twitter
    For Quick Alerts
    ALLOW NOTIFICATIONS  
    For Daily Alerts

    ದೈವ ಕೂಗುವುದನ್ನು ಅನುಕರಣೆ ಮಾಡಬೇಡಿ, ನಂಬಿಕೆಗೆ ಬೆಲೆ ಕೊಡಿ: ರಿಷಬ್ ಶೆಟ್ಟಿ ಮನವಿ

    By ಮಂಗಳೂರು ಪ್ರತಿನಿಧಿ
    |

    ದೈವ ಆಕರ್ಷಣೆಯಾದಾಗ ಮಾಡುವ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ ಎಂದು 'ಕಾಂತಾರ' ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ಹೇಳಿದ್ದಾರೆ.

    'ಕಾಂತಾರ' ಚಿತ್ರ ತಂಡ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸಿನಿಮಾದಲ್ಲಿ ನನ್ನ ಪಾತ್ರ ದೈವಾವೇಶದಲ್ಲಿ ಬೊಬ್ಬೆಯಿಡುವ ಒಂದು ದೃಶ್ಯವಿದೆ‌. ಸೋಶಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ಆಚಾರಣೆಯ ಭಾಗ, ನಂಬಿಕೆಯ ಸಂಗತಿಯಾಗಿದೆ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು ಎಂದು ಹೇಳಿದ ರಿಷಭ್ ಶೆಟ್ಟಿಯವರು ದಯವಿಟ್ಟು ಯಾರೂ ದೈವದಂತೆ ಕೂಗು ಹಾಕೋದನ್ನು ಯಾರೂ ಅನುಕರಣೆ ಮಾಡಬಾರದೆಂದು ಮನವಿ ಮಾಡಿದ್ದಾರೆ.

    'ಕಾಂತಾರ' ಸಿನಿಮಾವನ್ನು ನಿರ್ಮಿಸುವ ಮೊದಲೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಮೊದಲಾಗಿ ಕನ್ನಡದಲ್ಲೇ ಮಾಡಬೇಕೆಂಬ ಒತ್ತಾಸೆಯಿಂದ ಈ ಸಿನಿಮಾವನ್ನು ಕನ್ನಡದಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದೆ. ಇದೀಗ ಈ ಸಿನಿಮಾಕ್ಕೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತೋಷದ ವಿಚಾರ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ.

    ಇದೀಗ ಸಿನಿಮಾದ ಬಗ್ಗೆ ಎಲ್ಲೆಡೆ ಜನರು ಮಾತನಾಡತೊಡಗಿದ್ದು, ಬೇರೆ ಭಾಷೆಗಳಿಗೂ ಡಬ್ ಮಾಡಬೇಕೆಂಬ ಒತ್ತಾಯ ಕೇಳೊ ಬರುತ್ತಿದೆ‌. ಎರಡು ದಿನಗಳಲ್ಲಿ ಕಾಂತಾರ ಸಿನಿಮಾವನ್ನು ಇತರ ಭಾಷೆಗಳಿಗೂ ಡಬ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಹೌಸ್ ಫುಲ್ ಆಗಿ ಪ್ರದರ್ಶನ ಆಗೋದು, ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗೋದು ಕನಸಿನ ಮಾತು. ಆದರೆ ಕಾಂತಾರ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನಗೊಂಡು ಜನರು ಟಿಕೆಟ್ ಗಾಗಿ ಕಾಯುವ ಸ್ಥಿತಿ ನಿರ್ಮಾಣ ಆಗಿರೋದು ಸಂತೋಷದ ವಿಚಾರ. ಕಾಂತಾರ ಸಿನಿಮಾ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆ‌. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ನಾವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದ್ದೇವೆ‌. ಒಟ್ಟಿನಲ್ಲಿ ನಾವು ಈ ಸಿನಿಮಾ ಮಾಡಿದ್ದೇವೆ ಅನ್ನುವುದಕ್ಕಿಂತ, ಆ ದೈವವೇ ನಮ್ಮಿಂದ ಈ ಸಿನಿಮಾ ಮಾಡಿಸಿದೆ ಎನ್ನುವುದೇ ಸೂಕ್ತ ಎಂದು ರಿಷಬ್ ಹೇಳಿದ್ದಾರೆ.

    'ಲೀಲಾ' ಪಾತ್ರದಲ್ಲಿ ಸಪ್ತಮಿ ಗೌಡ

    'ಲೀಲಾ' ಪಾತ್ರದಲ್ಲಿ ಸಪ್ತಮಿ ಗೌಡ

    ಇನ್ನು ಸಿನಿಮಾ ನಾಯಕಿ 'ಲೀಲಾ' ಪಾತ್ರದಲ್ಲಿ ಸಪ್ತಮಿ ಗೌಡ ಖಡಕ್ ಹೀರೋಯಿನ್ ಇಮೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಧನಂಜಯ್ ಅಭಿನಯದ ಪಾಪ್​​ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಕಾಂತಾರ ಸಿನಿಮಾದ ಮೂಲಕ ಕನ್ನಡದಲ್ಲಿ ಎರಡನೇ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಕಾಂತಾರ ಸಿನಿಮಾದ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು 'ಇದು ತಮ್ಮ ಎರಡನೇ ಸಿನಿಮಾ. ಇದರಲ್ಲಿ ತಾನು ಫಾರೆಸ್ಟ್ ಆಫೀಸರ್ ಗಾರ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಇದು ಹಾಗೆ ಹೋಗಿ ಬಂದು ಹೋಗುವ ಪಾತ್ರವಲ್ಲ. ನನ್ನ ಪಾತ್ರಕ್ಕೆ ಅದರದ್ದೇ ಆದ ತೂಕ ಇದೆ' ಎಂದು ಹೇಳಿದ್ದಾರೆ.

