»   » ಸುದೀಪ್ ಆಯ್ತು, ಈಗ ಉಪೇಂದ್ರ ಕಡೆಯಿಂದ 'ಹೊಸ ಕ್ರಾಂತಿ'.!

ಸುದೀಪ್ ಆಯ್ತು, ಈಗ ಉಪೇಂದ್ರ ಕಡೆಯಿಂದ 'ಹೊಸ ಕ್ರಾಂತಿ'.!

Posted By:
Subscribe to Filmibeat Kannada
upendra express his opinion about birthday celebration | Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಸದ್ಯ, ಸಿನಿಮಾಗಳಿಗೆ ಬ್ರೇಕ್ ಹಾಕಿ 'ಪ್ರಜಾಕೀಯ'ದಲ್ಲಿ ಕಂಪ್ಲೀಟ್ ಆಗಿ ತೊಡಗಿಕೊಂಡಿದ್ದಾರೆ. ತಮ್ಮ ಕನಸಿನ 'ಪ್ರಜಾಕೀಯ'ವನ್ನ ಹಂತಹಂತವಾಗಿ ಪ್ರಜೆಗಳ ಮುಂದೆ ಇಡುತ್ತಾ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ.

ಹೀಗಿರುವಾಗ, ಉಪೇಂದ್ರ ಅವರು ಒಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ. ಕಿಚ್ಚ ಸುದೀಪ್ ನಂತರ ಉಪೇಂದ್ರ ಅವರ ಕೂಡ ತಮ್ಮ ಜೀವನದಲ್ಲಿ ಹೊಸ ಕ್ರಾಂತಿಯನ್ನ ಅನುಸರಿಸುತ್ತಿದ್ದಾರೆ.

ಅಷಕ್ಕೂ, ಉಪೇಂದ್ರ ಕೈಗೊಂಡಿರುವ ನಿರ್ಧಾರವೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ......

ಅದ್ಧೂರಿ ಬರ್ತ್ ಡೇಗೆ ಉಪ್ಪಿ ಬ್ರೇಕ್

ಸ್ಟಾರ್ ನಟರ ಹುಟ್ಟುಹಬ್ಬ ಅಂದ್ರೆ, ಅವರ ಅಭಿಮಾನಿಗಳು ಕೇಕ್, ಹಾರ, ಕಟೌಟ್ ಗಳು, ಹೀಗೆ ಉತ್ಸವ ರೀತಿಯಲ್ಲಿ ಆಚರಿಸುತ್ತಾರೆ. ಇಂತಹ ಹುಟ್ಟುಹಬ್ಬವನ್ನ ಈಗ ಉಪೇಂದ್ರ ಅವರು ವಿರೋಧಿಸಿದ್ದಾರೆ.

ಸರಳ ಹುಟ್ಟುಹಬ್ಬಕ್ಕೆ ಒಪ್ಪಿಗೆ

ಇನ್ನು ಮುಂದೆ ತಮ್ಮ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಲು ಉಪೇಂದ್ರ ನಿರ್ಧರಿಸಿದ್ದಾರೆ. ಉಪ್ಪಿಯ ಬರ್ತ್ ಡೇಗೆ ಕೆಲವೇ ದಿನಗಳು ಬಾಕಿಯಿರುವಾಗ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

ಉಪೇಂದ್ರ ಹೇಳಿದ್ದೇನು?

''ಪ್ರೀತಿಯ ಅಭಿಮಾನಿಗಳೇ ದಯವಿಟ್ಟು ಹಾರ, ಕೇಕ್, ಬ್ಯಾನರ್ ಗಳಿಗೆ ಅನವಶ್ಯಕ ಖರ್ಚು ಮಾಡದೆ ನಿಮ್ಮ ಪ್ರೀತಿ ಶುಭಾಶಯಗಳೊಂದಿಗೆ ಬಂದು ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ'' - ಉಪೇಂದ್ರ, ನಟ

ಅಭಿಮಾನಿಗಳಿಗೆ ಉಪೇಂದ್ರ ಸಿಕ್ತಾರೆ!

ಅದ್ಧೂರಿ ಹುಟ್ಟುಹಬ್ಬವನ್ನ ತಿರಸ್ಕರಿಸಿರುವ ಉಪೇಂದ್ರ ಅವರು ಬರ್ತ್ ಡೇ ದಿನ ಅಭಿಮಾನಿಗಳಿಗೆ ಸಿಗಲಿದ್ದಾರೆ. ತಮ್ಮ ಮನೆಯಲ್ಲೇ ಇದ್ದು ಅಭಿಮಾನಿಗಳನ್ನ ಭೇಟಿ ಮಾಡಲಿದ್ದಾರೆ. ಆದ್ರೆ, ಕೇಕ್, ಹಾರ, ಖರ್ಚು ಬೇಡವೆಂದಿದ್ದಾರೆ ಅಷ್ಟೇ.

ಅದ್ಧೂರಿ ಬರ್ತ್ ಡೇಗೆ NO ಎಂದಿದ್ದ ಕಿಚ್ಚ

ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದೆ ಅದ್ಧೂರಿ ಹುಟ್ಟುಹಬ್ಬಕ್ಕೆ ವಿದಾಯ ಹೇಳಿದ್ದರು. ಈಗ ಉಪೇಂದ್ರ ಕೂಡ ತಮ್ಮ ಜನುಮದಿನದ ವಿಚಾರದಲ್ಲಿ ಹೊಸ ನಿರ್ಣಯ ಕೈಗೊಂಡಿದ್ದಾರೆ.

ಸೆಪ್ಟಂಬರ್ 18ಕ್ಕೆ ಉಪ್ಪಿ ಸಂಭ್ರಮ

ಸೆಪ್ಟಂಬರ್ 18 ರಂದು ಸೂಪರ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಅದೇ ದಿನ ಡಾ.ವಿಷ್ಣುವರ್ಧನ್ ಮತ್ತು ನಟಿ ಶ್ರುತಿ ಅವರು ಜನುಮದಿನ ಕೂಡ ಇದೆ.

English summary
Real Star Upendra has taken his twitter account to express his opinion about 'birthday celebration'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada