ತಾಯಿಯನ್ನು ಕಳೆದುಕೊಂಡ 5 ತಿಂಗಳಲ್ಲೇ ಶುಭಾ ಪೂಂಜಾಗೆ ಮತ್ತೊಂದು ಆಘಾತ- ನಟಿ ಕಣ್ಣೀರು

ಹುಟ್ಟು ಉಚಿತ.. ಸಾವು ಖಚಿತ.. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು.

ನಿಜಾ.. ಏನೇ ಬಂದರೂ.. ಅದು ಹೇಗೆ ಇದ್ದರೂ.. ಸ್ವೀಕರಿಸಲೇ ಬೇಕಂಬುದು ಬದುಕಿನ ಅಲಿಖಿತ ನಿಯಮ. ಆದರೂ ಕೂಡ ಆಪ್ತರ ಸಾವು.. ಕಣ್ಣೆದುರೇ ಮನೆಯ ಸದಸ್ಯರನ್ನು ಕಳೆದುಕೊಂಡಾಗ ಆಗುವ ನೋವು.. ಹಲವರನ್ನು ಕಾಡುತ್ತೆ. ಮನಸಿನ ಮೇಲೆ ಗಾಡವಾದ ಪರಿಣಾಮ ಬೀರುತ್ತೆ. ಸದ್ಯ ಇಂಥಹದ್ದೇ ನೋವಲ್ಲಿ ಶುಭಾ ಪೂಂಜಾ ಇದ್ದಾರೆ.

Double Tragedy Shubha Poonja Heartbroken After Losing Sister-in-Law 5 Months Post Mother s Demise

ಹೌದು, ಶುಭಾ ಪೂಂಜಾ.. ಮೊಗ್ಗಿನ ಮನಸಿನ ಚೆಲುವೆ. ಹೆಚ್ಚು ಕಡಿಮೆ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಪೂರೈಸಿರುವ ಶುಭಾ ಪೂಂಜಾ 8 ತಿಂಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. "ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ" ಎಂದು ಭಾವುಕರಾಗಿದ್ದರು.

ತಾಯಿ ಅಗಲಿಕೆಯ ನೋವು ಇನ್ನೂ ಮಾಸಿಲ್ಲ. ನೋವಿಂದ ಶುಭಾ ಪೂಂಜಾ ಇನ್ನೂ ಹೊರ ಬಂದಿಲ್ಲ. ಅಷ್ಟರಲ್ಲಿಯೇ ಶುಭಾ ಪೂಂಜಾ ಅವರ ಬದುಕಿನಲ್ಲಿ ಮತ್ತೊಂದು ಬರಸಿಡಿಲು ಬಡೆದಿದ್ದು,ಶುಭಾ ಪೂಂಜಾ ಅವರ ಅತ್ತಿಗೆ ನಿಧನರಾಗಿದ್ದಾರೆ.ಇನ್‌ಸ್ಟಾಗ್ರಾಮ್‌ನಲ್ಲಿ ಶುಭಾ ಪೂಂಜಾ ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಶುಭಾ ಪೂಂಜಾ ಈ ಸುಂದರ ವ್ಯಕ್ತಿ ನನ್ನ ಪ್ರೀತಿಯ ಅತ್ತಿಗೆ...ಪಂಜಾಬಿಯಾಗಿ ನಮ್ಮ ಮನೆಗೆ ಬಂದ ಇವರು ನನ್ನ ಅಣ್ಣನನ್ನು ಮದುವೆಯಾದರು. ಕೆಲವೇ ದಿನಗಳಲ್ಲಿ ಪರಿಪೂರ್ಣವಾಗಿ ಮಂಗಳೂರಿನವರಾದರು. ಕನ್ನಡದ ಹುಡುಗಿಯಾಗಿ ಬದಲಾಗಿದರು ಎಂದು ಬರೆದುಕೊಂಡಿದ್ದಾರೆ.

ನನಗೆ ಸಹೋದರಿ.. ನನ್ನ ತಾಯಿಗೆ ಮಗಳು.. ನಾವು ಇನ್ನರು ಸ್ನೇಹಿತರಂತೆ ಇದ್ದೇವು ಎಂದು ಹೇಳಿರುವ ಶುಭಾ ಪೂಂಜಾ ಗಾಸಿಪ್ ಮಾಡುತ್ತಾ... ಶಾಪಿಂಗ್ ಮಾಡುತ್ತಾ...ಜೊತೆಯಲ್ಲಿ ಇರುತ್ತಿದ್ದೇವು, ಎಲ್ಲಾ ಹುಡುಗಿಯರ ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದೆವು,ಯಾಕೆಂದರೆ ನಾವು ಹುಡುಗರೇ ತುಂಬಿದ ಕುಟುಂಬದಲ್ಲಿದ್ದ ಇಬ್ಬರೇ ಹುಡುಗಿಯರಾಗಿದ್ದೆವು ಎಂದು ಹೇಳಿದ್ದಾರೆ. ನವೆಂಬರ್ 10 ರಂದು ನಾವು ಅವರನ್ನು ಕಳೆದುಕೊಂಡೆವು,ನೋವು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ ಎಂದು ಭಾವುಕರಾಗಿದ್ದಾರೆ.

Double Tragedy Shubha Poonja Heartbroken After Losing Sister-in-Law 5 Months Post Mother s Demise

ನನ್ನ ತಾಯಿ ನಿಧನರಾದ ಕೇವಲ 5 ತಿಂಗಳಿನಲ್ಲಿ ನಾನು ನನಗೆ ಇದ್ದ ಒಬ್ಬಳೇ ಸಹೋದರಿಯನ್ನು ಕೂಡ ಕಳೆದುಕೊಂಡೆ ಎಂದು ಹೇಳಿರುವ ಶುಭಾ ಪೂಂಜಾ,ಬಹುದೊಡ್ಡ ಶೂನ್ಯ ನನ್ನನ್ನು ಆವರಿಸಿಕೊಂಡಿದೆ, ಸದಾ ಕಾಲ ನಗು ನಗುತ್ತಾ, ಜೀವನೋತ್ಸಾಹದ ಪ್ರತೀಕದಂತೆ ಅವರಿದ್ದರು ಎಂದು ಹೇಳಿದ್ದಾರೆ.

ಎಂದಿಗೂ ಯಾರ ಬಗ್ಗೆಯೂ ಅವರು ದೂರಲಿಲ್ಲ, ದುಃಖಿತರಾಗಿರಲಿಲ್ಲ, ಸದಾ ಕಾಲ ಖುಷಿಯಾಗಿರುತ್ತಿದ್ದರು, ಜೀವನದಲ್ಲಿ ಏನೇ ಬಂದರು ಖುಷಿಯಾಗಿರಬೇಕು ಎನ್ನುವುದನ್ನು ನಮಗೆ ಕಲಿಸಿದರು ಎಂದು ಹೇಳಿರುವ ಶುಭಾ ಪೂಂಜಾ ಇಂದು ನನಗೆ ನನ್ನ ಅತ್ತಿಗೆ ತುಂಬಾ ನೆನಪಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

More from Filmibeat

English summary
Read Shubha Poonja's powerful post mourning her sister-in-law, who was 'full of life and laughter' despite a long illness. The devastating loss leaves a 'biggest void' in the actress's life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X