'ಯಜಮಾನ' ಚಿತ್ರದಲ್ಲಿ ಇದನ್ನು ಮಾತ್ರ ಮಿಸ್ ಮಾಡ್ಕೋಬೇಡಿ
Recommended Video

'ಯಜಮಾನ' ಸಿನಿಮಾ ಬಿಡುಗಡೆಯಾಗಲು ಇನ್ನ 7 ದಿನಗಳು ಮಾತ್ರ ಬಾಕಿ ಇದೆ. ಸಿನಿಮಾದ ಮೇಲೆ ನಿರೀಕ್ಷೆ ಇಟ್ಟು ಕಾಯುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಒಂದು ತಾಜಾ ಸಂಗತಿ.
'ಯಜಮಾನ' ಸಿನಿಮಾ ಅನೇಕ ವಿಶೇಷತೆಗಳನ್ನು ಹೊಂದಿದೆ. ಮೊದಲ ಬಾರಿಗೆ ಹರಿಕೃಷ್ಣ ನಿರ್ದೇಶನಕ್ಕೆ ಇಳಿದಿದ್ದಾರೆ. ದರ್ಶನ್ - ಹರಿಕೃಷ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ 25ನೇ ಸಿನಿಮಾ ಇದಾಗಿದೆ. ರಶ್ಮಿಕಾ ಮಂದಣ್ಣ ಅಭಿನಯದ ನಾಲ್ಕನೇ ಕನ್ನಡ ಸಿನಿಮಾ ಇದು. ಅಲ್ಲದೆ, ಒಂದುವರೆ ವರ್ಷಗಳ ಬಳಿಕ ಮತ್ತೆ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತಿದೆ.
ಟ್ರೇಲರ್ ಹಾಗೂ ಹಾಡುಗಳನ್ನು ನೋಡಿದರೆ ಇದೊಂದು ಫ್ಯಾಮಿಲಿ ಕಮ್ ಮಾಸ್ ಸಿನಿಮಾ ಎನಿಸುತ್ತಿದೆ. ಈ ಎಲ್ಲ ವಿಶೇಷತೆಗಳ ಜೊತೆಗೆ ಸಿನಿಮಾದ ಒಂದು ಅಂಶವನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಏನದು ಅಂತ್ತಿರಾ ಮುಂದೆ ಓದಿ...

ಬಸಣ್ಣಿ ಹಾಡಿಗೆ ಡ್ಯಾನ್ಸ್
ದರ್ಶನ್ ಡ್ಯಾನ್ಸ್ ಮಾಡುವುದು ಕಡಿಮೆ. ಅವರ ಮೊದಲ ಸಿನಿಮಾದಿಂದಲೂ ದರ್ಶನ್ ಹೆಚ್ಚು ಸ್ಟೆಪ್ ಗಳನ್ನು ಹಾಕುವುದಿಲ್ಲ. ಮಾಸ್ ಹೀರೋ ಆಗಿ ಆಕ್ಷನ್ ಮಾಡುತ್ತಿದ್ದ ದರ್ಶನ್ ಹಾಡುಗಳಿಗೆ ತಕ್ಕ ಹಾಗೆ ಮೈ ಕುಣಿಸುತ್ತಿದ್ದರು. ಆದರೆ, ಬಸಣ್ಣಿ ಹಾಡಿಗೆ ದರ್ಶನ್ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದಾರೆ. ದರ್ಶನ್ ಈ ಮಟ್ಟಿಗೆ ಕುಣಿದಿರುವುದು ಇದೇ ಮೊದಲಿರಬಹುದು.

ಸಿಗ್ನೇಚರ್ ಸ್ಟೆಪ್ ಇದೆ
ಸದ್ಯಕ್ಕೆ ಬಸಣ್ಣಿ ಹಾಡಿನ ಲಿರಿಕಲ್ ವಿಡಿಯೋ ಮಾತ್ರ ಬಿಡುಗಡೆಯಾಗಿದೆ. ಆದರೆ, ಚಿತ್ರದ ಪ್ರೆಸ್ ಮೀಟ್ ನಲ್ಲಿ ಬಸಣ್ಣಿಯ ದರ್ಶನವನ್ನು ಚಿತ್ರತಂಡ ಮಾಡಿಸಿದೆ. ಈ ಹಾಡಿಗೆ ತಕ್ಕ ಹಾಗೆ ದರ್ಶನ್ ಹಾಗೂ ತಾನ್ಯ ಕುಣಿದಿದ್ದಾರೆ. ಹಾಡಿನಲ್ಲಿ ಒಂದು ಸಿಗ್ನೇಚರ್ ಸ್ಟೆಪ್ ಇದ್ದು, ಅಭಿಮಾನಿಗಳಿಗೆ ಅದು ಬಹಳ ಇಷ್ಟ ಆಗಲಿದೆ. ಚಿತ್ರಮಂದಿರದಲ್ಲಿ ಈ ಹಾಡನ್ನು ಮಿಸ್ ಮಾಡದೆ ನೋಡಿ.

ಹಾಡು ಸೂಪರ್ ಹಿಟ್ ಆಗಿದೆ
'ಬಸಣ್ಣಿ ಬಾ..' ಹಾಡು ಈ ವರ್ಷ ಬಂದ ಸೂಪರ್ ಹಿಟ್ ಹಾಡುಗಳ ಪೈಕಿ ಒಂದಾಗಿದೆ. ಸದ್ಯಕ್ಕೆ, ಯೂ ಟ್ಯೂಬ್ ನಲ್ಲಿ 7.8 ಮಿಲಿಯನ್ ಹಿಟ್ಸ್ ಅನ್ನು ಈ ಹಾಡು ಪಡೆದುಕೊಂಡಿದೆ. ಹರಿಕೃಷ್ಣ ಸಂಗೀತ ಹಾಗೂ ಯೋಗರಾಜ್ ಭಟ್ ಪದಗಳು ಮತ್ತೆ ಮ್ಯಾಜಿಕ್ ಮಾಡಿವೆ. ಥಿಯೇಟರ್ ನಲ್ಲಿ ಈ ಹಾಡು ಬಂದಾಗ ಅಭಿಮಾನಿಗಳ ಅಬ್ಬರ ಜೋರಾಗಿರೋದು ಪಕ್ಕಾ.

ವರ್ಷ ಸುರೇಶ್ ಧ್ವನಿ
ಬಸಣ್ಣಿ ಹಾಡನ್ನು ಹಾಡಿರುವುದು ಬೆಂಗಳೂರಿನ ಹುಡುಗಿ ವರ್ಷ ಸುರೇಶ್. ಸಾಕಷ್ಟು ವರ್ಷಗಳಿಂದ ಸಂಗೀತ ಕಲಿತು, ವಿ ಹರಿಕೃಷ್ಣ ಅವರ ಟ್ರಾಕ್ ಹಾಡುಗಳಿಗೆ ಧ್ವನಿ ನೀಡುತ್ತಿದ್ದರು. ಈ ಹಿಂದೆ ಕೆಲ ಚಿತ್ರಗಳಿಗೆ ಹಾಡಿದ್ದ ವರ್ಷಗೆ ಈ ಹಾಡು ದೊಡ್ಡ ಬ್ರೇಕ್ ನೀಡಿದೆ. ಸ್ವತಃ ದರ್ಶನ್ ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











