿಯ ಗರಿ

    |

    ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಡೊಳ್ಳು ಸಿನಿಮಾದ ಮೂಲಕ ನಿರ್ಮಾಪಕರಾಗಿರೋದು ಗೊತ್ತೇ ಇದೆ. ಇದೀಗ ಈ ಸಿನಿಮಾಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬರುತ್ತಿದೆ. ಪವನ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ಸೇರಿ ನಿರ್ಮಿಸಿರುವ ಈ ಸಿನಿಮಾ ಸಾಕಷ್ಟು ಜನಮೆಚ್ಚುಗೆ ಕೂಡ ಪಡೆದುಕೊಂಡಿದೆ.

    ಪವನ್ ಮತ್ತು ಅಪೇಕ್ಷಾ ನಿರ್ಮಾಣದ ಡೊಳ್ಳು ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇತ್ತೀಚೆಗೆ ಇನೋವೇಟೀವ್ ಫಿಲಂ ಆಯೋಜಿಸಿದ್ದ 33ದೇಶಗಳ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಡೊಳ್ಳು ಚಿತ್ರ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಡೊಳ್ಳು ಚಿತ್ರ ಪ್ರತಿಷ್ಠಿತ 20ನೇ ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿತ್ತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರದ ನಂತರ ಈ ಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದ ಮತ್ತೊಂದು ಕನ್ನಡ ಸಿನಿಮಾ ಇದಾಗಿತ್ತು.

    ಅಮೆರಿಕದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ ನಲ್ಲಿ ಡೊಳ್ಳು ಸಿನಿಮಾದ ಮೊದಲ ಪ್ರದರ್ಶನ ಕಂಡಿತ್ತು ಮತ್ತು ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್‌ಗು ಆಯ್ಕೆ ಆಗಿತ್ತು. ಪ್ರೇಕ್ಷಕರ ಗಮನ ಸೆಳೆಯೊದ್ರೊಂದಿಗೆ ಎಲ್ಲರ ಪ್ರಶಂಸೆಯನ್ನು ಪಡೆದುಕೊಂಡಿತ್ತು.

    Dollu gets Dada Saheb Phalke award in Innovative International Film Festival

    ಡೊಳ್ಳು ಸಿನಿಮಾ ಮಾಡುವುದರ ಹಿಂದಿನ ಉದ್ದೇಶವನ್ನು ನಿರ್ದೇಶಕ ಸಾಗರ್ ಪುರಾಣಿಕ್ ಈ ಹಿಂದೆಯೇ ಹೇಳಿಕೊಂಡಿದ್ದರು. "ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನಾನು ಡೊಳ್ಳು ಕುಣಿತ ಪ್ರದರ್ಶನವನ್ನು ಗಮನಿಸುತ್ತಿದೆ. ಆ ಕಾರ್ಯಕ್ರಮದಲ್ಲಿ ಅದು ನನಗೆ ಗೂಸ್ ಬಂಪ್ಸ್ ನೀಡಿತು.ಹಾಗೇ ನಾನು ಸ್ಥಳೀಯ ಸಂಸ್ಕೃತಿಯಲ್ಲಿ ನನ್ನ ಬೇರುಗಳೊಂದಿಗೆ ಬೆಳೆದಿದ್ದೇನೆ, ಹಾಗಾಗಿ ಈ ಸ್ಥಳೀಯ ಕಲಾ ಪ್ರಕಾರ, ಅವರ ಮೇಲೆ ನಗರೀಕರಣದ ಪ್ರಭಾವ ಮತ್ತು ಅವರ ಜೀವನ ವಿಧಾನದ ಮೇಲೆ ನಾನು ಒಂದು ಚಲನಚಿತ್ರವನ್ನು ಮಾಡಬೇಕೆಂದು ನಾನು ಭಾವಿಸಿದೆ. ಹೀಗಾಗಿ ಡೊಳ್ಳು ನಿರ್ದೇಶನ ಮಾಡಲು ಮುಂದಾಗಿದ್ದರು ಸಾಗರ್.

    ಕಿರುತೆರೆ ನಟ ಸುನೀಲ್ ಪುರಾಣಿಕ್ ಪುತ್ರ ನಿರ್ದೇಶಕ ಸಾಗರ್ ಪುರಾಣಿಕ್, ಒಡೆಯರ್ ಮೂವೀಸ್ ಬ್ಯಾನರ್ ಮೂಲಕ ಪವನ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ಮೊದಲ ನಿರ್ಮಾಣದ ಚಿತ್ರಕ್ಕೆ ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಪ್ರಶಸ್ತಿ ಬಂದಿರೊದಕ್ಕೆ ಈಡೀ ಚಿತ್ರತಂಡ ಸಂತಸದಲ್ಲಿದೆ. ಹಾಗೆಯೇ, ದಾದಾಸಾಹೇಬ್ ಫಾಲ್ಕೆ ಎಂ.ಎಸ್.ಕೆ ಟ್ರಸ್ಟ್ ವತಿಯಿಂದ 1 ಲಕ್ಷ ನಗದು ಬಹುಮಾನ ಸಿಕ್ಕಿದೆ.

    Dollu gets Dada Saheb Phalke award in Innovative International Film Festival

    ಸಿನಿಮಾದ ಟೈಟಲ್‌ ಹೇಳುವಂತೆ ಇದು ಡೊಳ್ಳು ಕುಣಿತದ ಸುತ್ತ ಸಾಗುವ ಸಿನಿಮಾ. ಡೊಳ್ಳು ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಚಿತ್ರದ ಜೋಡಿಗಳಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಚಿತ್ರದ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಹಾಗೇ ಅನಂತ್ ಕಾಮತ್ ಸಂಗೀತ ಡೊಳ್ಳು ಚಿತ್ರಕ್ಕಿದ್ದು, ಅಭಿಲಾಷ್ ಕಲಾಥಿ ಚಿತ್ರಕ್ಕೆ ಕ್ಯಾಮೆರಾ ಕೈ ಚಳಕ ತೋರಿದ್ದಾರೆ. ಮತ್ತು ಬಿ.ಎಸ್ ಕೆಂಪರಾಜು ಸಂಕಲನ, ಶ್ರೀನಿಧಿ ಡಿ.ಎಸ್ ಚಿತ್ರಕಥೆ ಮತ್ತು ಸಂಭಾಷಣೆ, ದೇವಿ ಪ್ರಕಾಶ್ ಕಲೆ,ನಿತಿನ್ ಲೊಕೋಸ್ ಶಬ್ಧ ವಿನ್ಯಾಸ ಮಾಡಿದ್ದಾರೆ ಈ ಡೊಳ್ಳು ಸಿನಿಮಾಗೆ.

    English summary
    Kannada movie Dollu, directed by Sagar Puranki has received the Dada Saheb Phalke Award for Best Kannada movie at the Innovative International film festival.
    Wednesday, October 27, 2021, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X