»   » ಒಂದೇ ಸಿನಿಮಾದಲ್ಲಿ ಬರ್ತಿದ್ದಾರೆ ಡಾ.ಮುತ್ತಪ್ಪ-ಡಾ.ಪುಟ್ಟಪ್ಪ.!

ಒಂದೇ ಸಿನಿಮಾದಲ್ಲಿ ಬರ್ತಿದ್ದಾರೆ ಡಾ.ಮುತ್ತಪ್ಪ-ಡಾ.ಪುಟ್ಟಪ್ಪ.!

Posted By: Pavithra
Subscribe to Filmibeat Kannada

ಡಾ.ಮುತ್ತಪ್ಪ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ . ಈ ಹೆಸರಿಗೆ ಇಂಟ್ರೊಡಕ್ಷನ್ ಬೇಕಿಲ್ಲ. ಪ್ರತಿ ಕನ್ನಡ ಸಿನಿಮಾ ಅಭಿಮಾನಿಯೂ ಆರಾಧಿಸುವ ದೈವ ಡಾ ರಾಜ್ ಕುಮಾರ್ ಎನ್ನುವುದು ತಿಳಿದಿರುವ ವಿಚಾರ. ಇನ್ನೂ ಡಾ.ಪುಟ್ಟಪ್ಪ ಬಗ್ಗೆಯೂ ಇಂಟ್ರೋಡಕ್ಷನ್ ಬೇಕಿಲ್ಲ. ಸಣ್ಣ ಮಗುವಿನಿಂದಲೂ ಇವರ ಬಗ್ಗೆ, ಇವರ ಬರವಣಿಗೆಯ ಬಗ್ಗೆ ಪ್ರತಿಯೊಬ್ಬರು ಓದಿಕೊಂಡೇ ಬೆಳೆದಿರುತ್ತಾರೆ. ಅವರೇ ಕುಪ್ಪುಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪ.

ಎಲ್ಲಾ ಸರಿ ಈಗ್ಯಾಕೆ ಇವರ ಬಗ್ಗೆ ಚರ್ಚೆ ಅಂತೀರಾ ವಿಚಾರ ಇದೆ. ಡಾ ಪುಟ್ಟಪ್ಪ ಹಾಗೂ ಡಾ ಮುತ್ತಪ್ಪ ಒಂದೇ ಸಿನಿಮಾದಲ್ಲಿ ಬಂದ್ರೆ ಹೇಗಿರುತ್ತೆ. ಅಣ್ಣವ್ರನ್ನ ಅಭಿಮಾನಿಸುವ ಅಭಿಮಾನಿ, ಕುವೆಂಪು ಅವ್ರನ್ನ ಬರವಣಿಗೆಯನ್ನ ಪ್ರೀತಿ ಮಾಡುವ ಜನರಿಗೆ ಈ ಕಾಂಬಿನೇಷನ್ ಸಖತ್ ಇಷ್ಟ ಆಗುತ್ತೆ.

 dr puttappa and dr muttappa join hands for a film

ಕುವೆಂಪು ಅವರನ್ನ ಕಂಡರೆ ಡಾ ರಾಜ್ ಕುಮಾರ್ ಅವರಿಗೆ ತುಂಬಾನೇ ಗೌರವ ಹಾಗೂ ಅಭಿಮಾನವಿತ್ತು. ಅದೇ ರೀತಿಯಲ್ಲಿ ಪುಟ್ಟಪ್ಪ ಅವರಿಗೂ ಕೂಡ ಡಾ ರಾಜ್ ಕುಮಾರ್ ಅವರ ಸರಳತೆ ಮತ್ತು ಸಜ್ಜನಿಕೆಯ ಮೇಲೆ ಅಪಾರ ಪ್ರೀತಿ ಗೌರವಿತ್ತು. ಈ ಎರಡು ಅದ್ಭುತ ಪ್ರತಿಭೆಗಳು ಕನ್ನಡ ನಾಡು ನುಡಿಗಾಗಿ ಸಾಕಷ್ಟು ಕೊಡುಗೆ ನೀಡಿದೆ. ಅದೇ ವಿಚಾರ ಈಗ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ.

