For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್, ಡಾ.ವಿಷ್ಣು ರವರ ಸೂಪರ್ ಹಿಟ್ ಚಿತ್ರಗಳು ಇದೇ ತಿಂಗಳು ಮರುಬಿಡುಗಡೆ

  By Pavithra
  |

  ಹಳೆ ಸಿನಿಮಾಗಳನ್ನ ಮತ್ತೆ ಮತ್ತೆ ತೆರೆ ಮೇಲೆ ನೋಡುವುದು ಹೊಸ ವಿಚಾರವೇನಲ್ಲ. ಇತ್ತೀಚೆಗಷ್ಟೇ 'ಕಸ್ತೂರಿ ನಿವಾಸ' ಹಾಗೂ 'ಮುತ್ತಣ್ಣ' ಸಿನಿಮಾ ನೋಡಿ ಆನಂದಿಸಿದ ಜನರಿಗೆ ಈಗ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ರ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ.

  ಡಾ.ರಾಜ್ ಕುಮಾರ್ ಅಭಿನಯದ 'ದಾರಿ ತಪ್ಪಿದ ಮಗ' ಚಿತ್ರ ಹಾಗೂ ಸಾಹಸಸಿಂಹ ವಿಷ್ಣು ಅಭಿನಯದ 'ಒಂದೇ ಗುರಿ' ಚಿತ್ರ ಇದೇ ತಿಂಗಳು ಮತ್ತೆ ತೆರೆಗೆ ಬರೋದಕ್ಕೆ ಸಿದ್ದವಾಗಿದೆ.

  'ದಾರಿ ತಪ್ಪಿದ ಮಗ' ಚಿತ್ರದ ಹೊಸ ಕಾಪಿ ರೆಡಿಯಾಗಿದ್ದು, ವಿತರಕ ಮುನಿರಾಜು ಸಿನಿಮಾವನ್ನ ರಿಲೀಸ್ ಮಾಡೋದಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಇದೇ ತಿಂಗಳ 17 ರಂದು ತ್ರಿವೇಣಿ ಸಿನಿಮಾ ಮಂದಿರದಲ್ಲಿ 'ದಾರಿ ತಪ್ಪಿದ ಮಗ' ತೆರೆಗೆ ಬರಲಿದೆ.

  ಅಭಿನಯ ಭಾರ್ಗವ ವಿಷ್ಣುವರ್ಧನ್ ಅಭಿನಯದ 'ಒಂದೇ ಗುರಿ' ಸಿನಿಮಾ ಕೂಡ ಇದೇ ತಿಂಗಳು ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಎಂ.ಪಿ.ಶಂಕರ್ ನಿರ್ಮಾಣ, ಭಾರ್ಗವ ನಿರ್ದೇಶನದ ಚಿತ್ರ 1983ರಲ್ಲಿ ಬಿಡುಗಡೆ ಆಗಿತ್ತು. ವಿಷ್ಣುವರ್ಧನ್ ಜೊತೆಗೆ ಮಾಧವಿ, ಎಂ.ಪಿ.ಶಂಕರ್, ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. 'ಒಂದೇ ಗುರಿ' ಸಿನಿಮಾದ ಹೊಸ ಕಾಪಿ ರೆಡಿಯಾಗಿದ್ದು, ಬಿಡುಗಡೆಯ ದಿನಾಂಕ ಮಾತ್ರ ಇನ್ನು ನಿಗದಿಯಾಗಿಲ್ಲ.

  English summary
  Dr.Raj Kumar starrer 'Dari Tappida Maga' and Dr.Vishnuvardhan starrer 'Onde Guri' to re release this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X