ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ ಲೋಕಾರ್ಪಣೆ
Recommended Video
ಕನ್ನಡ ಚಲನ ಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಇಂದು ಉದ್ಘಾಟನೆಯಾಗಿದೆ. ಬೆಂಗಳೂರಿನ ಯಡಿಯೂರು ವಾರ್ಡ್ ವ್ಯಾಪ್ತಿಯ ಡಾ. ಪಾರ್ವತಮ್ಮ ರಾಜ್ ಕುಮಾರ್ ರಸ್ತೆ ಹಾಗೂ ಸೌತ್ ಎಂಡ್ ವೃತ್ತ ಒಂದುಗೂಡುವ ಸ್ಥಳದಲ್ಲಿ ಪುತ್ಥಳಿ ನಿರ್ಮಿಸಲಾಗಿದ್ದು, ಉಪಮುಖ್ಯಮಂತ್ರಿ ಡಿ.ಪರಮೇಶ್ವರ್ ಲೋಕಾರ್ಪಣೆ ಮಾಡಿದರು.
ಕನ್ನಡ ಚಲನಚಿತ್ರ ಇತಿಹಾಸದಲ್ಲೆ ಮೊದಲ ಬಾರಿಗೆ ನಿರ್ಮಾಪಕಿಯೊಬ್ಬರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿರುವ ಮಾಜಿ ಕಾರ್ಪೋರೇಟ್ ಎನ್ ಎಂ ರಮೇಶ್ ನೇತೃತ್ವದಲ್ಲಿ ಈ ಪ್ರತಿಮೆ ನಿರ್ಮಾಣವಾಗಿ.
ಕರ್ನಾಟಕ ರಾಜ್ಯದ ಅಂತ್ಯಂತ ಯಶಸ್ವಿ ಮತ್ತು ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ಸಾಧನೆಯನ್ನು ಸಾಮಾಜಿಕ ಕಾರ್ಯಗಳನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪ್ರತಿಮಿ ಸ್ಥಾಪಿಸಲಾಗಿದೆ. ವಿಶೇಷ ಅಂದ್ರೆ ಪಾರ್ವತಮ್ಮ ಅವರ ಪ್ರತಿಮೆ ಪಕ್ಕದಲ್ಲೆ ಡಾ ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆ ಕೂಡ ಇದೆ.

ಇಂದು ಡಾ. ಪಾರ್ಮತಮ್ಮ ಅವರ ಎರಡನೆ ಪುಣ್ಯ ತಿಥಿ. ಈ ಪ್ರಯುಕ್ತ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ರಾಜ್ ಕುಮಾರ್ ಕುಟುಂಬ ಅಲ್ಲಿ ಹಾಜರಿತ್ತು. ಈ ಕಂಚಿನ ಪ್ರತಿಮೆಯನ್ನು ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರು 80 ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡಿಗರ ಆರಾಧ್ಯದೈವ ಡಾ ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು, ಜನಪ್ರಿಯತೆಯನ್ನು ಜಗತ್ತಿಗೆ ತಿಳಿಯುವಂತೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಪಾರ್ವತಮ್ಮ ರಾಜ್ ಕುಮಾರ್. ವಜ್ರೇಶ್ವರಿ ಕಂಬೈನ್ ಸಂಸ್ಥೆಯ ಮೂಲಕ ನೂರಾರು ಕಾರ್ಮಿಕರಿಗೆ ಸುಮಾರು ಮೂರುವರೆ ದಶಕಗಳ ಕಾಲ ಅನ್ನದಾತರಾಗಿದ್ದರು.
ಶಕ್ತಿದಾಮ ಸೇವ ಕೇಂದ್ರವನ್ನು ಸ್ಥಾಪಿಸಿ ನಿರ್ಗತಿಕ ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಜೀವನ ರೂಪಿಸಿಕೊಟ್ಟಿದ್ದಾರೆ. ಅಲ್ಲದೆ ನೂರಾರು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣಾವಕಾಶವನ್ನ ಕಲ್ಪಸಿಕೊಟ್ಟಿದ್ದಾರೆ.


Click it and Unblock the Notifications











