For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಬಾಳಲ್ಲಿ ಡಬಲ್ ಧಮಾಕ: ಒಂದು ಪರ್ಸನಲ್, ಇನ್ನೊಂದು ಸಿನಿಮಾ

  |

  ಮೀಟೂ ವಿವಾದದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದುಕೊಂಡಿದ್ದ ಶ್ರುತಿ ಹರಿಹರನ್ ಗೆ ಶುಕ್ರವಾರ ಸರ್ಪ್ರೈಸ್ ಸಿಕ್ಕಿದೆ. ಬಹುಶಃ ಶ್ರುತಿ ಕೂಡ ಇದನ್ನ ನಿರೀಕ್ಷೆ ಮಾಡಿರಲಿಲ್ಲ ಅನ್ಸುತ್ತೆ.

  ಹೌದು, ಶ್ರುತಿ ಹರಿಹರನ್ ಅಭಿನಯಿಸಿದ್ದ 'ನಾತಿಚರಾಮಿ' ಚಿತ್ರಕ್ಕೆ ಐದು ರಾಷ್ಟ್ರ ಪ್ರಶಸ್ತಿ ಪ್ರಕಟವಾಯಿತು. ಈ ಐದರಲ್ಲಿ ವೈಯಕ್ತಿಕವಾಗಿ ಶ್ರುತಿ ಅಭಿನಯ ಗುರುತಿಸಿ ವಿಶೇಷ ಜ್ಯೂರಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

  ನಟಿ ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಪರಿಚಯನಟಿ ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಪರಿಚಯ

  66ನೇ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡು ಖುಷಿಯಲ್ಲಿದ್ದ ಶ್ರುತಿ ಹರಿಹರನ್, ಇನ್ನೊಂದು ಸರ್ಪ್ರೈಸ್ ವಿಷ್ಯ ಬಿಚ್ಚಿಟ್ಟರು. ಏನದು? ಮುಂದೆ ಓದಿ....

  ಹೆಣ್ಣು ಮಗುವಿಗೆ ಜನ್ಮ ನೀಡಿದ ಶ್ರುತಿ

  ಹೆಣ್ಣು ಮಗುವಿಗೆ ಜನ್ಮ ನೀಡಿದ ಶ್ರುತಿ

  ಶ್ರುತಿ ಹರಿಹರನ್ ಗರ್ಭಿಣಿಯಾಗಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ, ಶ್ರುತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ಕಡೆ ರಾಷ್ಟ್ರ ಪ್ರಶಸ್ತಿ ಇನ್ನೊಂದು ಕಡೆ ಹೆಣ್ಣು ಮಗುಗೆ ಜನ್ಮ. ಒಟ್ಟೊಟ್ಟಿಗೆ ಈ ಎರಡು ಸಂತೋಷವನ್ನ ಎಂಜಾಯ್ ಮಾಡ್ತಿದ್ದಾರೆ ಶ್ರುತಿ.

  ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡ ನಟಿ ಶ್ರುತಿ ಹರಿಹರನ್ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡ ನಟಿ ಶ್ರುತಿ ಹರಿಹರನ್

  ಹೆಣ್ಣು ಮಗು ಮೇಲೆ ಹೆಚ್ಚು ಪ್ರೀತಿ ಇತ್ತು

  ಹೆಣ್ಣು ಮಗು ಮೇಲೆ ಹೆಚ್ಚು ಪ್ರೀತಿ ಇತ್ತು

  ಶ್ರುತಿ ಹರಿಹರನ್ ಅವರಿಗೆ ಹೆಣ್ಣು ಆಗಲಿ ಎಂಬ ಆಸೆ ಇತ್ತಂತೆ. ನಿರೀಕ್ಷೆಯಂತೆ ಹೆಣ್ಣು ಮಗುವೇ ಜನಿಸಿದ್ದು ನಿಜಕ್ಕೂ ಹೆಚ್ಚಿ ಸಂತಸ ತಂದಿದೆಯಂತೆ. ಶ್ರುತಿಗೆ ಮಾತ್ರವಲ್ಲ, ಶ್ರುತಿ ಪತಿ ಮತ್ತು ಮನೆಯವರಿಗೂ ಹೆಣ್ಣು ಮಗು ಮೇಲೆ ಹೆಚ್ಚು ಪ್ರೀತಿ ಇತ್ತಂತೆ.

  ನಾತಿಚರಾಮಿ ಚಿತ್ರಕ್ಕೆ ಐದು ಪ್ರಶಸ್ತಿ

  ನಾತಿಚರಾಮಿ ಚಿತ್ರಕ್ಕೆ ಐದು ಪ್ರಶಸ್ತಿ

  ಅತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ

  ಅತ್ಯುತ್ತಮ ಎಡಿಟಿಂಗ್

  ಅತ್ಯುತ್ತಮ ಹಿನ್ನಲೆ ಗಾಯಕಿ

  ಅತ್ಯುತ್ತಮ ಸಾಹಿತಿ

  ಮತ್ತು ಶ್ರುತಿ ಹರಿಹರನ್ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ.

  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: 'ನಾತಿಚರಾಮಿ' ಚಿತ್ರಕ್ಕೆ 5 ಪ್ರಶಸ್ತಿಯ ಗರಿರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: 'ನಾತಿಚರಾಮಿ' ಚಿತ್ರಕ್ಕೆ 5 ಪ್ರಶಸ್ತಿಯ ಗರಿ

  ಶ್ರುತಿ ಹರಿಹರನ್ ಪತಿ ಯಾರು?

  ಶ್ರುತಿ ಹರಿಹರನ್ ಪತಿ ಯಾರು?

  ಶ್ರುತಿ ಹರಿಹರನ್ ಪತಿ ರಾಮ್ ಒಬ್ಬ ಡ್ಯಾನ್ಸರ್, ನಟ, ಕಲಾವಿದ ಮತ್ತು ಮಾರ್ಷಲ್ ಆರ್ಟ್ಸ್ ಪಟು. ನಟಿಯಾಗುವುದಕ್ಕೂ ಮೊದಲು ಶ್ರುತಿ ಕೂಡ ಡ್ಯಾನ್ಸರ್ ಆಗಿದ್ದರು. ಅಲ್ಲಿಂದಲೇ ರಾಮ್ ಮತ್ತು ಶ್ರುತಿ ಪರಿಚಯವಾಗಿದೆ. ಇವರಿಬ್ಬರು ಸುಮಾರು ನಾಲ್ಕೈದು ವರ್ಷ ಪ್ರೀತಿಯಲ್ಲಿದ್ದರಂತೆ. ಬಳಿಕ ಕಳೆದ ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ. ಅಂದ್ರೆ, 2017ರಲ್ಲಿ ಅಧಿಕೃತವಾಗಿ ದಾಂಪತ್ಯ ಜೀವನ ಪ್ರವೇಶ ಮಾಡಿದ್ದರು.

  English summary
  Kannada actress sruthi hariharan won national award for her movie nathicharami. and she gave birth to baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X