    ನಟಿ ಸಪ್ತಮಿ ಗೌಡ ಮಾತು

    ನಟಿ ಸಪ್ತಮಿ ಗೌಡ ಮಾತು

    ಸಿನಿಮಾ ರಿಲೀಸ್ ಆದ ಬಳಿಕ ನನ್ನ ಲೀಲಾ ಪಾತ್ರ ಹಾಗೂ ಸಿಂಗಾರ ಸಿರಿ ಹಾಡಿಗೆ ಬಹಳಷ್ಟು ಜನರು ಪ್ರೀತಿ ತೋರಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ನಾನು ಮಂಗಳೂರು ಭಾಷೆಯನ್ನು ಕಲಿತು ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ. ಆದರೆ ಪ್ರೇಕ್ಷಕರು ನಾನು ಮಂಗಳೂರು ಹುಡುಗಿ ಅಂತಲೇ ನಂಬಿದ್ದಾರೆ‌. ಅಷ್ಟು ಚೆನ್ನಾಗಿ ಬಂದಿದೆ ಪಾತ್ರ. ಯಾರೆಲ್ಲಾ ಸಿನಿಮಾ ನೋಡಿಲ್ಲ ಅವರೆಲ್ಲಾ ಮತ್ತೆ ಮತ್ತೆ ಕಾಂತಾರ ಸಿನಿಮಾ ನೋಡಿ' ಎಂದು ಹೇಳಿದ್ದಾರೆ.

    ದೈವ ನರ್ತಕ ಮುಖೇಶ್ ಮಾತು

    ದೈವ ನರ್ತಕ ಮುಖೇಶ್ ಮಾತು

    ದೈವಾರಾಧನೆಯ ಕಥೆಯುಳ್ಳ ಸಿನಿಮಾ, ನಾಟಕ ಇತ್ಯಾದಿ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸ್ವಲ್ಪ ಎಡವಟ್ಟಾದರೂ ಇಡೀ ಸಿನಿಮಾ ತಂಡ ಭಾರೀ ಟೀಕೆಗೆ, ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ‌. ಕಾಂತಾರ ಸಿನಿಮಾವೂ ಕಾಡು, ಪ್ರಕೃತಿ-ಮನುಷ್ಯ ಸಂಬಂಧ, ಕರಾವಳಿಯ ದೈವಾರಾಧನೆಯ ಹಿನ್ನೆಲೆ ಇರುವ ಸಿನಿಮಾ. ಈ ಸಿನಿಮಾದಲ್ಲಿ ದೈವಾರಾಧನೆಯ ವಿಚಾರದಲ್ಲಿ ಸಿನಿಮಾ ತಂಡಕ್ಕೆ ಸಲಹೆ - ಸಹಕಾರ ನೀಡಿರುವ ದೈವ ನರ್ತಕ ಮುಖೇಶ್ ಅವರು ಕಾಂತಾರ ಸಿನಿಮಾ ಹಾಗೂ ಸಿನಿಮಾ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿಯಲ್ಲಿ ಹಂಚಿಕೊಂಡಿದ್ದಾರೆ.

    'ಕಾಂತಾರ' ಆತ್ಮಕ್ಕೆ ಮುಟ್ಟುವ ಕತೆ: ರಿಷಬ್ ಶೆಟ್ಟಿ

    'ಕಾಂತಾರ' ಆತ್ಮಕ್ಕೆ ಮುಟ್ಟುವ ಕತೆ: ರಿಷಬ್ ಶೆಟ್ಟಿ

    ಕಾಂತಾರ ಆತ್ಮಕ್ಕೆ ಮುಟ್ಟುವ ಕಥೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧಾ ಭಕ್ತಿಯಿಂದ ಕಾಂತಾರ ಸಿನಿಮಾವನ್ನು ಮಾಡಿದೆ‌. ಮದ್ಯ-ಮಾಂಸವನ್ನು ತ್ಯಜಿಸಿ ಈ ಸಿನಿಮಾ ಮಾಡಲಾಗಿದೆ. ಅಲ್ಲದೆ ಸಿನಿಮಾದಲ್ಲಿ ಕೋಲದ ಶೂಟಿಂಗ್ ನಡೆಯುವ ಸ್ಥಳದಲ್ಲಿ ಚಪ್ಪಲಿಯನ್ನು ಹಾಕದೆ ಎಲ್ಲರೂ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ.

    English summary
    Do not imitate Daiva's devin voice says Kantara movie director, actor Rishab Shetty. He said movie is a different experience.
    Tuesday, October 4, 2022, 19:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X