ಸಿನಿಮಾ ನೋಡುವ ಮೊದಲು 'ಕೆಜಿಎಫ್' ತಂಡದ ಕೋರಿಕೆ ಕೇಳಿ
Recommended Video

KGF Kannada Movie: ಸಿನಿಮಾ ನೋಡುವ ಮೊದಲು 'ಕೆಜಿಎಫ್' ತಂಡದ ಕೋರಿಕೆ ಕೇಳಿ | FILMIBEAT KANNADA
ಇಷ್ಟು ವರ್ಷದಿಂದ ಕಾಯುತ್ತಿದ್ದ 'ಕೆಜಿಎಫ್' ಸಿನಿಮಾ ಅಂತೂ ಬಿಡುಗಡೆ ಆಗುತ್ತಿದೆ. ಇದೇ ಶುಭ ಶುಕ್ರವಾರ ಸಿನಿಮಾ ಚಿತ್ರ ಮಂದಿರಕ್ಕೆ ಬರುತ್ತಿದೆ. ಬಿಡುಗಡೆಗೆ ಮೊದಲು 'ಕೆಜಿಎಫ್' ಚಿತ್ರತಂಡ ಒಂದು ಕೋರಿಕೆಯನ್ನ ಅಭಿಮಾನಿಗಳಲ್ಲಿ ಮಾಡಿಕೊಂಡಿದೆ.
ನಿರ್ಮಾಪಕ ವಿಜಯ್ ಕಿರಗಂಧೂರ್ ತಮ್ಮ ಟ್ವಿಟರ್ ಖಾತೆಯ ಮೂಲಕ ಕನ್ನಡ ಸಿನಿಮಾಭಿನಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 'ಕೆಜಿಎಫ್' ಸಿನಿಮಾದ ಹಿಂದೆ ನಾಲ್ಕು ವರ್ಷದ ಶ್ರಮ ಇದೆ. ಈ ಸಿನಿಮಾಗೆ ನಿಮ್ಮ ಪೂರ್ಣ ಪ್ರೋತ್ಸಾಹ ಬೇಕು. ಯಾರಾದರೂ, ಪೈರಸಿ ಮಾಡಿಸಿದರೆ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ. 8978650014 ಈ ನಂಬರ್ ಅನ್ನು ಸಹ ನೀಡಿದೆ.
'ಕೆಜಿಎಫ್' ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಬಿಡುಗಡೆ ಆಗುತ್ತಿರುವ ಕಾರಣ ಪೈರಸಿ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಚಿತ್ರತಂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಈಗಾಗಲೇ, ಸಿನಿಮಾದ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಯಶ್ ಅವರ ಈ ಮಹತ್ವಾಕಾಂಕ್ಷೆಯ ಸಿನಿಮಾ ನಾಲ್ಕು ದಿನಗಳಲ್ಲಿ ಬಿಡುಗಡೆಯಾಗಲಿದೆ.
More from Filmibeat
English summary
Rocking star Yash starrer 'KGF' kannada team requested to the audience to 'don't do piracy'


Click it and Unblock the Notifications











