twitter
    For Quick Alerts
    ALLOW NOTIFICATIONS  
    For Daily Alerts

    ರಾಜಾಜಿನಗರದಲ್ಲಿ ಡಾ.ರಾಜ್‌ ಕಂಚಿನ ಪ್ರತಿಮೆ ಅನಾವರಣ

    By Suneel
    |

    ವರನಟ ಡಾ. ರಾಜ್‌ಕುಮಾರ್ ರವರ ಕಂಚಿನ ಪ್ರತಿಮೆಯ ಉದ್ಘಾಟನೆ ಸಮಾರಂಭ ಕೊನೆಗೂ ಅನಾವರಣ ಗೊಂಡಿದೆ. ರಾಜಾಜಿ ನಗರ ಮುಖ್ಯದ್ವಾರದ ಮೇಲ್ಸೇತುವೆ ಬಳಿ ಶ್ರೀ ಕೃಷ್ಣದೇವರಾಯ ಶೈಲಿಯಲ್ಲಿ ಡಾ. ರಾಜ್‌ ಕುಮಾರ್‌ ರವರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು 10 ವರ್ಷಗಳ ಹಿಂದೆಯೇ ಯೋಜನೆ ನಿರ್ಮಿಸಲಾಗಿತ್ತು. ಪ್ರತಿಮೆ ಅನಾವರಣ ಈಗ ಪೂರ್ಣಗೊಂಡಿದೆ.

    'ಡಾ. ರಾಜ್‌ ಕುಮಾರ್‌' ರವರ ಕಂಚಿನ ಪ್ರತಿಮೆಯನ್ನು ಕರ್ನಾಟಕ ರಕ್ಷಣಾ ವೇದಿಕೆ, ರಾಜಾಜಿನಗರ ಪದ್ಮಭೂಷಣ ಡಾ. ರಾಜ್‌ ಕುಮಾರ್ ಪ್ರತಿಷ್ಠಾನ ಮಂಡಳಿ ಸಹಯೋಗದಲ್ಲಿ ನಿರ್ಮಾಣ ಮಾಡಿ ಪ್ರತಿಮೆ ಅನಾವರಣ ಮಾಡಿದೆ.

    Dr Raj Statue at Rajajinagar Finally Unveiled

    ರಾಜ್‌ಕುಮಾರ್‌ ರವರ ಪ್ರತಿಮೆಯನ್ನು ರಾಜ್‌ಕುಮಾರ್ ರಸ್ತೆ ಗ್ರೇಡ್ ಸೆಪೆರೇಟರ್ ಕಡೆಯ ಮೆಜೆಸ್ಟಿಕ್ ಭಾಗದ ಕಡೆಯಿಂದ ರಾಜಾಜಿನಗರ ಮುಖ್ಯದ್ವಾರದ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.

    Dr Raj Statue at Rajajinagar Finally Unveiled

    ಕಂಚಿನ ಪ್ರತಿಮೆ ಅನಾವರಣ ವೇಳೆ ರಾಜ್‌ಕುಮಾರ್‌ ರವರ ಹಿರಿಯ ಪುತ್ರಿ ಲಕ್ಷ್ಮಿ, ಕರ್ನಾಟಕ ರಕ್ಷಣಾ ವೇದಿಕೆ ರಾಜಾಧ್ಯಕ್ಷ ನಾರಾಯಣ ಗೌಡ, ಸ್ಥಳೀಯ ಅಭಿಮಾನಿಗಳು ಮತ್ತು ಅಭಿಮಾನಿ ಟಿ ವೆಂಕಟೇಶ್ ಮತ್ತು ಇತರರು ಉಪಸ್ಥಿತರಿದ್ದರು. ಡಾ.ರಾಜ್‌ಕುಮಾರ್ ರವರ ಕಂಚಿನ ಪ್ರತಿಮೆಯು ಶ್ರೀ ಕೃಷ್ಣದೇವರಾಯ ಸಿನಿಮಾ ಪಾತ್ರವನ್ನು ಹೋಲುತ್ತದೆ.

    English summary
    The long-pending unveiling of the statue of Dr Rajkumar at the Rajajinagar Entrance has been done. The statue of Rajkumar in the style of Sri Krishnadeva Raya was constructed by Karnataka Rakshana Vedike.
    Friday, December 23, 2016, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X