ಹೊಸ ವರ್ಷದ ಆರಂಭದಲ್ಲಿಯೇ ಅಗ್ನಿ ಪರೀಕ್ಷೆಗೆ ರೆಡಿಯಾದ ರಚಿತಾ ರಾಮ್, ಎಲ್ಲಿ ಸಿಗುತ್ತೆ ಡಿಂಪಲ್ ಕ್ವೀನ್‌ಗೆ ಗೆಲುವು ?

ಸಾಮಾನ್ಯವಾಗಿ ಒಂದೇ ದಿನ ದೊಡ್ಡ ಸ್ಟಾರ್‌ಗಳ ಚಿತ್ರಗಳು ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಯಾವ ಚಿತ್ರ ನೋಡಬೇಕು.. ಯಾವ ಚಿತ್ರ ಬಿಡಬೇಕು.. ಎನ್ನುವ ಗೊಂದಲ ಅಭಿಮಾನಿಗಳಲ್ಲಿರುತ್ತೆ. ಇನ್ನೂ ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಬೇರೆ ಸ್ಟಾರ್ ಬೇಡ. ಒಬ್ಬರೇ ಆಕ್ಟ್ ಮಾಡಿದ ನಿರೀಕ್ಷೆಯ ಎರಡು ಚಿತ್ರಗಳು ಜೊತೆಯಲ್ಲಿಯೇ ಬಿಡುಗಡೆಯಾಗುತ್ತಿದ್ದವು.

ಚಿತ್ರರಂಗದ ಹಿತದೃಷ್ಟಿಯಿಂದ ಇವ್ಯಾವ ಬೆಳವಣಿಗೆಗಳು ಒಳ್ಳೆಯದಲ್ಲ ಎಂದು ಕಾಲ ಕಾಲಕ್ಕೆ ಹಲವರು ಹೇಳುತ್ತಲೇ ಇದ್ದಾರೆ. ಆದರೂ ಕೂಡ ಬಾಕ್ಸಾಫೀಸ್‌ನ ಈ ಕ್ಲ್ಯಾಶ್‌ನ ತಪ್ಪಿಸಲು ಇಲ್ಲಿಯವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಆದರೆ .. ಸ್ಟಾರ್ ಒಬ್ಬರ ಎರಡೆರಡು ಚಿತ್ರಗಳನ್ನು ಒಂದೇ ದಿನ ತೆರೆಗೆ ತರುವ ಪ್ರಯತ್ನಕ್ಕೆ ಬ್ರೇಕ್ ಬಿದ್ದಿದೆ ಎನ್ನುವುದಷ್ಟೇ ಸಮಾಧಾನಕಾರ ವಿಚಾರ.

Double the Dimples Double the Drama Rachita Ram Takes Over Jan 23 with Landlord amp amp Cult

ಹೀಗಿರುವಾಗ ಪುರುಷ ಪ್ರಧಾನ ಚಿತ್ರರಂಗದಲ್ಲಿ ಈಗ ನಾಯಕಿಯರ ನಡುವೆ ಕೂಡ ಪೈಪೋಟಿ ಶುರುವಾಗಿದೆ. ತಮ್ಮ ವರ್ಚಸ್ಸಿಂದ ಮಾರುಕಟ್ಟೆಯ ಮೇಲೆ ನಾಯಕಿಯರು ಕೂಡ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಬದಲಾದ ಈ ಕಾಲದಲ್ಲಿ ಹಿಂದೆ ಒಬ್ಬ ನಾಯಕ ಅಭಿನಯಿಸಿರುವ ಎರಡು ಚಿತ್ರಗಳು ಒಟ್ಟಿಗೆ ಬಿಡುಗಡೆ ಮಾಡಿದಂತೆ ಈಗ ನಾಯಕಿಯ ಎರಡೆರಡು ಚಿತ್ರಗಳನ್ನು ಒಂದೇ ದಿನ ಬಿಡುಗಡೆ ಮಾಡುವ ಸಂಪ್ರದಾಯ ಶುರುವಾಗಿದೆ. ರಚಿತಾ ರಾಮ್ ಅವರ ಫಿಲ್ಮೋಗ್ರಾಫಿಯನ್ನೇ ಸದ್ಯಕ್ಕೆ ಇದಕ್ಕೆ ಸಾಕ್ಷಿಯಾಗಿ ತೆಗೆದುಕೊಳ್ಳಿ.

ಹೌದು, ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್. ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ದರ್ಶನ್ ಸೇರಿ ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ... ಹೀಗೆ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಈ ಹತ್ತು ವರ್ಷಗಳ ಪ್ರಯಾಣದಲ್ಲಿ ಹಲವು ಏರಿಳಿತವನ್ನು ಕೂಡ ಕಂಡಿದ್ದಾರೆ.

Double the Dimples Double the Drama Rachita Ram Takes Over Jan 23 with Landlord amp amp Cult

ಇಂಥಾ ರಚಿತಾ ರಾಮ್ 2026ರ ಆರಂಭದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಲು ಸಿದ್ಧರಾಗಿದ್ದಾರೆ. ಹೌದು, ಈ ವರ್ಷ ''ಸಂಜು ವೆಡ್ಸ್ ಗೀತಾ 2'' ಚಿತ್ರದ ಮೂಲಕ ತಮ್ಮ ಖಾತೆ ತೆರೆದಿದ್ದ ರಚಿತಾ ರಾಮ್, ಮುಂದಿನ ವರ್ಷ ಅಂದರೆ 2026ರಲ್ಲಿ ''ಲ್ಯಾಂಡ್ ಲಾರ್ಡ್'' ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಎದುರು ಬರಲಿದ್ದಾರೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ ರಚಿತಾ ರಾಮ್ ಕನ್ನಡದ ಕರಿಚಿರತೆ ದುನಿಯಾ ವಿಜಯ್‌ಗೆ ಎರಡನೇ ಬಾರಿ ನಾಯಕಿಯಾಗಿದ್ದಾರೆ.

ಈಗಾಗಲೇ ಈ ಚಿತ್ರದ ನಿಂಗವ್ವ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ವಿಶೇಷ ಅಂದರೆ ಅದೇ ದಿನ ಅಂದರೆ ಜನವರಿ 23ರಂದು ರಚಿತಾ ರಾಮ್ ಅಭಿನಯದ ಮತ್ತೊಂದು ಚಿತ್ರ ''ಕಲ್ಟ್'' ಕೂಡ ತೆರೆಗೆ ಬರುತ್ತಿದೆ. ಜಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನೂ ''ಲ್ಯಾಂಡ್ ಲಾರ್ಡ್‌''ನಲ್ಲಿ ರಚಿತಾ ರಾಮ್ ಅವರದ್ದು ಡಿಗ್ಲಾಮರಸ್ ಪಾತ್ರ.

Double the Dimples Double the Drama Rachita Ram Takes Over Jan 23 with Landlord amp amp Cult

ಆದರೆ.. ''ಕಲ್ಟ್'' ಚಿತ್ರದಲ್ಲಿ ಹಿಂದೆಂದೂ ನೋಡದ ಗ್ಲ್ಯಾಮರಸ್ ರೂಪದಲ್ಲಿ ರಚಿತಾ ರಾಮ್ ಅವರನ್ನು ನೀವು ನೋಡಬಹುದು. ಒಂದೇ ದಿನ ಎರಡು ತದ್ವಿರುದ್ದ ಪಾತ್ರಗಳ ಮೂಲಕ ಪ್ರೇಕ್ಷಕರೆದುರು ರಚಿತಾ ರಾಮ್ ಬರುತ್ತಿದ್ದಾರೆ. ''ಲ್ಯಾಂಡ್ ಲಾರ್ಡ್‌'' ಚಿತ್ರಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ರಚಿತಾ ರಾಮ್ ''ಕಲ್ಟ್'' ಚಿತ್ರಕ್ಕೆ ನೀಡುತ್ತಿಲ್ಲ ಎನ್ನುವುದು ಬೇರೆ ವಿಷಯ.

ಹೀಗೆ ಒಂದೇ ದಿನ ರಚಿತಾ ರಾಮ್ ಅವರ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ. ಈ ಮೂಲಕ ತಮ್ಮ ವೃತ್ತಿ ಬದುಕಿನ ಅಗ್ನಿ ಪರೀಕ್ಷೆಗೆ ರಚಿತಾ ರಾಮ್ ರೆಡಿಯಾಗಿದ್ದಾರೆ. ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಎರಡು ಚಿತ್ರಗಳಿಗೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕರೆ ರಚಿತಾ ರಾಮ್ ಈ ಪರೀಕ್ಷೆಯಲ್ಲಿ ಗೆದ್ದಂತೆ. ಎರಡು ಕಡೆ ರಚಿತಾ ರಾಮ್ ಅವರಿಗೆ ಗೆಲುವು ಸಿಗುತ್ತಾ..? ಅಥವಾ ಒಂದು ಕಡೆ ಸೋಲು ಎದುರಾಗುತ್ತಾ..? ಎನ್ನುವುದನ್ನು ನೋಡಬೇಕಿದೆ.

ಒಟ್ನಲ್ಲಿ ಸ್ಯಾಂಡಲ್‌ವುಡ್ ಇತಿಹಾಸದಲ್ಲಿಯೇ ರಚಿತಾ ರಾಮ್ ಅವರಿಗೆ ಖುದ್ದು ರಚಿತಾ ರಾಮ್ ಅವರೇ ಇದೇ ಮೊದಲ ಬಾರಿ ಸವಾಲು ಹಾಕುತ್ತಿದ್ದಾರೆ. ಪುರುಷ ಪ್ರಧಾನ ಚಿತ್ರರಂಗದಲ್ಲಿ ರಚಿತಾ ರಾಮ್ ಅವರ ಜನಪ್ರಿಯತೆಗೆ ಇದೊಂದು ಚಿಕ್ಕ ಕೈಗನ್ನಡಿ ಎಂದರೆ ಅದು ತಪ್ಪಾಗಲಿಕ್ಕಿಲ್ಲ.

More from Filmibeat

English summary
"Double the magic for Rachita Ram fans! The Sandalwood star takes over the big screen as Landlord and Cult arrive on the same day. Which movie will win the box office battle? Find out more!"
Read more about: rachita ram filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X