"ಪುಷ್ಪ" ನಂತರ ಟಾಲಿವುಡ್‌ನಲ್ಲಿ ಮಾರ್ಕೆಟ್ ಹೆಚ್ಚಿಸಿಕೊಂಡ ಡಾಲಿ

ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಕೂಡ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫಿಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಬ್ರೇಕ್​ ಮಾಡಿಕೊಂಡು ಬಂದಿತ್ತು. ಇದೀಗ ಒಟಿಟಿಯಲ್ಲೂ ಸಿನಿಮಾ ಸಖತ್​ ಸೌಂಡ್ ಮಾಡುತ್ತಿದೆ. 'ಪುಷ್ಪ' ಚಿತ್ರದಲ್ಲಿರುವ ಹಾಡುಗಳು ಕೂಡ ಸಖತ್​ ಸೌಂಡ್ ಮಾಡುತ್ತಿದೆ. ಪುಷ್ಪ ಸಿನಿಮಾವನ್ನು ಮೆಚ್ಚಿಕೊಂಡ ಅದೆಷ್ಟೋ ಅಭಿಮಾನಿಗಳು ಇದೀಗ ಪುಷ್ಪ ಪಾರ್ಟ್ 2 ಗಾಗಿ ಎದುರುನೋಡುತ್ತಿದ್ದಾರೆ. ಪುಷ್ಪ 2 ಸಿನಿಮಾ ಹೇಗೆ ಇರಲಿದೆ, ಯಾವ ರೀತಿ ಮೂಡಿ ಬರಲಿದೆ, ಪುಷ್ಪರಾಜ್ ಹೇಗೆ ಕಾಣಿಸಿಕೊಳ್ಳಲಿದ್ದಾನೆ ಎಂಬ ಬಗ್ಗೆ ಹಲವು ಕುತೂಹಲಗಳನ್ನು ಇಟ್ಟುಕೊಂಡು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚಿತವಾಗಿಯೇ ಪುಷ್ಪ 2 ಚಿತ್ರಕ್ಕೆ ಇದೀಗ ಬೇಡಿಕೆ ಹೆಚ್ಚಾಗುತ್ತಿದೆ.

Recommended Video

ಡಾಲಿಗೆ ಇದರ ಮೇಲೆ ಲವ್ ಆಗಿದ್ಯಂತೆ..!! | Dolly Dhananjay is in love..! | Filmibeat Kannada

ಈಗಾಗಲೇ ಗೊತ್ತಿರುವವಂತೆ ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಬಾಲಿವುಡ್‌ ನಿರ್ಮಾಪಕರು ಅಲ್ಲು ಅರ್ಜುನ್‌ಗೆ ಸಿನಿಮಾ ಮಾಡಲು ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ. ಇನ್ನು ನಟಿ ಸಮಂತಾ ಪುಷ್ಪ ಚಿತ್ರದಲ್ಲಿ ಮೊದಲ ಐಟಂ ಸಾಂಗ್ ಮಾಡಿ ಎಲ್ಲರ ಮನಸ್ಸು ಕದ್ದಿದ್ದರು. ಸಮಂತಾ ಅವರ ಐಟಂ ಸಾಂಗು ಎಲ್ಲೆಡೆ ಸೌಂಡ್ ಮಾಡಿತ್ತು. ಹೀಗಾಗಿ ಸಮಂತಾಗೆ ಬೇಡಿಕೆ ಮತ್ತಷ್ಟು ಹೆಚ್ಚಿದ್ದು, ಬಾಲಿವುಡ್‌ನಿಂದಲೂ ಅವಕಾಶಗಳು ಹರಿದು ಬರುತ್ತಿದೆ. ಇವರ ಬೆನ್ನಲ್ಲೆ ಈಗ ಪುಷ್ಪ ಚಿತ್ರದಲ್ಲಿ ನಟಿಸಿ ಕಮಾಲ್ ಮಾಡಿದ್ದ ಕನ್ನಡದ ನಟ ಡಾಲಿಗೂ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಪುಷ್ಪ ಚಿತ್ರದ ಬಳಿಕ ತನ್ನ ವ್ಯಾಲ್ಯೂ ಹೆಚ್ಚಿಸಿಕೊಂಡಿರುವ ಧನಂಜಯ್‌ ನಟಿಸಿರುವ ಸಿನಿಮಾಗಳಿಗೂ ಬೇಡಿಕೆ ಬಂದಿದೆ.

ಹೌದು, ಪುಷ್ಪ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಡಾಲಿ ಮೋಡಿ ಮಾಡಿದ್ರು. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಲಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ ಮೊದಲ ನಿರ್ಮಾಣದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಪುಷ್ಪ ಸಿನಿಮಾದಿಂದ ಟಾಲಿವುಡ್‌ನಲ್ಲಿ ತನ್ನ ಮಾರ್ಕೆಟ್ ಹೆಚ್ಚಿಸಿಕೊಂಡಿದ್ದ ಡಾಲಿಯ ಬಡವ ರಾಸ್ಕಲ್ ಚಿತ್ರಕ್ಕೂ ಇದೀಗ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಭಾರಿ ಮೊತ್ತಕ್ಕೆ ಬಡವ ರಾಸ್ಕಲ್ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದ್ದು, ಈಗಾಗಲೇ ತೆಲುಗಿನಲ್ಲಿ ಬಡವ ರಾಸ್ಕಲ್ ಚಿತ್ರದ ಡಬ್ಬಿಂಗ್ ಕೂಡ ಆರಂಭವಾಗಿದೆ. ಆದಷ್ಟು ಬೇಗ ಬಡವ ರಾಸ್ಕಲ್ ತೆಲುಗು ಡಬ್ಬಿಂಗ್ ವರ್ಷನ್ ರಿಲೀಸ್ ಕೂಡ ಆಗಲಿದೆ ಯಂತೆ.

Dolly Dhanajay Is Getting Market in Tollywood After Pushpa Film.

ಮತ್ತೊಂದು ವಿಚಾರ ಏನಪ್ಪ ಅಂದರೇ ಬಡವ ರಾಸ್ಕಲ್ ತಮಿಳು ಒಟಿಟಿಗೂ ಸೇಲ್ ಆಗಿದ್ದು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ತಮಿಳು ವರ್ಸನ್ ಬಡವ ರಾಸ್ಕಲ್ ಕೂಡ ಬಿಡುಗಡೆಯಾಗಲಿದೆ. ಹೀಗೆ ಒಂದರ ನಂತರ ಮತ್ತೊಂದು ಎಂಬಂತೆ ಬಡವ ರಾಸ್ಕಲ್ ಯಶಸ್ಸನ್ನು ಪಡೀತಾ ಇದ್ದು, ಇದು ಡಾಲಿ ಧನಂಜಯ್ ಶ್ರಮಕ್ಕೆ ಸಿಗುತ್ತಿರುವ ಫಲವೇ ಹೌದು. ಸಾಕಷ್ಟು ಕಷ್ಟ ಪಟ್ಟು ಚಿತ್ರರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಧನಂಜಯ್ ಹೆಸರು ಈಗ ರಾಜ್ಯ, ನೆರೆ ರಾಜ್ಯಗಳಲ್ಲೂ ಕೇಳಿ ಬರುತ್ತಿದೆ. ಹೀಗಾಗಿ ಧನಂಜಯ್‌ ಕೂಡ ಈ ಸಂತಸದ ಕ್ಷಣವನ್ನು ಆನಂದಿಸುತ್ತಿದ್ದಾರೆ.

ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತು ಮಧ್ಯಮ ವರ್ಗ ಕುಟುಂಬದ ಶಂಕರ್ (ಧನಂಜಯ್) ನಡುವೆ ಪ್ರೇಮ ಬೆಳೆದು ಹಲವು ತಿರುವು ಪಡೆದು ಇವರಿಬ್ಬರು ಒಂದಾಗಲಿದ್ದಾರೆಯೇ ಎಂಬ ಪ್ರೇಮ ಕತೆ ಹಾಗೂ ಜೀವನದ ಕುರಿತು ಹಲವು ಹೊಂದಿರುವ ಈ ಚಿತ್ರವೂ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು ಜನರಿಂದ ಮೆಚ್ಚುಗೆ ಪಡೆದಿದೆ. ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ರೊಮ್ಯಾಂಟಿಕ್ ಡ್ರಾಮದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಕೂಡ ಬಣ್ಣಹಚ್ಚಿದ್ದಾರೆ.

More from Filmibeat

English summary
Badava Rascal movie is in huge success. Daali Dhananjay's badava rascal dubbing rights sold for tollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X