»   » 'ಉಪ್ಪಿ2', 'ಓಂ' ಉಪ್ಪಿ ಅಭಿಮಾನಿಗಳಿಗೆ ಈ ವಾರ ಹಬ್ಬ

'ಉಪ್ಪಿ2', 'ಓಂ' ಉಪ್ಪಿ ಅಭಿಮಾನಿಗಳಿಗೆ ಈ ವಾರ ಹಬ್ಬ

Posted By:
Subscribe to Filmibeat Kannada

ಉಪೇಂದ್ರ ಅಭಿಮಾನಿಗಳಿಗೆ ಈ ವಾರ ಡಬಲ್ ಧಮಾಕ ಅಂತಾನೇ ಹೇಳಬಹುದು. ಯಾಕಂತೀರಾ, ಇನ್ನೇನು ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರ 'ಉಪ್ಪಿ 2' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆ ಪ್ರೇಕ್ಷಕರ ಎದುರು ರಾರಾಜಿಸಲಿದೆ.

ಜೊತೆಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಹದಿನೆಂಟು ವರ್ಷಗಳ ನಂತರ ಬರೋಬ್ಬರಿ 8 ಕೋಟಿ ರೂಪಾಯಿ ಸ್ಯಾಟಲೈಟ್ ಹಕ್ಕುಗಳಿಗೆ ಸೇಲಾದ ಉಪೇಂದ್ರ ನಿರ್ದೇಶನದ 'ಓಂ' ಚಿತ್ರ ಆಗಸ್ಟ್ 15 ರಂದು ಉದಯ ವಾಹಿನಿಯಲ್ಲಿ 7 ಗಂಟೆಗೆ ಪ್ರಸಾರವಾಗಲಿದೆ.

Double Dhamaka for Real Star Upendra fans

ಅಂದಹಾಗೆ 'ಓಂ' ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವಾರಾಜ್ ಕುಮಾರ್ ಅವರಿಗೆ ಲೈಫ್ ಕೊಟ್ಟ ಸಿನಿಮಾ ಅಂದ್ರೂ ತಪ್ಪಾಗ್ಲಿಕ್ಕಿಲ್ಲ. [ಆಗಸ್ಟ್ 15ರಂದು ಉದಯ ಟಿವಿ ನೋಡಲು ಮರೆಯದಿರಿ]

ಈ ಚಿತ್ರದ ನಂತರವೇ ಉಪೇಂದ್ರ ಅವರು ನಿರ್ದೇಶಕನಾಗಿ ಒಳ್ಳೆ ಹೆಸರು ಮಾಡಿದ್ದು, ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ನಟನಾಗಿ ಮರುಹುಟ್ಟು ಪಡೆದುಕೊಂಡರು ಅಂತಾನೇ ಹೇಳಬಹುದು.

ಭೂಗತ ಲೋಕ, ರೌಡಿಸಂ, ಕಥೆಯನ್ನಾಧರಿಸಿದ ಚಿತ್ರಗಳನ್ನು ಬಿಟ್ಟಾಕಿ ಸಿನಿಮಾಕ್ಕೆ ನೈಜತೆಯ ಆಯಾಮ ದೊರಕಿಸಿಕೊಟ್ಟ ಏಕೈಕ ಚಿತ್ರ 'ಓಂ'. ಚಿತ್ರದ ಉದ್ದನೆಯ ಮಚ್ಚು, ಲಾಂಗು, ಹೆಸರು ಕೂಡ ಚಿತ್ರರಂಗದಲ್ಲಿ ಜನಪ್ರಿಯವಾಯಿತಲ್ಲದೇ ಈಗೀನ ರೌಡಿಸಂ ಚಿತ್ರಗಳಿಗೆ ತಮ್ಮ ಪೂರ್ವಜರ ಆಸ್ತಿಯಂತೆ ಪರಿಗಣಿತವಾಗಿದೆ.

Double Dhamaka for Real Star Upendra fans

'ಓಂ' ಚಿತ್ರದಲ್ಲಿ ನಾಯಕಿಯಾಗಿ ಪ್ರೇಮ ಅವರು ಅದ್ಭುತ ಅಭಿನಯ ನೀಡಿದ್ದರು, ಜೊತೆಗೆ ಗೊಂದಲ ಹಾಗೂ ಕುತೂಹಲಕಾರಿ ನಿರೂಪಣೆ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು.['ಉಪ್ಪಿ-2' ಸವಿಯೋಕೆ ನಾಳೆಯೇ ಟಿಕೆಟ್ ಕೊಂಡುಕೊಳ್ಳಿ]

ಅದೇನೇ ಇರಲಿ ಒಟ್ನಲ್ಲಿ ಇದೀಗ ಅದೇ ಉಪೇಂದ್ರ 'ಉಪ್ಪಿ 2' ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಚಾಕಚಕ್ಯತೆಯನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುತ್ತಿದ್ದಾರೆ. ಆದರೆ ತಮ್ಮ 'ಉಪ್ಪಿ 2' ಬಗ್ಗೆ ಯಾವುದೇ ಸುಳಿವು ನೀಡದೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವುದು ಕಂಡರೆ ರಿಯಲ್ ಸ್ಟಾರ್ ಅದೇನೋ ಹೊಸತನ್ನು ತರುತ್ತಾರೆ ಅಂತ ಮಾತ್ರ ಹೇಳಬಹುದು.[ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ]

ಒಟ್ಟಾರೆ ಇಡೀ ಚಿತ್ರಪ್ರೇಮಿಗಳಿಗೆ ಹಾಗೂ ಉಪೇಂದ್ರ ಅಭಿಮಾನಿಗಳಿಗೆ ಈ ವಾರ ಹಿರಿತೆರೆ ಹಾಗು ಕಿರುತೆರೆಯಲ್ಲಿ ಸಖತ್ ಮನೋರಂಜನೆ ಗ್ಯಾರಂಟಿ.

English summary
This week is going to be a great feast for Upendra's fans. The 'Uppi 2' will release on August 14th. And the latest update is that Upendra directorial film 'Om' will first time in the small screen, Udaya TV telecasting Om movie on August 15.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada