twitter
    For Quick Alerts
    ALLOW NOTIFICATIONS  
    For Daily Alerts

    ಮಕ್ಕಳಿಗೆ ಶಾರುಖ್, ಸಲ್ಮಾನ್ ಹೆಸರಿಡಬೇಡಿ!

    |

    Shahrukh Khan
    ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿರುದ್ಧ ಮುಸ್ಲಿಂ ಧಾರ್ಮಿಕ ಗುರುವೊಬ್ಬರು ತಿರುಗಿ ಬಿದ್ದಿದ್ದಾರೆ. ನಿಮ್ಮ ಮಕ್ಕಳಿಗೆ ಶಾರುಖ್ ಮತ್ತು ಸಲ್ಮಾನ್ ಎಂದು ಹೆಸರು ಇಡಬೇಡಿ. ಇಬ್ಬರು ನಟರು ನಮಗೆ ಮಾದರಿಯಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

    ಉತ್ತರ ಪ್ರದೇಶದ ಲಖೌನಲ್ಲಿ ಈದ್ -ಉಲ್ - ಫಿತರ್ ನಮಾಜ್ ನಂತರ ಭಾಷಣ ಮಾಡಿರುವ ಖ್ವಾರಿ ಶಫಿಕ್ ಉರ್ ರೆಹಮಾನ್ ಎಂಬುವವರು, ಶಾರುಖ್ ಮತ್ತು ಸಲ್ಮಾನ್ ಖಾನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಂಜಾನ್ ಹಬ್ಬದಂದು ಈ ನಟರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದು ರೆಹಮಾನ್ ಕೆಂಣ್ಣಿಗೆ ಗುರಿಯಾಗಿದೆ. ಹಣ ಮಾಡುವ ಉದ್ದೇಶದಿಂದ ಇಬ್ಬರು ನಟರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

    ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಮ್ಮ ಸಮುದಾಯದ ಮಕ್ಕಳಿಗೆ ಮಾದರಿಯಲ್ಲ. ನಿಮ್ಮ ಮಕ್ಕಳಿಗೆ ಅವರ ಹೆಸರು ಇಟ್ಟರೆ ಯಾವುದೇ ಪ್ರಯೋಜನವಿಲ್ಲ. ಸಮುದಾಯಕ್ಕೆ ಇಬ್ಬರು ನಟರ ಕೊಡುಗೆ ಶೂನ್ಯ. ಕೇವಲ ಹಣ ಮಾಡುವ ಉದ್ದೇಶದಿಂದ ನಟರು ತಮ್ಮ ಚಿತ್ರಗಳನ್ನು ನಮ್ಮ ಹಬ್ಬದಂದು ಬಿಡುಗಡೆ ಮಾಡುತ್ತಾರೆ ಎಂದು ದೂರಿದ್ದಾರೆ.

    ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಶುಕ್ರವಾರ ರಂಜಾನ್ ಹಬ್ಬದಂದು ತೆರೆಕಂಡಿದೆ. ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಈದ್ ಮಿಲಾದ್ ಹಬ್ಬದ ದಿನ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಅವರ ವಾಟೆಂಡ್, ದಬಾಂಗ್, ಬಾಡಿಗಾರ್ಡ್ ಸಹ ಈದ್ ಹಬ್ಬದಂದು ತೆರೆಕಂಡಿದೆ ಎಂಬುದು ಗುರುಗಳ ವಿಶ್ಲೇಷಣೆ.

    ಒಂದು ಮಗುವಿಗೆ ಇಡುವ ಹೆಸರು ಅವರ ವ್ಯಕ್ತಿತ್ವ ಬೆಳಗಬೇಕು. ಸಿನಿಮಾ ನಟರು ನಮಗೆ ಮಾದರಿ ಆಗುವುದಿಲ್ಲ. ಜನರ ಭಾವನೆಯನ್ನು ನಟರು ಹಣ ಮಾಡುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಾರೆ. ಆದ್ದರಿಂದ ಅವರ ಹೆಸರು ಇಡಬೇಡಿ ಎಂದು ರೆಹಮಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿ ಕೊಂಡಿದ್ದಾರೆ.

    ಶಾರುಖ್ ಖಾನ್ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವಾಗಲೇ ಧಾರ್ಮಿಕ ಗುರುಗಳು ತಿರುಗಿ ಬಿದ್ದಿದ್ದಾರೆ. ಈ ಸ್ಟಾರ್ ನಟರು ತಮ್ಮ ಮುಂದಿನ ಚಿತ್ರವನ್ನು ಯಾವ ದಿನದಂದು ಬಿಡುಗಡೆ ಮಾಡುತ್ತಾರೆ ಕಾದು ನೋಡಬೇಕು. (ಹಿಂದಿ ಬಾಕ್ಸಾಫೀಸಿನಲ್ಲಿ ಹೊಸ ಭಾಷ್ಯ ಬರೆದ ಶಾರೂಖ್)

    (67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)

    English summary
    Salman or Shahrukh Khan were no ideals or role models for community. actors release their films on Eid to earn money during the festive season but never contribute anything to the better of the community. so dont keep their name for children said, Qari Shafiq-ur-Rehman after Eid ul Fitr namaaz in Lucknow.
    Sunday, August 11, 2013, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X