twitter
    For Quick Alerts
    ALLOW NOTIFICATIONS  
    For Daily Alerts

    'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ

    |

    Recommended Video

    ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ..! | FILMIBEAT KANNADA

    ಡಾ ರಾಜ್ ಕುಮಾರ್ ಸ್ಮಾರಕ ಆಗಿದೆ. ಅಂಬರೀಶ್ ಅವರ ಸ್ಮಾರಕ ಕೆಲಸ ಚಾಲ್ತಿಯಲ್ಲಿದೆ. ಆದ್ರೆ, 9 ವರ್ಷದಿಂದ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲೇ ಇಲ್ಲ. ಇದನ್ನೆಲ್ಲಾ ನೋಡಿದ ಕಲಾವಿದರು, ಜನರು ಒಂದೊಂಥರ ಮಾತನಾಡುವಂತಾಗಿದೆ.

    ರಾಜ್-ವಿಷ್ಣು-ಅಂಬಿ ಕನ್ನಡ ಚಿತ್ರರಂಗದ ಧ್ರುವತಾರೆಗಳು. ಆ ಮೂವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸೇವೆ ಅಪಾರ. ಅವರನ್ನ ಗೌರವಿಸಬೇಕಾಗಿರುವುದು ಇಂಡಸ್ಟ್ರಿ ಹಾಗೂ ಸರ್ಕಾರದ ಕರ್ತವ್ಯ. ಅದು ಖಂಡಿತಾ ಆಗುತ್ತೆ. ಅದರಲ್ಲಿ ಯಾವುದೇ ಗೊಂದಲಬೇಡ.

    ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೈಹಾಕಿದ ಚಿತ್ರರಂಗ, ಯಾರ ಒಲವು ಯಾವ ಕಡೆ? ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೈಹಾಕಿದ ಚಿತ್ರರಂಗ, ಯಾರ ಒಲವು ಯಾವ ಕಡೆ?

    ಆದ್ರೆ, ಮುಂದಿನ ಪೀಳಿಗೆಯ ಯಾವ ಕಲಾವಿದನಿಗೂ ಸ್ಮಾರಕ ಆಗೋದು ಬೇಡ. ಸರ್ಕಾರದ ಎದುರು ಹೋಗಿ ಸ್ಮಾರಕ ನಿರ್ಮಿಸಿ ಎಂದು ಭಿಕ್ಷೆ ಬೇಡುವುದು ಬೇಡವೆಂದು ಸ್ಯಾಂಡಲ್ ವುಡ್ ಹಿರಿಯ ನಟ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟಕ್ಕೂ, ಯಾರದು.? ಮುಂದೆ ಓದಿ....

    ಇನ್ಮುಂದೆ ಯಾರಿಗೂ ಸ್ಮಾರಕ ಬೇಡ

    ಇನ್ಮುಂದೆ ಯಾರಿಗೂ ಸ್ಮಾರಕ ಬೇಡ

    ''ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಿಗೆ ಸ್ಮಾರಕ ಸಾಕು. ಮುಂದಿನ ಪೀಳಿಗೆಯವರಿಗೆ ಸ್ಮಾರಕ ಬೇಕು ಅಂದ್ರೆ, ನಮ್ಮ ಜಾಗದಲ್ಲೇ ಅಥವಾ ಅದಕ್ಕಾಗಿಯೇ ಒಂದು ಎಕರೆ ಜಾಗ ತಗೊಂಡು ಅಲ್ಲಿ ಸ್ಮಾರಕ ಮಾಡಿಕೊಳ್ಳಿ'' ಎಂದು ನಟ ಜಗ್ಗೇಶ್ ಹೇಳಿದ್ದಾರೆ.

    ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.? ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

    ಸರ್ಕಾರದ ಬಳಿ ಭಿಕ್ಷೆ ಬೇಡಬೇಡಿ

    ಸರ್ಕಾರದ ಬಳಿ ಭಿಕ್ಷೆ ಬೇಡಬೇಡಿ

    ''ನಮಗೆ ಸ್ಮಾರಕ ಮಾಡಿಕೊಡಿ ಎಂದು ಯಾವ ಕಲಾವಿದನೂ ಸರ್ಕಾರದ ಮುಂದೆ ಹೋಗಿ ಭಿಕ್ಷೆ ಬೇಡಬೇಡಿ'' ಎಂದು ಜಗ್ಗೇಶ್ ಕಲಾವಿದರಿಗೆ ಸಲಹೆ ಮನವರಿಕೆ ಮಾಡಿದ್ದಾರೆ. ಈ ಮೂರು ಜನರ ಜರ್ನಿ ಕೇವಲ ಒಂದು ಅಥವಾ ಎರಡು ವರ್ಷವಲ್ಲ, ಸುಮಾರು 40-50 ವರ್ಷದ ಕೊಡುಗೆ. ಅವರಿಗೆ ಕೊಡಲೇಬೇಕು, ಆ ಗೌರವ ಅವರಿಗೆ ಸಿಗಬೇಕು ಎಂದು ಜಗ್ಗೇಶ್ ತಿಳಿಸಿದ್ದಾರೆ.

    ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್ ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್

    ನಾನು ನಮ್ಮ ಪತ್ನಿಗೆ ಹೇಳಿದ್ದೀನಿ

    ನಾನು ನಮ್ಮ ಪತ್ನಿಗೆ ಹೇಳಿದ್ದೀನಿ

    ''ನಾನು ನಮ್ಮ ಪತ್ನಿಗೆ ಈಗಾಗಲೇ ಹೇಳಿದ್ದೀನಿ, ಒಂದು ಎಕರೆ ಜಾಗ ತಗೊಂಡು, ಅಲ್ಲೆ ಏನ್ ಬೇಕೋ ಅದೆ ಮಾಡಿಕೊಳ್ಳಬಹುದು'' ಎಂದು ನವರಸ ನಾಯಕ ಬಹಿರಂಗವಾಗಿ ಅಂಬಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹೇಳಿಕೊಂಡರು.

    ಅಂಬಿ-ನಿಖಿಲ್ ಸಿನಿಮಾ ಆಗಬೇಕಿತ್ತು: ಆಗಲಿಲ್ಲ ಎಂಬ ನೋವು ಕಾಡ್ತಿದೆ.! ಅಂಬಿ-ನಿಖಿಲ್ ಸಿನಿಮಾ ಆಗಬೇಕಿತ್ತು: ಆಗಲಿಲ್ಲ ಎಂಬ ನೋವು ಕಾಡ್ತಿದೆ.!

    ತಂದೆಗೆ ತಕ್ಕ ಮಗ ಅಭಿಷೇಕ್

    ತಂದೆಗೆ ತಕ್ಕ ಮಗ ಅಭಿಷೇಕ್

    ನನ್ನನ್ನು ಹೀರೋ ಆಗ್ಬೇಕು ಎಂದವರು ನಟ ಅಂಬರೀಶ್. ಕಲಾವಿದರು ಒಟ್ಟಿಗೆ ಇರಬೇಕು ಎಂಬ ಕಾರಣಕ್ಕೆ, ಕಲಾವಿದರ ಸಂಘ ನಿರ್ಮಿಸಲು ಹೋರಾಟ ಮಾಡಿದ್ರು. ಅಂಬರೀಶ್ ಅವರನ್ನ ಅಭಿಷೇಕ್ ರೂಪದಲ್ಲಿ ನೋಡಬೇಕಿದೆ. ಅವರ ಸ್ಥಾನಕ್ಕೆ ಈ ಹುಡುಗನನ್ನ ತಂದುಕೂರಿಸಬೇಕು ಎಂದು ಜಗ್ಗೇಶ್ ಅಭಿಪ್ರಾಯಪಟ್ಟರು.

    ಅಂಬಿಗೆ ಇದ್ದ ಕೊನೆಯ ಆಸೆ ಬಗ್ಗೆ ಹೇಳಿಕೊಂಡ ಸುಮಲತಾ ಅಂಬಿಗೆ ಇದ್ದ ಕೊನೆಯ ಆಸೆ ಬಗ್ಗೆ ಹೇಳಿಕೊಂಡ ಸುಮಲತಾ

    English summary
    Karnataka film chamber of commerce conduct ambareesh Condolence Meet. Actor Jaggesh Speech On Ambareesh.
    Saturday, March 30, 2019, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X