'ಕೆಜಿಎಫ್' ನಟಿ ತಮನ್ನಾಗೆ ಹೀಗೆಂದು ಕರೆಯಬಾರದಂತೆ.!

Recommended Video

kgf Kannada Movie: ತೆಲುಗು, ತಮಿಳು ಹಾಗೂ ಆ ಕಡೆ ಹಿಂದಿಯಲ್ಲೂ ಮೋಡಿ ಮಾಡಿರುವ ನಟಿ ಬಹುಭಾಷಾ ತಾರೆ ತಮನ್ನಾ

ಬಹುಭಾಷಾ ತಾರೆ ತಮನ್ನಾ ಭಾಟಿಯ ತೆಲುಗು, ತಮಿಳು ಹಾಗೂ ಆ ಕಡೆ ಹಿಂದಿಯಲ್ಲೂ ಮೋಡಿ ಮಾಡಿರುವ ನಟಿ. ಈಗ ಕೆಜಿಎಫ್ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಸ್ಯಾಂಡಲ್ ವುಡ್ ಗೂ ಪ್ರವೇಶ ಮಾಡಿದ್ದಾರೆ.

ತಮನ್ನಾ ಸೌಂದರ್ಯಕ್ಕೆ ಫಿದಾ ಆಗಿರುವ ಅಭಿಮಾನಿಗಳು ಹಾಗೂ ಸಿನಿಮಾ ಮಂದಿ ಅವರನ್ನ 'ಮಿಲ್ಕಿಬ್ಯೂಟಿ' ಎಂದು ಕರೆಯುತ್ತಾರೆ. ಯಾಕಂದ್ರೆ, ತಮನ್ನಾ ಅವರ ಚರ್ಮ ಹಾಲಿನ ಬಣ್ಣ ಹೊಂದಿದೆ. ಹಾಗಾಗಿ, ಎಲ್ಲರೂ ಅವರನ್ನ ಅದೇ ಹೆಸರಿನಿಂದ ಕರೆಯುತ್ತಾರೆ.

ಬಟ್, ಹೀಗೆಂದು ಕರೆದರೇ ತಮನ್ನಾಗೆ ಕೋಪ ಬರುತ್ತಂತೆ. 'ಮಿಲ್ಕಿಬ್ಯೂಟಿ' ಎಂದರೇ ಬಣ್ಣದ ಆಧಾರದಲ್ಲಿ ಆ ಹೆಸರು ಹೇಳಲಾಗ್ತಿದೆ. ''ನನ್ನ ಚರ್ಮದ ಬಣ್ಣದ ಆಧಾರದಲ್ಲಿ ಆ ಹೆಸರು ಕರೆಯಲಾಗುತ್ತಿದೆ. ಬಣ್ಣದ ಆಧಾರದಲ್ಲಿ ಯಾರನ್ನ ಅಳೆಯಬಾರದು. ಸಿನಿಮಾ ಇಂಡಸ್ಟ್ರಿಯಲ್ಲಿ ಇದು ಹೆಚ್ಚಾಗಿದೆ. ಇದು ಸರಿಯಿಲ್ಲ'' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರಂತೆ.

Dont call me as a milky beauty

ತಮನ್ನಾ ಡ್ಯಾನ್ಸ್ ಮಾಡಿರುವ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ, ಅದೇ ದಿನ ತಮನ್ನಾ ಹುಟ್ಟುಹಬ್ಬ. ತೆಲುಗು ನಟ ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಅಭಿನಯದ 'ಎಫ್2' ಚಿತ್ರದಲ್ಲಿ ನಟಿಸಿದ್ದಾರೆ.

ಹಿಂದಿಯ ಕ್ವೀನ್ ರೀಮೇಕ್ 'ದಟ್ ಈಸ್ ಮಹಾಲಕ್ಷ್ಮಿ' ತೆಲುಗಿನಲ್ಲಿ ಬಿಡುಗಡೆಯಾಗಬೇಕಿದೆ. ಚಿರಂಜೀವಿ ಅವರ 151ನೇ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಹಾಗೂ 'ದೇವಿ-2' ಮತ್ತು ಕಾಮೋಶಿ ಚಿತ್ರಗಳಲ್ಲಿ ತಮನ್ನಾ ನಟಿಸುತ್ತಿದ್ದಾರೆ.

More from Filmibeat

English summary
'Dont call me as a milky beauty' says south actress tamanna bhatia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X