»   » ರಾಜ್ ಫ್ಯಾಮಿಲಿಗೆ ಇಂಡಸ್ಟ್ರಿ ಆಳುವ ದುರುದ್ದೇಶವಿಲ್ಲ

ರಾಜ್ ಫ್ಯಾಮಿಲಿಗೆ ಇಂಡಸ್ಟ್ರಿ ಆಳುವ ದುರುದ್ದೇಶವಿಲ್ಲ

Posted By:
Subscribe to Filmibeat Kannada

ಎಲ್ಲರಿಗೂ ನಮಸ್ಕಾರ ಎಂದು ತಮ್ಮ ಭಾಷಣವನ್ನು ಆರಂಭಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಆರಂಭದಿಂದಲೂ ಡಬ್ಬಿಂಗ್ ಬೇಡ ಎಂದು ಹೇಳುತ್ತಿದ್ದೇನೆ ನಾನು. ಡಬ್ಬಿಂಗ್ ವಿರೋಧಿಸುತ್ತಿರುವವರಲ್ಲಿ ನಾನೂ ಒಬ್ಬ. ಇಡೀ ನಮ್ಮ ಚಿತ್ರರಂಗದ ಕಲಾವಿದರೂ ಡಬ್ಬಿಂಗ್ ಬೇಡ ಎಂದೇ ಹೇಳುತ್ತಿದ್ದಾರೆ.

ಇದಕ್ಕೆಲ್ಲಾ ಮೊದಲು ಥ್ಯಾಂಕ್ಸ್ ಹೇಳಬೇಕಾಗಿದ್ದು ನಿಮಗೆ. ಎಷ್ಟೇ ಬಿಸಿಲನ್ನೂ ಲೆಕ್ಕಿಸದೆ ಬಂದಿದ್ದೀರಿ. ನಮಗೆಲ್ಲಾ ತೋರಿಸುತ್ತಿರುವ ಪ್ರೀತಿ ಕಾಳಜಿಗೆ ಕೃತಜ್ಞತೆಗಳು. ದಯವಿಟ್ಟು ಶಿವಣ್ಣ, ಶಿವಣ್ಣ ಎಂದು ಕರೆಯಬೇಡಿ. ಇವರ ನಾಯಕತ್ವ ಅವರ ನಾಯಕತ್ವ ಎಂಬುದು ಬೇಡ. ಕನ್ನಡ ಎಂಬುದು ಎಲ್ಲರಿಗೂ ಒಂದೇನೆ. ಎಲ್ಲರೂ ನಾಯಕರೇ. ನೀವು ನಾವು ಎಲ್ಲರೂ ನಾಯಕರೇ.

ದಯವಿಟ್ಟು ಇದೆಲ್ಲಾ ಶಿವಣ್ಣನಿಂದ ಆಯಿತು ಎಂದು ಹೇಳಬೇಡಿ. ಇದು ಎಲ್ಲರಿಂದಲೂ ಆಯಿತು. ನಾನು ಏನು ಹೇಳುತ್ತಿದ್ದೇನೋ ಅದನ್ನು ಸಮಾಧಾನಚಿತ್ತದಿಂದ ಕೇಳಿಸಿಕೊಳ್ಳಿ. ಸುಮ್ಮನೆ ಅರಚಬೇಡಿ.

Dr Raj family do not have bad faith to rule industry

ಕನ್ನಡ ಇಂಡಸ್ಟ್ರಿ ಎಂದರೆ ಕೇವಲ ಶಿವರಾಜ್ ಕುಮಾರ್ ಮಾತ್ರ ಅಲ್ಲ. ಎಷ್ಟೋ ಜನ ಇದ್ದಾರೆ. ಅವರೆಲ್ಲರನ್ನೂ ಬೆಳೆಸಬೇಕು. (ಅಭಿಮಾನಿಗಳ ಗಲಾಟೆ) ಒಂದು ನಿಮಿಷ ಓವರ್ ಆಕ್ಟಿಂಗ್ ಮಾಡ್ಬೇಡಿ. ಒಂದು ಕ್ಷಣ ಸುಮ್ಮನಿರಿ. ಇದೆಲ್ಲವೂ ಶಿವಣ್ಣನಿಂದಲೇ ಆಗಿದ್ದು ಎಂದು ಮಾತ್ರ ದಯವಿಟ್ಟು ಹೇಳಬೇಡಿ.

ಇಷ್ಟೆಲ್ಲಾ ಕಲಾವಿದರು ನಮ್ಮೊಂದಿಗೆ ಇದ್ದಾರೆ. ನಿಮ್ಮೆಲ್ಲರ ಸಪೋರ್ಟ್ ಇಲ್ಲದಿದ್ದರೆ ಶಿವಣ್ಣ ಒಬ್ಬ ಏನು ಮಾಡಲು ಸಾಧ್ಯ ಹೇಳಿ? ಶಿವಣ್ಣನನ್ನು ಇವರಲ್ಲಿ ಒಬ್ಬನನ್ನಾಗಿ ನೋಡಿ. ಶಿವಣ್ಣನನ್ನು ಶಿವಣ್ಣನಾಗಿ ಕಂಡರೆ ಆಗಲ್ಲ. ಎಲ್ಲರ ಮಧ್ಯದಲ್ಲಿ ಶಿವಣ್ಣನನ್ನು ನೋಡಬೇಕು.