 dr puttappa and dr muttappa join hands for a film

ನಿರ್ದೇಶಕ ಪ್ರಕಾಶ್ ರಾಜ್ ಮೇಹು 'ಡಿ.ಎನ್.ಎ' ಎಂಬ ಸಿನಿಮಾದಲ್ಲಿ ಇವರಿಬ್ಬರ ಆದರ್ಶವನ್ನ ತರಲು ಸಜ್ಜಾಗಿದ್ದಾರೆ. ಡಾ ರಾಜ್ ಕುಮಾರ್ ಹಾಗೂ ಕುವೆಂಪು ಇಬ್ಬರು ಕರ್ನಾಟಕ ಮತ್ತು ಕನ್ನಡಕ್ಕಾಗಿ ಸಾಕಷ್ಟು ಹೋರಾಟ ಮಾಡಿದವರು. ಇವರಿಬ್ಬರ ಮಧ್ಯೆ ಯಾವುದೇ ರಕ್ತ ಸಂಬಂಧವಿಲ್ಲವಾದರೂ ಲಕ್ಷಾಂತರ ಜನರನ್ನ ಒಟ್ಟಿಗೆ ಕೂಡಿಸಿಕೊಂಡು ಕನ್ನಡಕ್ಕಾಗಿ ಹೋರಾಟ ಮಾಡಿದ್ದರು. ಇದೇ ರೀತಿ ರಕ್ತ ಸಂಬಂಧಗಳು ಮಾತ್ರ ಸಂಬಂಧವಲ್ಲ, ಬೇರೆ ಸಂಬಂಧಗಳೇ ಹೆಚ್ಚು ಅಂತ ಜನರಿಗೆ ತಿಳಿಸಲು ಹೊರಟಿದೆ ಸಿನಿಮಾತಂಡ

'ಡಿ.ಎನ್.ಎ' ಸಿನಿಮಾದಲ್ಲಿ 'ಯು-ಟರ್ನ್' ಖ್ಯಾತಿಯ ರೋಜರ್ ನಾರಾಯಣ್ ನಾಯಕನಾಗಿ ಅಭಿನಯಿಸುತ್ತಿದ್ದು, ನಟಿ ಯಮುನ ಹಾಗೂ ಅಚ್ಚುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯ ಚಿತ್ರದ 70 ರಷ್ಟು ಭಾಗ ಚಿತ್ರೀಕರಣ ಮುಗಿದಿದ್ದು ಮಾಸ್ಟರ್ ಆನಂತ್ ಪುತ್ರ ವೀರನ್ ಹಾಗೂ ದೃವಾ ಮೇಹು ಸಿನಿಮಾದಲ್ಲಿ ಅಭಿನಯಿಸಿದ್ದಾರೆ

ನಿರ್ದೇಶಕ ಪ್ರಕಾಶ್ ರಾಜ್ ಮೇಹು ಸುಮಾರು ಹತ್ತು ವರ್ಷಗಳ ಕಾಲ ಅಣ್ಣಾವ್ರ ಸಂಸ್ಥೆಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇದೇ ಕಾರಣದಿಂದ ಅಣ್ಣಾವ್ರ ಹಾಗೂ ಪುಟ್ಟಪ್ಪ ಅವರ ಆದರ್ಶಗಳನ್ನ ತಮ್ಮ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ರಾಜ್ಯೋತ್ಸವದ ವಿಶೇಷವಾಗಿ ಸಿನಿಮಾದ ವಿಭಿನ್ನ ಪೋಸ್ಟರ್ ರಿಲಿಸ್ ಮಾಡುವ ಮೂಲಕ ಚಿತ್ರತಂಡ ಅಧಿಕೃತವಾಗಿ ಚಿತ್ರದ ಪ್ರಮೋಷನ್ ಗೆ ಚಾಲನೆ ನೀಡಿದೆ.

English summary
U Trun film Roger narayan debut has a hero in DNA movie. ಯು ಟರ್ನ್ ಸಿನಿಮಾ ಖ್ಯಾತಿಯ ರೋಜರ್ ನಾರಾಯಣ್ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ 'ಡಿ ಎನ್ ಎ'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X