»   » ಮೈಸೂರು ಟೆಕ್ಕಿ ಕೈಹಿಡಿದ ಅಣ್ಣಾವ್ರ ಮೊಮ್ಮಗಳು

ಮೈಸೂರು ಟೆಕ್ಕಿ ಕೈಹಿಡಿದ ಅಣ್ಣಾವ್ರ ಮೊಮ್ಮಗಳು

Posted By:
Subscribe to Filmibeat Kannada

ಕನ್ನಡ ವರನಟ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಮೊಮ್ಮಗಳು ಜಿ. ಪಾರ್ವತಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಈಗಷ್ಟೇ ಪದವಿ ಮುಗಿಸಿರುವ ಅವರು ಮೈಸೂರಿನ ಸಾಫ್ಟ್ ವೇರ್‍ ಇಂಜಿನಿಯರ್ ವಿನಯ್ ವಸಂತ್ ಅವರ ಕೈಹಿಡಿದಿದ್ದಾರೆ.

ಅರಮನೆ ಮೈದಾನದಲ್ಲಿ ಸರಳ, ಸುಂದರವಾಗಿ ನಡೆದ ಈ ಮದುವೆ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವದ ದಿನ (ನ.1) ನೆರವೇರಿತು. ಮದುವೆಯ ವರ್ಣರಂಜಿತ ಫೋಟೋಗಳು ಈಗಷ್ಟೇ ಒನ್ ಇಂಡಿಯಾ ಕೈಸೇರಿವೆ. ಮದುವೆ ಫೋಟೋಗಳನ್ನು ಗ್ಯಾಲರಿಯಲ್ಲಿ ಕಣ್ತುಂಬಿಕೊಳ್ಳಿ.

ಜಿ. ಪಾರ್ವತಿ ಅವರು ಲಕ್ಷ್ಮಿ ಗೋವಿಂದರಾಜ್ ಹಾಗೂ ಎಸ್.ಎ. ಗೋವಿಂದರಾಜ್ ಅವರ ಮಗಳು. "ನಮ್ಮೆಲ್ಲರ ಪ್ರೀತಿಪಾತ್ರದ ಹುಡುಗಿ ಪಾರ್ವತಿ. ಅವಳ ಬಾಳು ಸುಖಮಯವಾಗಿರಲಿ" ಎಂದು ಅವರ ಸೋದರಮಾವ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಸಿದರು.

ಪುನೀತ್ ರಾಜ್ ಕುಮಾರ್ ಸಹ ನವಜೋಡಿಗೆ ಶುಭ ಕೋರಿದರು. "ಪಾರ್ವತಿ ನಮ್ಮ ಹಿರಿಯಕ್ಕನ ಮಗಳು. ಅವಳ ಜೀವನದಲ್ಲಿ ಎಲ್ಲಾ ಸುಖ ಸಮೃದ್ಧಿ ಸಂತೋಷ ಸಿಗಲಿ" ಎಂದು ಹಾರೈಸಿದ್ದಾರೆ. ಇನ್ನು ಪಾರ್ವತಿ ಅವರ ಸೋದರಮಾವನಾದ ಶಿವಣ್ಣ ಅವರಂತೂ ಮದುವೆ ಕಾರ್ಯಗಳಲ್ಲಿ ನಿರತರಾಗಿದ್ದರು.

ಮದುವೆ ಊಟವೂ ಭರ್ಜರಿಯಾಗಿ ತಯಾರಿಸಲಾಗಿತ್ತು. ಬಾಳೆಎಲೆ ಊಟ, ಉತ್ತರ ಕನ್ನಡ, ದಕ್ಷಿಣ ಕನ್ನಡ ಶೈಲಿಯ ಭಕ್ಷ್ಯ ಭೋಜ್ಯಗಳು ಅತಿಥಿಗಳ ಹೃನ್ಮನ ತಣಿಸಿದವು. ರೆಬಲ್ ಸ್ಟಾರ್ ಅಂಬರೀಷ್, ಸುಮಲತಾ, ದ್ವಾರಕೀಶ್, ಸರೋಜಾದೇವಿ, ದೊಡ್ಡಣ್ಣ, ಸುದೀಪ್ ಸೇರಿದಂತೆ ಹಲವಾರು ಸಿನೆಮಾ ತಾರೆಗಳು ಮದುವೆಗೆ ಆಗಮಿಸಿ ನೂತನ ದಂಪತಿಗೆ ಶುಭಹಾರೈಸಿದರು. (ಏಜೆನ್ಸೀಸ್)

English summary
Kannada actor late Dr. Rajkumar's Grand Daughter G Parvati marriage held at palace grounds, Bangalore. She tied the knot with Mysore based software engineer Vinay Vasanth. The marriage held on Kannada Rajyotsava day. Puneeth Rajkumar, Shivrajkumar, Raghavendra Rajkumar, Parvathamma Rajkumar and other celebs were present in the event.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada