For Quick Alerts
  ALLOW NOTIFICATIONS  
  For Daily Alerts

  ಧನಂಜಯ್ ಅಭಿನಯದ 'ಹೆಡ್‌ ಬುಷ್' ಸಿನಿಮಾ ಪರೋಕ್ಷವಾಗಿ ಟಾಂಗ್ ಕೊಟ್ಟ ಜಯರಾಜ್ ಸೊಸೆ!

  |

  ಕನ್ನಡ ಚಿತ್ರರಂಗದಲ್ಲೀಗ ವಿಭಿನ್ನ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಒಂದ್ಕಡೆ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರುತ್ತಿದ್ದರೆ, ಇನ್ನೊಂದು ಕಡೆ ವಿಭಿನ್ನ ಕಾಂಸೆಪ್ಟ್ ಸಿನಿಮಾ ರಿಲೀಸ್ ಆಗುತ್ತಿವೆ. ಸದ್ಯ ಭೂಗತಲೋಕದ ಕಥೆಯನ್ನು ಹೇಳಲು ಹೊರಟ ಸಿನಿಮಾ 'ಹೆಡ್ ಬುಷ್' ಬಿಡುಗಡೆಗೆ ಸಜ್ಜಾಗಿದೆ.

  ಡಾಲಿ ಧನಂಜಯ್ ಅಭಿನಯದ 'ಹೆಡ್ ಬುಷ್' ಅಂಡರ್‌ವರ್ಲ್ಡ್ ಮಾಜಿ ಡಾನ್ ಜಯರಾಜ್ ಸ್ಟೋರಿಯನ್ನು ಆಧರಿಸಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದಿದ್ದು, ಭರ್ಜರಿಯಾಗಿ ಪ್ರಚಾರ ಆರಂಭ ಆಗಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿರೋದ್ರಿಂದ ನಿರೀಕ್ಷೆಗಳು ದುಪ್ಪಟ್ಟಾಗಿವೆ.

  'ಪುಷ್ಪ' ಬಳಿಕ ಡಾಲಿಗೆ ತೆಲುಗಿನಿಂದ ಮತ್ತೊಂದು ಅವಕಾಶ'ಪುಷ್ಪ' ಬಳಿಕ ಡಾಲಿಗೆ ತೆಲುಗಿನಿಂದ ಮತ್ತೊಂದು ಅವಕಾಶ

  ಹೆಡ್ ಬುಷ್ ಗಮನ ಸೆಳೆಯುತ್ತಿದೆ ಅನ್ನೋದೇನೋ ನಿಜ. ಆದರೆ, ಜಯರಾಜ್ ಕುಟುಂಬ ಈ ಸಿನಿಮಾ ವಿರುದ್ಧ ಸಿಡಿದೆದ್ದಿದೆ. ಹಾಗಂತ ಇದು ಮೊದಲೇನಲ್ಲ. ಈ ಹಿಂದೆ ಕೂಡ 'ಹೆಡ್ ಬುಷ್' ಸಿನಿಮಾ ವಿರುದ್ಧ ತಿರುಗಿಬಿದ್ದಿದ್ದರು. ಈಗ ಜಯರಾಜ್ ಸೊಸೆ ಇಂಪನಾ ಧನಂಜಯ್ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ.

  ಧನಂಜಯ್ ರೆಟ್ರೋ ಲುಕ್

  ಧನಂಜಯ್ ರೆಟ್ರೋ ಲುಕ್

  ಧನಂಜಯ್ 'ಹೆಡ್ ಬುಷ್' ಸಿನಿಮಾದ ಹೀರೊ ಅಷ್ಟೇ ಅಲ್ಲ. ಈ ಸಿನಿಮಾದ ನಿರ್ಮಾಪಕರು ಕೂಡ ಇವರೇನೆ. ಹೀಗಾಗಿ ಹೆಚ್ಚು ಕಾಳಜಿ ತೆಗೆದುಕೊಂಡು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಧನಂಜಯ್ ರೆಟ್ರೋ ಲುಕ್‌ನಲ್ಲಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ರಾಜ್‌ ಕಪ್ ಆಡಲು ದುಬೈಗೆ ಹೊರಟಿದ್ದ ಡಾಲಿ ರೆಟ್ರೋ ಲುಕ್ ನಲ್ಲಿಯೇ ಪ್ರಯಾಣ ಮಾಡಿದ್ದರು. ಈ ಫೋಟೊಗಳು ಹಾಗೂ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಮತ್ತೆ ಜಯರಾಜ್ ಪುತ್ರ ಹಾಗೂ ಸೊಸೆ ಸಿನಿಮಾ ತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ.

