ಬೆಂಗಳೂರಲ್ಲಿ ರಾಜ್ ಕಪ್ 2 ದಿನಗಳ ರಂಗಿನಾಟ
ಹಾಸನದಲ್ಲಿ ಎರಡು ದಿನ ರಾಜ್ ಕಪ್ ನಡೆದ್ರೂ ಲೀಗ್ ಪಂದ್ಯಾಟಗಳು ಮುಗಿದಿಲ್ಲ. ಇನ್ನೂ ಆರು ಪಂದ್ಯಗಳು ಬಾಕಿ ಉಳಿದಿದ್ದು ಬೆಂಗಳೂರಲ್ಲಿ ಮತ್ತೆ ರಾಜ್ ಕಪ್ ರಂಗಿನಾಟ ಇದೇ 7ರಿಂದ ಶುರುವಾಗಲಿದೆ.
ಆರು ಪಂದ್ಯಗಳನ್ನ ಒಂದು ದಿನ ನಡೆಸೋದು ಅಸಾಧ್ಯವಾಗಿರೋದ್ರಿಂದ ಮೊದಲ ಎರಡು ಪಂದ್ಯಗಳನ್ನ ಪ್ಯಾಲೇಸ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಮೊದಲ ಪಂದ್ಯಗಳಲ್ಲಿ ಉಪೇಂದ್ರ ನಾಯಕತ್ವದ ತಂಡ ಮತ್ತು ಪವರ್ ಸ್ಟಾರ್ ನಾಯಕತ್ವದ ತಂಡಗಳು ಸೆಣೆಸಾಡಲಿವೆ. [ಮಲೆನಾಡಿನ ಮಡಿಲಲ್ಲಿ ಡಾ.ರಾಜ್ ಕಪ್ ಆರಂಭ]

ಎರಡನೇ ಪಂದ್ಯ ಥ್ರಿಲ್ಲರ್ ಮಂಜು ತಂಡ ಮತ್ತು ಯಶ್ ನಾಯಕತ್ವದ ತಂಡದ ನಡುವೆ ರೋಚಕ ಪಂದ್ಯ ಇದೇ 7ರಂದು ಭಾನುವಾರ ನಡೆಯಲಿದೆ. ಉಳಿದ ನಾಲ್ಕು ಪಂದ್ಯಗಳು ಜಯನಗರ ನ್ಯಾಷನಲ್ ಕಾಲೇಜು ಗ್ರೌಂಡ್ ನಲ್ಲಿ ಇದಾದ 15 ದಿನಗಳ ನಂತ್ರ ಅಂದ್ರೆ ಡಿಸೆಂಬರ್ 21ರಂದು ನಡೆಯಲಿವೆ.
ಅಲ್ಲಿಗೆ ಲೀಗ್ ಹಂತದ ಪಂದ್ಯಾಟ ಮುಕ್ತಾಯವಾಗಲಿದೆ. ಇಲ್ಲಿ ಗೆದ್ದ ನಾಲ್ಕು ತಂಡಗಳು ಮಲೇಷ್ಯಾದಲ್ಲಿ ಸೆಮಿಫೈನಲ್ ಮತ್ತು ಫೈನಲ್ ಕದನಕ್ಕೆ ಅಣಿಯಾಗಲಿವೆ. ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಮತ್ತು ಕಲಾವಿದರ ಒಕ್ಕೂಟ ಆಯೋಜಿಸಿರುವ ಕ್ರೀಡಾಕೂಟ ಇದು.
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ಯಶ್, ಲೂಸ್ ಮಾದ ಯೋಗಿ, ದುನಿಯಾ ವಿಜಯ್ ಅವರು ತಂಡಗಳ ನೇತೃತ್ವವಹಿಸಿದ್ದಾರೆ. ಜೊತೆಗೆ ಶಾಸಕ ರಾಜೂಗೌಡ, ಬೆಂಗಳೂರಿನ ಪತ್ರಕರ್ತರು ಕೂಡ ಕೈಜೋಡಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











