ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಮೊನ್ನೆ ( ಜನವರಿ 26 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಿಂದಲೇ 5.45 ಕೋಟಿ ಗಳಿಕೆ ಮಾಡಿದ್ದ ಕ್ರಾಂತಿ ಬಿಡುಗಡೆ ದಿನ ಬಾಕ್ಸ್ ಆಫೀಸ್‌ನಲ್ಲಿ 12.85 ಕೋಟಿ ಕಲೆಕ್ಷನ್ ಮಾಡಿತು. ಹೀಗೆ ಕ್ರಾಂತಿ ದೊಡ್ಡ ಮಟ್ಟದ ಓಪನಿಂಗ್ ಅನ್ನೇ ಪಡೆದುಕೊಂಡಿತು.

ಸರ್ಕಾರಿ ಶಾಲೆಯ ಮಹತ್ವವನ್ನು ಚಿತ್ರ ಸಾರಿದ್ದು, ಒಂದೊಳ್ಳೆ ಸಂದೇಶವನ್ನು ಸಿನಿ ರಸಿಕರಿಗೆ ನೀಡುವ ಪ್ರಯತ್ನಕ್ಕೆ ಕೈಹಾಕಿದೆ. ಇನ್ನು ಚಿತ್ರ ವೀಕ್ಷಿಸಿದ ದರ್ಶನ್ ಅಭಿಮಾನಿಗಳು ಚಿತ್ರ ಸೂಪರ್ ಎಂದರೆ, ಸಾಮಾನ್ಯ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಚಿತ್ರ ತೆರೆಕಂಡ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ಫ್ಲಾಪ್ ಎಂಬ ವಿಮರ್ಶೆಗಳು ಹರಿದಾಡಿದ್ದವು.

ಫ್ಲಾಪ್ ಕ್ರಾಂತಿ, ಡಿಸಾಸ್ಟರ್ ಕ್ರಾಂತಿ ಎಂಬ ಟ್ಯಾಗ್‌ಗಳು ದೊಡ್ಡ ಸಂಖ್ಯೆಯಲ್ಲಿ ಟ್ವಿಟರ್‌ನಲ್ಲಿ ಹರಿದಾಡಿದ್ದವು. ಈ ಟ್ಯಾಗ್‌ಗಳ ಜತೆ ಚಿತ್ರ ಚೆನ್ನಾಗಿಲ್ಲ, ಚಿತ್ರ ಸೋಲುತ್ತೆ ಎಂದು ದರ್ಶನ್ ವಿರೋಧಿಗಳು ಬರೆದುಕೊಂಡಿದ್ದರು. ಹೀಗೆ ದೊಡ್ಡ ಮಟ್ಟದ ನೆಗೆಟಿವಿಟಿ ಕ್ರಾಂತಿ ಚಿತ್ರಕ್ಕೆ ಎದುರಾಯಿತು. ದರ್ಶನ್ ಅಭಿಮಾನಿಗಳು ಚಿತ್ರಕ್ಕೆ ಬಂದ ಈ ಅಪಪ್ರಚಾರದ ವಿರುದ್ಧ ಕಿಡಿಕಾರಿದರು. ಸದ್ಯ ಈ ರೀತಿಯ ಅಪಪ್ರಚಾರದ ಕುರಿತು ರತ್ನನ್ ಪ್ರಪಂಚ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರಗಳ ಖ್ಯಾತಿಯ ನಟ ಪ್ರಮೋದ್ ಸಹ ಪ್ರತಿಕ್ರಿಯಿಸಿದ್ದು, ನೆಗೆಟಿವಿಟಿಯ ವಿರುದ್ಧ ಕಿಡಿಕಾರಿದ್ದಾರೆ.

