Darshan: ಚಾಲೆಂಜಿಂಗ್ ಸ್ಟಾರ್ ಭೇಟಿ ಮಾಡಿದ ದುಬೈ ಶೇಖ್: ಈ ಭೇಟಿಗೆ ಕಾರಣ ಏನು?

ನಟ ದರ್ಶನ್ ಸಿನಿಮಾಗಳಲ್ಲಿ ನಟಿಸೋದ್ರ ಜೊತೆಗೆ ಅರಣ್ಯ ಇಲಾಖೆ, ಕೃಷಿ ಇಲಾಖೆಯ ರಾಯಭಾರಿ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪ್ರಾಣಿ ಪಕ್ಷಿ ಪ್ರೀತಿ, ಸಹಾಯ ಮಾಡುವ ಗುಣದಿಂದಲೂ ಅಭಿಮಾನಿಗಳಿವೆ ಹೆಚ್ಚು ಹತ್ತಿರವಾಗಿದ್ದಾರೆ. ದುಬೈ ಶೇಖ್ ಒಬ್ಬರನ್ನು ದರ್ಶನ್ ಭೇಟಿ ಮಾಡಿರುವ ಫೋಟೊ, ವಿಡಿಯೋ ಕಳೆದೆರಡು ಸಿನಿಮಾಗಳಿಂದ ಸದ್ದು ಮಾಡ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಚಿತ್ರೀಕರಣ ಭರದಿಂದ ಆಗ್ತಿದೆ. ಇತ್ತೀಚೆಗೆ ಕೇರಳದಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಿ ಬಂದಿದೆ ಚಿತ್ರತಂಡ. ಮಾಲಾಶ್ರೀ ಪುತ್ರಿ ಆರಾಧನಾ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ದರ್ಶನ್, ಆರಾಧನಾ ಹಾಗೂ ಮಾಲಾಶ್ರೀ ಫ್ಲೈಟ್ ಏರಿ ಪ್ರಯಾಣಿಸಿರುವ ಫೋಟೊ ಸದ್ದು ಮಾಡಿತ್ತು.

Dr. Bu Abdullah meets Kaatera Actor Darshan in stony brook restaurant

ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಹಾಗಾಗಿ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ ಅದಕ್ಕೂ ಮುನ್ನ 'ಗರಡಿ' ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್ ಅಭಿಮಾನಿಗಳಿಗೆ ದರ್ಶನ ಕೊಡಲಿದ್ದಾರೆ. ಯೋಗರಾಜ್ ಭಟ್ ಈ ಗ್ರಾಮೀಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಬಿಡುವಿನ ಸಮಯದಲ್ಲಿ ದರ್ಶನ್ ಹೆಚ್ಚು ಸ್ನೇಹಿತರ ಜೊತೆ ಸುತ್ತಾಡುತ್ತಾ ಕಾಲ ಕಳೆಯುತ್ತಾರೆ. ಒಮ್ಮೆ ಸ್ನೇಹ ಬೆಳೆಸಿದರೆ ಮುಗೀತು, ಅವರಿಗಾಗಿ ಪ್ರಾಣ ಕೊಡೋಕು ಸಿದ್ಧ ಎನ್ನುವಂತಹ ಆಸಾಮಿ ಚಾಲೆಂಜಿಂಗ್ ಸ್ಟಾರ್.

ಸ್ನೇಹಿತರ ಸಿನಿಮಾ ಅಥವಾ ಯಾವುದೇ ಕೆಲಸಕ್ಕೂ ದರ್ಶನ್ ಬೆಂಬಲವಾಗಿ ನಿಲ್ತಾರೆ. ಇತ್ತೀಚೆಗೆ ಸ್ನೇಹಿತನ 'ಸ್ಟೋನಿ ಬ್ರೂಕ್ ರೆಸ್ಟೋರೆಂಟ್' ರೆಸ್ಟೋರೆಂಟ್‌ನ 4ನೇ ವರ್ಷದ ವಾರ್ಷಿಕೋತ್ಸವದಲ್ಲಿ ದರ್ಶನ್ ಭಾಗಿ ಆಗಿದ್ದರು. ಆರ್‌ ಆರ್‌ ನಗರದಲ್ಲಿರುವ ಈ ರೆಸ್ಟೋರೆಂಟ್‌ಗೆ ದರ್ಶನ್ ಆಗ್ಗಾಗ್ಗೆ ಹೋಗುತ್ತಿರುತ್ತಾರೆ. ಇನ್ನು ಸಂಭ್ರಮಾಚರಣೆ ವೇಳೆ ದುಬೈನ ಖ್ಯಾತ ಉದ್ಯಮಿ ಡಾ. ಬು ಅಬ್ದುಲ್ಲಾ, ದರ್ಶನ್‌ನ ಭೇಟಿ ಮಾಡಿದ್ದಾರೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಸಾಕಷ್ಟು ವ್ಯಾಪಾರ ವ್ಯವಹಾರ ನಡೆಸುತ್ತಿರುವ ಡಾ ಬು ಅಬ್ದುಲ್ಲಾ ಬಹಳ ಜನಪ್ರಿಯರಾಗಿದ್ದಾರೆ.

ಈ ಹಿಂದೆ ಸಾಕಷ್ಟು ಬಾಲಿವುಡ್ ತಾರೆಯರನ್ನು ಕೂಡ ಡಾ. ಬು ಅಬ್ದುಲ್ಲಾ ಭೇಟಿ ಮಾಡಿದ್ದರು. 'ಸ್ಟೋನಿ ಬ್ರೂಕ್ ರೆಸ್ಟೋರೆಂಟ್' ರೆಸ್ಟೋರೆಂಟ್‌ ವಾರ್ಷಿಕೋತ್ಸವಕ್ಕೆ ಬಂದಿದ್ದ ದುಬೈ ಶೇಖ್, ಕೆಲವೊತ್ತು ದರ್ಶನ್ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಅವರ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬರೆಯಲಾಗಿದೆ. "ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ದರ್ಶನ್ ತೂಗುದೀಪ ಅವರನ್ನು ಭೇಟಿಯಾಗಿ ಡಾ. ಬು ಅಬ್ದುಲ್ಲಾ ಥ್ರಿಲ್ ಆಗಿದ್ದಾರೆ. ಅವರು ಸಿನಿಮಾಗಳು ಹಾಗೂ ಚಿತ್ರರಂಗದ ಮೇಲಿನ ತಮ್ಮ ಪ್ರೀತಿ ಬಗ್ಗೆ ಬಹಳ ಚರ್ಚಿಸಿದರು. ಡಾ. ಬು ಅಬ್ದುಲ್ಲಾ ಅವರಿಗೆ ಇದು ಸ್ಮರಣೀಯ ಭೇಟಿಯಾಗಿತ್ತು" ಎಂದು ಪೋಸ್ಟ್ ಮಾಡಿದ್ದಾರೆ.

ಚಿತ್ರರಂಗದ ಬಗ್ಗೆ ಬಹಳ ಆಸಕ್ತಿ ಇರುವ ಡಾ. ಬು ಅಬ್ದುಲ್ಲಾ ಸಿನಿಮಾ ನಿರ್ಮಾಣಕ್ಕೆ ಕೈ ಹಾಕ್ತಾರಾ? ನಟ ದರ್ಶನ್ ಜೊತೆಗೂ ಸಿನಿಮಾ ಮಾಡ್ತಾರಾ? ಎನ್ನುವ ಊಹಾಪೋಹ ಅಭಿಮಾನಿಗಳಿಗೆ ಶುರುವಾಗಿದೆ. ಇತ್ತೀಚೆಗೆ ಡಾ. ಬು ಅಬ್ದುಲ್ಲಾ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ಭೇಟಿ ಆಗಿದ್ದರು. ಇನ್ನು ನಟ ದರ್ಶನ್ ವೈಲ್ಡ್‌ಲೈಫ್‌ ಫೋಟೊಗ್ರಫಿ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ದರ್ಶನ್ ಕ್ಲಿಕ್ಕಿಸಿರುವ ಕೆಲ ಫೋಟೊಗಳು 'ಸ್ಟೋನಿ ಬ್ರೂಕ್ ರೆಸ್ಟೋರೆಂಟ್' ರೆಸ್ಟೋರೆಂಟ್‌ ಗೋಡೆಗಳಲ್ಲಿ ರಾರಾಜಿಸುತ್ತಿದೆ.

More from Filmibeat

English summary
Dr Bu Abdullah meets actor darshan during his India visit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X