ಡಾ.ರಾಜ್ ಕಪ್ ಸೀಸನ್ 6: ಚಂದನವನದಲ್ಲಿ ನ. 28 ರಿಂದ ಡಿ.10ರ ವರೆಗೆ ಕ್ರಿಕೆಟ್ ಹಬ್ಬ

ಇತ್ತೀಚೆಗೆ ಕಿರುತೆರೆ ಕಲಾವಿದರ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ಘೋಷಣೆಯಾಗಿತ್ತು. ಹುಬ್ಬಳ್ಳಿಯಲ್ಲಿ ಜನವರಿ 24 ರಿಂದ 28ರ ವರೆಗೆ ಐದು ದಿನ ಟೆಲಿವಿಷನ್ ಪ್ರೀಮಿಯರ್ ಲೀಗ್ ಜರುಗಲಿದೆ. ಇದರ ಬೆನ್ನಲ್ಲೆ ಸ್ಯಾಂಡಲ್‌ವುಡ್‌ನಲ್ಲಿಯೂ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗ್ತಿದೆ.

ಡಾ.ರಾಜ್ ಕಪ್ ಸೀಸನ್ 6ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದಕ್ಕಾಗಿ ಚಂದನವನದ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಆಯೋಜಕರಾದ ರಾಜೇಶ್ ಬ್ರಹ್ಮಾವರ ಸೇರಿದಂತೆ ಇತರರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Dr. Raj Cup Season 6 will be held from November 28 to December 10

ಡಾ.ರಾಜ್ ಕಪ್ ಸೀಸನ್ 6

ಈ ಬಾರಿಯ ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28 ರಿಂದ ಡಿಸೆಂಬರ್ 10ರ ವರೆಗೆ ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿಸೆಂಬರ್ 3 ಮತ್ತು 4ಕ್ಕೆ ಸಿಂಗಾಪುರ್, ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್ ನಲ್ಲಿ ಲೀಗ್ ಮ್ಯಾಚ್ ನಡೆಯಲಿವೆ. ರಾಜ್ ಕಪ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಲಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ ಕಪ್ ಆಯೋಜಕ ರಾಜೇಶ್ ಬ್ರಹ್ಮಾವರ , "ಇಷ್ಟು ವರ್ಷ ನಡೆದಿದ್ದ ರಾಜ್ ಕಪ್ ಬೇರೆ. ಈ ವರ್ಷ ಆಗುತ್ತಿರುವುದೇ ಬೇರೆ. ಇದಕ್ಕೆ ಕಾರಣ ಆನಂದ್ ಆಡಿಯೋ. ರಾಜ್ ಕಪ್‌ಗೆ ತೊಂದರೆ ಆಗಬಾರದು ಎಂದು ಸ್ಪೋರ್ಟ್ ಚಾನೆಲ್ ಮಾಡಿ ಲೈವ್ ಮಾಡುತ್ತಿದ್ದಾರೆ. ಎಲ್ಲಾ ರೀತಿಯಿಂದಲೂ ಬೆನ್ನೆಲುಬಾಗಿ ನಿಂತಿದ್ದಾರೆ" ಎಂದು ಹೇಳಿದ್ದಾರೆ.

ಡಾ. ರಾಜ್ ಕಪ್ ಸೀಸನ್ 6 ನಲ್ಲಿ 12 ತಂಡಗಳು

ಈ ಬಾರಿಯ ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿದೆ.

1. ಸಮೃದ್ದಿ ಫೈಟರ್ಸ್ ತಂಡ- ಓನರ್ ಮಂಜುನಾಥ್ ಓನರ್

2.DX ಮ್ಯಾಕ್ಸ್ ಲೈನ್ಸ್ ತಂಡ- ಓನರ್ ದಯಾನಂದ್

3. ರಾಮನಗರ ರಾಕರ್ಸ್ ತಂಡ- ಓನರ್ ಮಹೇಶ್ ಗೌಡ

4. ELV ಲಯನ್ ಕಿಂಗ್ಸ್ ತಂಡ - ಓನರ್ ಪುರುಷೋತ್ತಮ್ ಭಾಸ್ಕರ್

5. AVR ಟಸ್ಕರ್ಸ್ ತಂಡ - ಓನರ್ ಅರವಿಂದ್ ರೆಡ್ಡಿ

6. KKR ಕಿಂಗ್ಸ್ ತಂಡ - ಓನರ್ ಲಕ್ಷ್ಮೀ ಕಾಂತ್ ರೆಡ್ಡಿ

7.Rabit ರೇಸರ್ಸ್ ತಂಡ- ಓನರ್ ಅರು ಗೌಡ

8. ಮಯೂರ ರಾಯಲ್ಸ್ ತಂಡ- ಓನರ್ ಸೆಂಥಿಲ್

9. ರಾಯಲ್ ಕಿಂಗ್ಸ್ ತಂಡ- ಓನರ್ ಶ್ರೀರಾಮ್ ಮತ್ತು ಮುಖೇಶ್

10. ಕ್ರಿಕೆಟ್ ನಕ್ಷತ್ರ ತಂಡ- ಓನರ್ ನಕ್ಷತ್ರ ಮಂಜು

11. ಅಶು ಸೂರ್ಯ ಸೂಪರ್ ಸ್ಟಾರ್ ತಂಡ- ಓನರ್ ರಂಜಿತ್ ಪಯಾಜ್ ಖಾನ್

12. ರುಚಿರಾ ರೇಂಜರ್ಸ್ ತಂಡ- ಓನರ್ ರಾಮ್

ರಾಜ್ ಕಪ್ ಸೀಸನ್ 6ಕ್ಕೆ ಸಿನಿತಾರೆಯರ ಬೆಂಬಲ

ರಾಜ್ ಕಪ್ ಸೀಸನ್ 6ರಲ್ಲಿ ನಟರಾದ ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಡಾ,ರಾಜ್ ಕಪ್ ಗಾಗಿ ಆನಂದ್ ಆಡಿಯೋ ಹೊಸ ಹೆಜ್ಜೆ ಇಟ್ಟಿದ್ದು, ಈ ಪಂದ್ಯಾವಳಿಗಾಗಿ ಸ್ಪೋರ್ಟ್ ಯೂಟ್ಯೂಬ್ ಪ್ರಾರಂಭ ಮಾಡ್ತಿದ್ದು, ಲೈವ್ ಮ್ಯಾಚ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

More from Filmibeat

English summary
Dr. Raj Cup 6 will be held from November 28 to December 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X