ಕ್ರಾಂತಿ ನೋಡಿ ಮೆಚ್ಚಿಕೊಂಡ ಪ್ರಮೋದ್

ಕ್ರಾಂತಿ ನೋಡಿ ಮೆಚ್ಚಿಕೊಂಡ ಪ್ರಮೋದ್

ನಟ ಪ್ರಮೋದ್ ಕ್ರಾಂತಿ ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಬಳಿಕ ಓರ್ವ ಪ್ರೇಕ್ಷಕನಾಗಿ ಚಿತ್ರ ಹೇಗಿದೆ ಎಂಬುದನ್ನು ಬರೆದುಕೊಂಡಿದ್ದಾರೆ ಹಾಗೂ ಚಿತ್ರರಂಗದ ಸದಸ್ಯನಾಗಿ ಚಿತ್ರದ ಬಗ್ಗೆ ನೆಗೆಟಿವ್ ಹಬ್ಬಿಸುವವರ ವಿರುದ್ಧ ಕಿಡಿಕಾರಿದ್ದಾರೆ. "ದರ್ಶನ್ ಸರ್ ಅವರ ಕ್ರಾಂತಿ ಚಿತ್ರ ನಿಜವಾಗಲೂ ಇಷ್ಟ ಆಯ್ತು. ನೆಗೆಟಿವ್‌ ವಿಮರ್ಶೆಗಳಿಗೆ ಕಿವಿಗೊಡಬೇಡಿ. ಸಿನಿಮಾ ಚೆನ್ನಾಗಿದೆ. ದರ್ಶನ್ ಸರ್ ನೀವು ಅದ್ಭುತ, ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ ಸೂಪರ್. ಕೊನೆಯ 15 ನಿಮಿಷಗಳು ಚೆನ್ನಾಗಿದೆ. ಚಿತ್ರಮಂದಿರಕ್ಕೆ ಹೋಗಿ ನೋಡಿ" ಎಂದು ಪ್ರಮೋದ್ ಟ್ವೀಟ್ ಮಾಡಿದ್ದಾರೆ.

ಡಿಸಾಸ್ಟರ್ ಕ್ರಾಂತಿ ಎಂದು ಸಾವಿರಾರು ಟ್ವೀಟ್

ಡಿಸಾಸ್ಟರ್ ಕ್ರಾಂತಿ ಎಂದು ಸಾವಿರಾರು ಟ್ವೀಟ್

ಇನ್ನು ಕ್ರಾಂತಿ ಚಿತ್ರ ಚೆನ್ನಾಗಿಲ್ಲ ಎಂದು ಟ್ವಿಟರ್‌ನಲ್ಲಿ ಹರಿದಾಡಿರುವ ಟ್ವೀಟ್‌ಗಳ ಸಂಖ್ಯೆ ಕಡಿಮೆಯೇನಲ್ಲ. ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳು ಡಿಸಾಸ್ಟರ್ ಕ್ರಾಂತಿ ಟ್ಯಾಗ್ ಅಡಿಯಲ್ಲಿ ದಾಖಲಾಗಿವೆ. ಈ ಟ್ವೀಟ್‌ಗಳಲ್ಲಿ ಜನರಿಲ್ಲದ ಚಿತ್ರಮಂದಿರಗಳು, ಟಿಕೆಟ್ ಸೇಲ್ ಆಗದ ಪ್ರದರ್ಶನಗಳ ಫೋಟೊಗಳನ್ನು ಅಪ್ ಲೋಡ್ ಮಾಡಿ ಟ್ರೋಲ್ ಮಾಡಲಾಗಿದೆ.

ಮೊದಲ ದಿನ ಕ್ರಾಂತಿ ಗಳಿಸಿದ್ದೆಷ್ಟು?

ಮೊದಲ ದಿನ ಕ್ರಾಂತಿ ಗಳಿಸಿದ್ದೆಷ್ಟು?

ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಕ್ರಾಂತಿ ಚಿತ್ರ ಮೊದಲ ದಿನ 12.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಕ್ರಾಂತಿ ಚಿತ್ರದ ಬುಕಿಂಗ್ ತೀವ್ರ ಕುಸಿತ ಕಂಡಿದ್ದು, ಕಲೆಕ್ಷನ್‌ನಲ್ಲಿಯೂ ಸಹ ಕುಸಿತ ಕಾಣುವುದು ಖಚಿತ. ಚಿತ್ರ ಗುರುವಾರ ಬಿಡುಗಡೆಗೊಂಡ ಕಾರಣ ಈ ಕುಸಿತ ಕಂಡಿರಬಹುದು ಎಂಬ ಊಹೆಯನ್ನು ಸಿನಿ ರಸಿಕರು ಮಾಡಿದ್ದು, ವೀಕೆಂಡ್ ದಿನಗಳಾದ ಇಂದು ಶನಿವಾರ ( ಜನವರಿ 28 ) ಹಾಗೂ ನಾಳೆ ಭಾನುವಾರ ಚಿತ್ರ ಒಳ್ಳೆಯ ಗಳಿಕೆ ಮಾಡಿ ಕಮ್ ಬ್ಯಾಕ್ ಮಾಡಿರಬಹುದು ಎನ್ನಲಾಗುತ್ತಿದೆ.

More from Filmibeat

English summary
Dont listen to negative reviews Kranti is a good movie says actor Pramod. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X