ನನಗೆ ಬೇರೆ ಐಡೆಂಟಿಟಿ ಇಲ್ವಾ? ಎಲ್ಲ ಕಡೆ ಬರೀ ಅದೇ ಇರುತ್ತೆ - ಪರ್ಸನಲ್ ಪ್ರಶ್ನೆಗೆ ಕಿಡಿ ಕಾರಿದ ಅಮೃತಾ ಅಯ್ಯಂಗಾರ್

ಸಾಮಾನ್ಯವಾಗಿ ಚಿತ್ರರಂಗದ ತಾರೆಯರನ್ನು ಪಬ್ಲಿಕ್ ಫಿಗರ್ ಎಂದು ಕರೆಯಲಾಗುತ್ತೆ. ಆದರೆ ಅದರರ್ಥ ಅವರು ಪಬ್ಲಿಕ್ ಪ್ರಾಪರ್ಟಿ ಅಲ್ಲ. ಅವರ ಹಾವ ಭಾವ ನಡೆ ನುಡಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುವುದು, ಅದರ ಕುರಿತು ಮಾತನಾಡುವುದು ಓಕೆ. ಆದರೆ.. ಅವರಿಗೆ ವೈಯಕ್ತಿಕ ಜೀವನವೇ ಇರುವುದಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು ಕಲ್ಪನೆ.

ಸೆಲೆಬ್ರೇಟಿ ಅಂದ ತಕ್ಷಣ ಅವರ ಖಾಸಗಿ ಬದುಕಿನ ಕುರಿತು ಮಾತನಾಡುವುದು, ತೀರಾ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದು, ಕೆಣಕುವುದು, ಕಿಂಡಲ್ ಮಾಡೋದು, ಕ್ರೀಯಾಶೀಲತೆಯ ಹೆಸರಿನಲ್ಲಿ ತೀರಾ ಅಸಹ್ಯವಾಗಿ ಟ್ರೋಲ್ ಮಾಡುವುದನ್ನೆಲ್ಲಾ ಮಾಡಬಾರದು. ಆದರೆ ಈಗ ಒಬ್ಬರ ವೈಯಕ್ತಿಕ ಜೀವನವನ್ನು ಅತಿಯಾಗಿ ಕೆದಕುವುದೇ ಕೆಲವರ ಪಾಲಿಗೆ ದೊಡ್ಡ ಸಾಧನೆ. ಹೀಗಾದಾಗ ಅಕ್ಕರೆಯ ಸಂಕೇತ ‌,‌ ಮಮತೆಯ ಸಹಿಷ್ಣುತೆ , ಸಹನಾಮೂರ್ತಿಯಾದವರು ಕೂಡ ಸಿಡಿದೇಳುತ್ತಾರೆ. ಉದಾಹರಣೆಗೆ ಅಮೃತಾ ಐಯ್ಯಂಗಾರ್.

Don t I Have My Own Identity Amrutha Iyengar Slams Media for Breakup Obsession in Viral Outburst

ಹೌದು, ಅಮೃತಾ ಅಯ್ಯಂಗಾರ್.. ಕನ್ನಡದ ಕರೀನಾ ಕಪೂರ್. ''ಲವ್ ಮಾಕ್ಟೇಲ್''.. ''ಪಾಪ್ ಕಾರ್ನ್‌ ಮಂಕಿ ಟೈಗರ್''.. ''ಬಡವ ರಾಸ್ಕಲ್''.. ''ಲವ್ ಮಾಕ್ಟೇಲ್ 2''.. ''ಗುರುದೇವ ಹೊಯ್ಸಳ''.. ''ಲವ್ ಮಾಕ್ಟೇಲ್ 3''.. ಇವರ ಕೆಲ ಜನಪ್ರಿಯ ಚಿತ್ರಗಳು.

ಇನ್ನೂ ಅಮೃತಾ ಅಯ್ಯಂಗಾರ್ ಕೇವಲ ಗ್ಲಾಮರ್ ಗೊಂಬೆಯಲ್ಲ. ಅಭಿನಯ ಚತುರೆ ಕೂಡ ಹೌದು. ತಮ್ಮ ವೃತ್ತಿ ಬದುಕಿನಲ್ಲಿ ಅಮೃತಾ ಈ ಮಾತನ್ನು ಸಾಬೀತು ಮಾಡಿದ್ದಾರೆ ಕೂಡ.

ಆದರೂ ಕೂಡ ಕೆಲವರಿಗೆ ಅಮೃತಾ ಅವರ ಈ ಸಾಧನೆ ಕಣ್ಣಿಗೆ ಕಾಣಿಸುವುದಿಲ್ಲ. ಈ ಕುರಿತು ಪ್ರಶ್ನೆಗಳು ಹೊಳೆಯುವುದಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಅಮೃತಾ ಅಯ್ಯಂಗಾರ್ ಎಲ್ಲಿಯೇ ಹೋಗಲಿ ಅವರಿಗೆ ಅವರ ಚಿತ್ರ ಮತ್ತು ಪಾತ್ರದ ಬದಲು ಬ್ರೇಕಪ್ ಪ್ರಶ್ನೆಗಳನ್ನೇ ಕೇಳಲಾಗುತ್ತೆ.

ತಮ್ಮ ಪ್ರೇಮ ವೈಫಲ್ಯ, ಆ ಭಾವನಾತ್ಮಕ ನೋವು, ಹತಾಶೆ, ಅಸಹಾಯಕತೆಯನ್ನು ಹಲವು ಬಾರಿ ಹಲವು ಸಂದರ್ಶನಗಳಲ್ಲಿ ಅಮೃತಾ ಅಯ್ಯಂಗಾರ್ ಹೇಳಿದ್ದರೂ ಕೂಡ ಕೆಲವರಿಗೆ ಇನ್ನೂ ಸಮಾಧಾನ ಆಗಿಲ್ಲ. ಹೀಗಾಗಿಯೇ ತಮ್ಮ ಅಸಮಾಧಾನವನ್ನು ಅಮೃತಾ ಅಯ್ಯಂಗಾರ್ ಸದ್ಯ ಹೊರ ಹಾಕಿದ್ದಾರೆ.

Don t I Have My Own Identity Amrutha Iyengar Slams Media for Breakup Obsession in Viral Outburst

ಈ ಕುರಿತು ''ಬಾಸ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಮೃತಾ ಅಯ್ಯಂಗಾರ್ ನನ್ನ ಬ್ರೇಕಪ್ ವಿಚಾರವನ್ನೇ ನನ್ನ ಐಡೆಂಟಿಟಿ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ನನ್ನ ಬ್ರೇಕಪ್ ಕಥೆಯನ್ನೇ ಯಾಕೆ ಹೈಲೈಟ್‌ ಮಾಡ್ತಾರೆ..? ಅಂತಹದ್ದೇನಿದೆ..? ಎಂದು ಪ್ರಶ್ನೆ ಕೇಳಿದ್ಧಾರೆ. ಲವ್ ಫೇಲ್ಯೂರ್ ಕಾಮನ್ ವಿಷಯ ಅದು. ಆದರೆ ನನಗೆ ಯಾಕೆ ಈ ಪ್ರಶ್ನೆ ಕೇಳ್ತಾರೆ ಎಂದು ಕೇಳಿರುವ ಅಮೃತಾ ಅಯ್ಯಂಗಾರ್ ಯೂಟ್ಯೂಬ್‌ ಓಪನ್‌ ಮಾಡಿ ನೋಡಿದ್ರೆ ಸಾಕು ನನಗೇನು ಬೇರೆ ಗುರುತು ಇಲ್ವಾ..? ನಾನು ಎಷ್ಟೊಂದು ಸಿನಿಮಾಗಳನ್ನ ಮಾಡಿದ್ದೇನೆ. ಎಷ್ಟೊಂದು ಪಾತ್ರಗಳನ್ನ ಮಾಡಿದ್ದೇನೆ. ಇದೆಲ್ಲವನ್ನೂ ಬಿಟ್ಟು ಯಾವಾಗಲೂ ಯಾಕೆ ಇದೇ ಪ್ರಶ್ನೆ ಕೇಳ್ತಾರೆ ಅಂತ ತುಂಬಾ ಬೇಜಾರಾಗುತ್ತೆ ಎಂದಿದ್ದಾರೆ.


ನನ್ನ ಅಮ್ಮ ನನ್ನ ಹಲವು ಸಂದರ್ಶನಗಳನ್ನು ನೋಡುತ್ತಿರುತ್ತಾರೆ, ಆದರೆ ಹೀಗೆ ನೋಡಬೇಕಾದರೆ ಥಂಬ್‌ನೇಲ್‌ನಲ್ಲಿ ಬರೀ ಅದೇ ಇರುತ್ತೆ. ಆಗ ಅಂದುಕೊಂಡೆ - ಬೇರೆ ಐಡೆಂಟಿಟಿ ಇಲ್ವಾ ನನಗೆ ಅಂತ. ಅದು ನನಗೆ ತುಂಬಾ ಬೇಜಾರಾಗುವಂತಹ ವಿಷಯ ಎಂದು ಹೇಳಿರುವ ಅಮೃತಾ ಅಯ್ಯಂಗಾರ್ ಯಾರಾದರೂ ಪ್ರಶ್ನೆ ಕೇಳಿದಾಗ, ನಾನು ನೇರವಾಗಿಯೇ ಉತ್ತರ ಕೊಡ್ತೀನಿ. ನೀವು ಯಾರನ್ನಾದರೂ ಪ್ರೀತಿ ಮಾಡಿದ್ದೀರಾ ಅಂತ ಕೇಳ್ತಾರೆ. ಅದು ಎಲ್ರಿಗೂ ಆಗುವಂತಹ ಸಹಜ ವಿಷಯ. ಬ್ರೇಕಪ್‌.. ಎಲ್ರಿಗೂ ಆಗಿರುತ್ತೆ ಎಂದು ಹೇಳಿದ್ಧಾರೆ. ಅಯ್ಯೋ ಇಲ್ಲ ನನಗೆ ಪ್ರೀತಿ ಆಗಿಲ್ಲ, ಬ್ರೇಕಪ್‌ ಆಗಿಲ್ಲ ಅಂತಂದರೆ ಯಾರಾದರೂ ನಂಬುತ್ತಾರಾ? ಡವ್‌ ಮಾಡ್ತಿದ್ಯ ಅಂತ ಮೆಸೇಜ್‌ ಹಾಕ್ತಾರೆ ಎಂದಿದ್ದಾರೆ.

ಮುಂದುವರೆದು ಯೂಟ್ಯೂಬ್‌ ಓಪನ್‌ ಮಾಡಿದ್ರೆ, ಅದೇ ಒಂದು ಐಡೆಂಟಿಟಿ ಆಗೋಗಿದ್ಯಲ್ಲ, ಅದು ತುಂಬಾ ಇರಿಟೇಟ್‌ ಆಗುವಂತಹ ಪ್ರಶ್ನೆ ನನಗೆ ಎಂದು ಹೇಳಿರುವ ಅಮೃತಾ ಅಯ್ಯಂಗಾರ್ ನೋ ಕಾಮೆಂಟ್ಸ್‌ ಅನ್ನೋದು ಸುಲಭ. ನನಗೆ ಯಾರಾದರೂ ಪ್ರಶ್ನೆ ಮಾಡಿದ್ರೆ, ಅದಕ್ಕೆ ನಾನು ಉತ್ತರ ಕೊಡ್ಲೇಬೇಕು. ಆ ವಿಷಯದಲ್ಲಿ ನಾನು ತುಂಬಾ ಸ್ಟ್ರೈಟ್‌ ಫಾರ್ವರ್ಡ್‌ ವ್ಯಕ್ತಿ ಎಂದು ಹೇಳಿದ್ಧಾರೆ. ಬ್ರೇಕಪ್ ವಿಚಾರವನ್ನೇ ಐಡೆಂಟಿಟಿ ಮಾಡಿಬಿಟ್ಟರೆ ತುಂಬಾ ಸಿಟ್ಟು ಬರುತ್ತೆ ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ಧಾರೆ.

More from Filmibeat

English summary
"Don’t I have an identity?" Amrutha Iyengar slams media obsession with her personal life. See the viral reaction from the Love Mocktail 3 star on heartbreaks and moving on.
Read more about: break up amrutha filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X