ಗ್ರೌಂಡ್ ಫುಲ್ ಆದರೇನೆ ಜನ ಅಂತಲ್ಲಾ. ಐದು ಜನ ಬಂದರೂ ಜನಾನೇ. ರೆಕಗ್ನಿಷನ್ ಯಾವಾಗಲೂನೆ ಒಬ್ಬನಿಂದಲೂ ಸಿಕ್ಕಿದರೂ ಅಷ್ಟೇ ಕೋಟ್ಯಾಂತರ ಜನರಿಂದ ಸಿಕ್ಕಿದರೂ ಒಂದೇ. ಒಬ್ಬ ಇನ್ನೊಬ್ಬನಿಗೆ ಹೇಳ್ತಾನೆ. ಅವರು ಇನ್ನೊಂದಿಷ್ಟು ಜನಕ್ಕೆ ಹೇಳ್ತಾರೆ. ನಮ್ಮ ಹೋರಾಟ ಎಲ್ಲರಿಗೂ ತಲುಪುತ್ತದೆ.

ಡಬ್ಬಿಂಗ್ ಯಾಕೆ ಬೇಡ ಅಂತಿದ್ದೀವಿ ಎಂಬುದನ್ನು ನೀವು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಡಬ್ಬಿಂಗ್ ಮಾತ್ರ ಬೇಡ. ಖಂಡಿತ ಬೇಡ. ಡಬ್ಬಿಂಗ್ ಬೇಕು ಎಂಬುವವರನ್ನು ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಆ ಆಲೋಚನೆ ಇಲ್ಲಿಗೆ ಬಿಟ್ಟುಬಿಡಿ.

ಈ ಹೊತ್ತು ಹೇಗೆ ದರ್ಶನ್, ಸುದೀಪ್, ಯಶ್, ದುನಿಯಾ ವಿಜಿ, ಪ್ರಜ್ವಲ್ ಅವರಂತಹ ಕಲಾವಿದರು ಬೆಳೆದಿದ್ದಾರೆ. ಮುಂದೆಯೂ ಇನ್ನಷ್ಟು ಕಲಾವಿದರು ಬೆಳೆಯಬೇಕು. ಡಬ್ಬಿಂಗ್ ಬಂದರೆ ಅದು ಸಾಧ್ಯವಾಗಲ್ಲ.

ಬರೀ ರಾಜ್ ಕುಮಾರ್ ಫ್ಯಾಮಿಲಿ ಮಾತ್ರ ಇಂಡಸ್ಟ್ರಿಯನ್ನು ಆಳಬೇಕು ಎಂದಿಲ್ಲ. ಆ ದುರುದ್ದೇಶ ನಮ್ಮ ಅಪ್ಪಾಜಿ ನಮಗೆ ಯಾವತ್ತೂ ಹೇಳಿಕೊಟ್ಟಿಲ್ಲ. ಅದು ಯಾವತ್ತೂ ಬರಲ್ಲ, ಯಾವತ್ತೂ ಹೇಳಲ್ಲ. ಯಾಕೆಂದರೆ ನಾವು ಅವರ ರಕ್ತದಲ್ಲಿ ಹುಟ್ಟಿದವರು.

ನಾವು ಏನು ಮಾತಾಡ್ತೀವೋ ಅದರ ಮೇಲೆ ನಿಗಾ ಇಟ್ಟುಕೊಂಡು ಮಾತನಾಡಬೇಕು. ಮುಂದೆ ನಮ್ಮ ಹೋರಾಟ ಜಿಲ್ಲೆ ಜಿಲ್ಲೆಗೂ ವ್ಯಾಪಿಸುತ್ತದೆ ಎಂದು ಶಿವಣ್ಣ ಈ ಸಂದರ್ಭದಲ್ಲಿ ನುಡಿದರು. ಒಂದು ವೇಳೆ ಪ್ರಾಣ ಬಿಡುವಂತಹ ಸಮಯ ಬಂದರೆ ಅದಕ್ಕೂ ಸಿದ್ಧ. ಎಂದೋ ಹೋಗುವ ಜೀವ ಇಂದೇ ಹೋಗಲಿ ಎಂದು ಒಂದು ಸಂದರ್ಭದಲ್ಲಿ ಅವರು ಭಾವುಕರಾದರು. (ಒನ್ಇಂಡಿಯಾ ಕನ್ನಡ)

English summary
Century Star Shivarajkumar said Dr Rajkumar family do not have any bad faith to rule Kannada film industry. The actors will participate in the rally from the Mysore Bank Circle to the Dr. Rajkumar podium erected on the Central College grounds on Monday, 27th January, 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada