'#ಪಾರು ಪಾರ್ವತಿ' ಸಿನಿಮಾ ಡಾ.ಬ್ರೋನೇ ಹೀರೋ ಅಂದ್ಕೊಂಡ ನೆಟ್ಟಿಗರ ಕಾಮೆಂಟ್‌ಗಳಂತೂ ಚಿಂದಿ
ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ '#ಪಾರು ಪಾರ್ವತಿ'. ಸೋಲೋ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಿನಿಮಾ ಪ್ರಚಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾ ಟೈಟಲ್ ಹೇಳುವಂತೆ ಇದೊಂದು ಫೀಮೇಲ್ ಓರಿಯೆಂಟೆಡ್ ಅಡ್ವೆಂಚರ್ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ಟ್ರಾವೆಲ್, ಅಡ್ವೆಂಚರ್ ಇಷ್ಟ ಇರೋರಿಗೆ ಇದು ಇಷ್ಟ ಆಗುತ್ತೆ.
ಕಳೆದ ಕೆಲವು ದಿನಗಳಿಂದ ಈ ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡಲಾಗುತ್ತಿದೆ. ದೀಪಿಕಾ ದಾಸ್ ತನ್ನ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಸಿನಿಮಾದಲ್ಲಿ ಅವರ ಪಾತ್ರ ಹೇಗಿದೆಯೋ ಹಾಗೇ ಪ್ರಚಾರವನ್ನು ಅಡ್ವೆಂಚರ್ಸ್ ಆಗಿಯೇ ಮಾಡುತ್ತಿದೆ. ಇವರಿಗೆ ಸಾಥ್ ಕೊಟ್ಟಿರೋದು ಕನ್ನಡದ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಡಾ.ಬ್ರೋ.

ಡಾ.ಬ್ರೋ ಬಂದ್ಮೇಲೆ ಅದರ ಕಳೆನೇ ಬೇರೆಯಾಗಿದೆ. ಈಗಾಗಲೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ '#ಪಾರು ಪಾರ್ವತಿ' ಪ್ರಚಾರ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ಸೆನ್ಸೆಷನ್ ಕ್ರಿಯೇಟ್ ಮಾಡುತ್ತಿದೆ. ಅದರಲ್ಲೂ ದೀಪಿಕಾ ದಾಸ್ ಹಾಗೂ ಡಾ.ಬ್ರೋ ನಡುವಿನ ಸಂಭಾಷಣೆ ಕಚಗುಳಿ ಇಟ್ಟಿದೆ. ನಾಳೆ (ಜನವರಿ 31) ರಿಲೀಸ್ ಆಗುತ್ತಿರುವ ಸಿನಿಮಾ ಬೂಸ್ಟ್ ಕೊಟ್ಟಂತೆ ಆಗಿದೆ.
ರೋಡ್, ಆಫ್ ರೋಡ್, ಟ್ರಾವೆಲ್, ಅಡ್ವೆಂಚರ್, ಫುಲ್ ಫನ್ ಅಂತ ಡಾ.ಬ್ರೋ ಹಾಗೂ ದೀಪಿಕಾ ದಾಸ್ ಪ್ರೇಕ್ಷಕನ್ನು ಥಿಯೇಟರ್ ಬಂದು ನೋಡುವಂತೆ ಮನವಿ ಮಾಡಿದ್ದಾರೆ. ಡಾ.ಬ್ರೋ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಡಾ.ಬ್ರೋ ಏನೇ ವಿಡಿಯೋ ಮಾಡಿ ಹಾಕಿದ್ರೂ ಲಕ್ಷಗಟ್ಟಲೆ ವೀವ್ಸ್ ಸಿಗುತ್ತೆ. ಈಗ ದೀಪಿಕಾ ದಾಸ್ ಜೊತೆಗಿನ ವಿಡಿಯೋ ಕೂಡ ಅಷ್ಟೇ ಲೈಕ್ಸ್ ಸುರಿ ಮಳೆನೇ ಆಗುತ್ತಿದೆ.
ಇನ್ನು ನೆಟ್ಟಿಗರು ಡಾ.ಬ್ರೋ ಸಿನಿಮಾ ಪ್ರಮೋಷನ್ ಮಾಡುತ್ತಿರುವುದಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ. "ನಿಮಗೋಸ್ಕರ ಈ ಮೂವೀ ನೋಡೇ ನೋಡ್ತೀವಿ ಬ್ರೋ" ಎಂದು ನೆಟ್ಟಿಗರೊಬ್ಬರು ಭರವಸೆ ಕೊಟ್ಟಿದ್ದಾರೆ. ಹಾಗೇ "ಡಾ.ಬ್ರೋ ನೀವು ಹೀರೋ ಆಗಿ ಸಿನಿಮಾ ನೋಡ್ತೀವಿ" ಎಂದಿದ್ದಾರೆ. ಇನ್ನೊಬ್ಬರು "ನಮಸ್ಕಾರ ದೇವರು ನೀವು ಹೇಳಿದ ಮೇಲೆ ಮಿಸ್ ಮಾಡೊ ಚಾನ್ಸೇ ಇಲ್ಲ ಖಂಡಿತವಾಗಿ ಥಿಯೇಟರ್‌ಗೆ ಹೋಗಿ ನೋಡುತ್ತೇವೆ..ಅಭಿನಂದನೆಗಳು" ಎಂದಿದ್ದಾರೆ. ಮತ್ತೊಬ್ಬರು "ಕಂಡೂರ್ ಕಾರಲ್ಲಿ ಸುತ್ತಾಡೋದೇ ಮಜಾ ಬೆಂಕಿ ಬಿರುಗಾಳಿ ದೇವ್ರು ನೀನು", "ನಮ್ ದೇವ್ರು ಹೇಳಿದ್ ಮೇಲೆ ಮುಗೀತು ಥಿಯೇಟರ್ ಗೆ ನುಗ್ಗದೇ ಸಿನಿಮಾನ ಗೆಲ್ಸದೆ.. ಜೈ Dr bro", "ನಮಸ್ಕಾರ ಗುರುಗಳೇ ನೀವೇ ಮೂವೀ ಹೀರೋ ಅಂದ್ಕೊಂಡ್ವಿ", "ಬೇರೆ ಅವ್ರ ಹಾಗೆ ಆನ್‌ಲೈನ್ ಜೂಜು ಪ್ರಮೋಷನ್ ಇಲ್ಲ ಒಳ್ಳೆಯದಕ್ಕೆ ಬೆಂಬಲ" ಎಂದು ಕಾಮೆಂಟ್‌ಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಡಾ.ಬ್ರೋ ಹಾಕಿದ ವಿಡಿಯೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪ್ರಮೋಷನಲ್ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಸಿನಿಮಾ ನೋಡುತ್ತೇವೆ ಎಂದು ಹೇಳಿದ್ದಾರೆ. ಕನ್ನಡ ಫೀಮೇಲ್ ಅಡ್ವೆಂಚರ್ ಸಿನಿಮಾಗೆ ಡಾ.ಬ್ರೋ ಪ್ರಚಾರಕ್ಕೆ ಇಳಿದಿದ್ದು ಕಿಕ್ ಕೊಟ್ಟಿದೆ. ಇನ್ನು ಈ ವಾರ ಥಿಯೇಟರ್‌ಗೆ ಲಗ್ಗೆ ಇರುತ್ತಿರುವ ಸಿನಿಮಾಗೆ ಪ್ರೇಕ್ಷಕರು ಏನಂತಾರೆ ಅನ್ನೋ ಕುತೂಹಲವಿದೆ.


Click it and Unblock the Notifications