  ಯುವ ದಸರಾ ಉದ್ಘಾಟನೆ: ಮಿಂಚು ಹರಿಸಿದ ಡಾಲಿ ಧನಂಜಯ್ಯುವ ದಸರಾ ಉದ್ಘಾಟನೆ: ಮಿಂಚು ಹರಿಸಿದ ಡಾಲಿ ಧನಂಜಯ್

  'ಹೆಡ್ ಬುಷ್' ಸಿನಿಮಾ ವಿರುದ್ಧ ಕಿಡಿ

  'ಹೆಡ್ ಬುಷ್' ಸಿನಿಮಾ ವಿರುದ್ಧ ಕಿಡಿ

  'ಹೆಡ್ ಬುಷ್' ಸಿನಿಮಾ ಭೂಗತ ಲೋಕದ ದೊರೆ ಎನಿಸಿಕೊಂಡಿದ್ದ ಜಯರಾಜ್ ಜೀವನ ಚರಿತ್ರೆ ಹಿನ್ನೆಲೆ ಎನ್ನಲಾಗಿದೆ. ಹೀಗಾಗಿ ಜಯರಾಜ್ ಪುತ್ರ ಅಜಿತ್ ಹಿಂದಿನಿಂದಲೂ ಈ ಸಿನಿಮಾ ಬಗ್ಗೆ ವಿರೋಧಿಸುತ್ತಲೇ ಇದ್ದಾರೆ. ಇದೀಗ ಜಯರಾಜ್ ಅವರ ಸೊಸೆ ಇಂಪನಾ ಅಜಿತ್ ಜಯರಾಜ್ ಚಿತ್ರತಂಡದ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ " ರಾಜ ಯಾವಾಗಲೂ ರಾಜನಾಗಿಯೇ ಇರುತ್ತಾರೆ. ಅವರಂತೆ ಆಗಲು ಯಾರಿಂದಲೂ ಸಾಧ್ಯವಿಲ್ಲ." ಎಂದು ಬರೆದುಕೊಂಡಿದ್ದಾರೆ. ಈ ಮಧ್ಯೆ ಜಯರಾಜ್ ಸಹೋದರಿ ಹೇಮಾವತಿ ತಿರುಗೇಟು ನೀಡಿದ್ದಾರೆ.

  ಕಥೆಯಲ್ಲಿ ಟ್ವಿಸ್ಟ್ ಜಯರಾಜ್ ಸಹೋದರಿ ಬೆಂಬಲ

  ಕಥೆಯಲ್ಲಿ ಟ್ವಿಸ್ಟ್ ಜಯರಾಜ್ ಸಹೋದರಿ ಬೆಂಬಲ

  'ಹೆಡ್ ಬುಷ್' ತಂಡದ ವಿರುದ್ಧ ಜಯರಾಜ್ ಪುತ್ರ ಅಜಿತ್ ಹಾಗೂ ಸೊಸೆ ಇಂಪನಾ ತಿರುಗಿಬಿದ್ದರೆ, ಇನ್ನೊಂದು ಕಡೆ ಜಯರಾಜ್ ಸಹೋದರಿ ಬೆಂಬಲಿಸಿದ್ದಾರೆ. 'ಹೆಡ್ ಬುಷ್' ಸಿನಿಮಾವನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. " ನಿಜವಾಗಲೂ ಜಯರಾಜ್ ಹಾಗೂ ಅವರ ಬದುಕನ್ನು ಜಗತ್ತಿಗೆ ತೋರಿಸಲು ಹೊರಟಿರೋರೇ ನಿಜವಾದ ಅಣ್ಣತಮ್ಮಂದಿರು. ಅವರು ಹೆಡ್ ಬುಷ್ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ." ಎಂದು ಹೇಮಾವತಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ಮಲ್ಟಿಸ್ಟಾರರ್ ಸಿನಿಮಾ

  ಮಲ್ಟಿಸ್ಟಾರರ್ ಸಿನಿಮಾ

  'ಹೆಡ್ ಬುಷ್‌' ಸಿನಿಮಾದ ಶೂಟಿಂಗ್ ಮುಗಿದು, ಬಿಡುಗಡೆಗೆ ಸಜ್ಜಾಗುತ್ತಿದೆ. ಡಾಲಿ ಧನಂಜಯ್ ಹಾಗೂ ರಾಮ್ಕೊ ಸೋಮಣ್ಣ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶೂನ್ಯ ಈ ಚಿತ್ರದ ನಿರ್ದೇಶಕ. ಡಾಲಿ ಜೊತೆ ಪಾಯಲ್ ರಜಪೂತ್, ರವಿಚಂದ್ರನ್, ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ.

  English summary
  Don Jayaraj Son And Daughter in Law Indirectly Opposed Dhananjay Starrer Head Bush, Know More.
  Thursday, September 22, 2022, 20:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X