For Quick Alerts
  ALLOW NOTIFICATIONS  
  For Daily Alerts

  'ನಾನು ಒಳ್ಳೆಯವನಲ್ಲ, ನನ್ನನ್ನ ಒಳ್ಳೆಯವನು ಅಂತ ಅಂದುಕೊಳ್ಳಬೇಡಿ' ಎಂದ ಯಶ್.!

  By Harshitha
  |
  ಯಾರು ಹೇಳಿದ್ರು ಗೊತ್ತಾ ಯಶ್ ಕೆಟ್ಟವರು ಅಂತ ? | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಬೇಸರಗೊಂಡಿದ್ದಾರೆ. ಮಿಸ್ ಮಾಡದೆ ಬಾಡಿಗೆ ಕೊಟ್ಟಿದ್ದರೂ, ಬಾಡಿಗೆ ಕೊಟ್ಟಿಲ್ಲ ಅಂತ ಮನೆ ಮಾಲೀಕರು ಮಾಧ್ಯಮಗಳ ಮುಂದೆ ಬಂದು ಕೋರ್ಟ್ ಮೊರೆ ಹೋಗಿರೋದು ಯಶ್ ಗೆ ಬೇಜಾರಾಗಿದೆ.

  ಎಲ್ಲಕ್ಕಿಂತ ಹೆಚ್ಚು ನೋವು ತಂದಿರೋದು ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕೆಲ ಕಾಮೆಂಟ್ ಗಳು. ಸಮಾಜಮುಖಿ ಕೆಲಸ ಮಾಡುತ್ತಿದ್ದರೂ, ಬಾಡಿಗೆ ವಿಚಾರವಾಗಿ ಭುಗಿಲೆದ್ದಿರುವ ವಿವಾದದಿಂದ ಕೆಲವರು ಯಶ್ ಬಗ್ಗೆ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ.

  ಇದನ್ನೆಲ್ಲ ನೋಡಿದ್ಮೇಲೆ, ''ಒಳ್ಳೆಯವನು ಎಂದು ಅನಿಸಿಕೊಳ್ಳಬೇಕು ಅಂತ ನಾನು ಯಾವ ಕೆಲಸವನ್ನೂ ಮಾಡಲ್ಲ. ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ನಾನು ಸೋಷಿಯಲ್ ಸರ್ವೀಸ್ ಮಾಡ್ತಿರೋದು ನನ್ನ ಖುಷಿಗೆ. ಇದರಿಂದ ನಾನು ಒಳ್ಳೆಯವನು ಅಂತ ದಯವಿಟ್ಟು ಅಂದುಕೊಳ್ಳಬೇಡಿ. ಯಾಕಂದ್ರೆ ನಾನು ಒಳ್ಳೆಯವನಲ್ಲ'' ಅಂತ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ ನಟ ಯಶ್.

  ಕೆಲಸ ಮಾಡುವ ಹುಡುಗರು ಸ್ಟಾರ್ ಗಳನ್ನೇ ಹೆದರಿಸುತ್ತಾರಂತೆ.!ಕೆಲಸ ಮಾಡುವ ಹುಡುಗರು ಸ್ಟಾರ್ ಗಳನ್ನೇ ಹೆದರಿಸುತ್ತಾರಂತೆ.!

  ತಲ್ಲೂರು ಕೆರೆಯಲ್ಲಿ ತುಂಬಿದ್ದ ಹೂಳು ತೆಗೆದು ಕೆರೆ ಅಭಿವೃದ್ಧಿ ಪಡಿಸಿದಾಗ, ಯಶ್ ಗೆ ಎಲ್ಲರೂ ಜೈಕಾರ ಹಾಕಿದ್ದರು. ಮದುವೆಗೆ ಆಹ್ವಾನ ಪತ್ರಿಕೆಯ ಜೊತೆಯಲ್ಲಿ ಸಸಿ ಕೊಟ್ಟಾಗ, ಯಶ್ ಪರಿಸರ ಪ್ರೇಮದ ಬಗ್ಗೆ ಎಲ್ಲರೂ ಕೊಂಡಾಡಿದ್ದರು. ಆದ್ರೆ, ಬಾಡಿಗೆ ವಿಚಾರದಲ್ಲಿ ಮಾತ್ರ ಅದೇ ಯಶ್ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

  'ರೌಡಿ ಅಟ್ಯಾಕ್' ಬಗ್ಗೆ ಕೊನೆಗೂ ಮೌನ ಮುರಿದು ನಿಜ ಹೇಳಿದ ಯಶ್.!'ರೌಡಿ ಅಟ್ಯಾಕ್' ಬಗ್ಗೆ ಕೊನೆಗೂ ಮೌನ ಮುರಿದು ನಿಜ ಹೇಳಿದ ಯಶ್.!

  ಹೀಗಾಗಿ, ವಾಸ್ತವವನ್ನ ಜನರಿಗೆ ತಿಳಿಸಲು ಯಶ್ ನಿನ್ನೆ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ''ನಾನು ಬಾಡಿಗೆ ಕೊಡ್ತಿಲ್ಲ ಅಂತ ಮನೆ ಮಾಲೀಕರು ಪ್ರಮಾಣ ಮಾಡಿ ಹೇಳಲಿ'' ಎಂದು ನಟ ಯಶ್ ಸವಾಲು ಹಾಕಿದರು.

  ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!

  English summary
  ''Don't think I'm a good person'' says Yash in his Facebook Live.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X