twitter
    For Quick Alerts
    ALLOW NOTIFICATIONS  
    For Daily Alerts

    ಕಲಾರತ್ನ ಡಾ.ರಾಜ್ ಅಭಿನಯದ ಅತ್ಯುತ್ತಮ 10 ಚಿತ್ರಗಳು

    By Suneetha
    |

    ರಸಿಕರ ರಾಜ, ವರನಟ, ನಟ ಸಾರ್ವಭೌಮ, ಅಣ್ಣಾವ್ರು, ಅಪ್ಪಾಜಿ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಕನ್ನಡದ ಖ್ಯಾತ ನಟ ಡಾ.ರಾಜ್ ಕುಮಾರ್ ಅಂದರೆ ಕನ್ನಡಿಗರೆಲ್ಲರಿಗೂ ತುಂಬಾ ಪ್ರೀತಿ. ಇಂದಿಗೂ ಅವರ ಆದರ್ಶಗಳನ್ನು ಪಾಲಿಸುವ ಹಲವಾರು ಅಭಿಮಾನಿಗಳು ನಮಗೆ ಕಾಣಸಿಗುತ್ತಾರೆ.

    ಅಂತಹ ಚೇತನ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರ ಸ್ಫೂರ್ತಿ, ಅವರ ಆದರ್ಶಗಳು ಎಂದೆಂದಿಗೂ ಎಲ್ಲರನ್ನೂ ಹಿಂಬಾಲಿಸಿ ಬಂದಿದ್ದು, ಈಗಲೂ ಅವರು ಹಲವಾರು ಯುವ ನಟರಿಗೆ ಆದರ್ಶವಾಗಿದ್ದಾರೆ.[ಮಂಗಳವಾರ ನಟ ಸಾರ್ವಭೌಮ ಡಾ.ರಾಜ್ ಅವರ 10ನೇ ಪುಣ್ಯತಿಥಿ]

    ಇಂದು ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುವ ದಿನವಾಗಿದ್ದು, ಘನವೆತ್ತ ಕಲಾರತ್ನ ನಮ್ಮೆಲ್ಲರನ್ನು ಅಗಲಿ ಇಂದಿಗೆ ಭರ್ತಿ 10 ವರ್ಷಗಳು ಸಂದಿವೆ.[ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು]

    ರಾಜಣ್ಣ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಈ ವಿಡಿಯೋ ನೋಡಿ..

    ಇದೀಗ ಕನ್ನಡ ಚಿತ್ರರಸಿಕರ ಆರಾಧ್ಯ ದೈವ ಡಾ.ರಾಜ್ ಕುಮಾರ್ ಅವರ ನೆನಪಲ್ಲಿ ಅವರು ನಟಿಸಿರುವ ಹತ್ತು ಅತ್ಯುತ್ತಮ ಚಿತ್ರಗಳನ್ನು ನೆನಪಿಸಿಕೊಳ್ಳೋಣ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

    'ಬೇಡರ ಕಣ್ಣಪ್ಪ'

    'ಬೇಡರ ಕಣ್ಣಪ್ಪ'

    ನಿರ್ದೇಶಕ ಹೆಚ್.ಎಲ್.ಎನ್ ಸಿಂಹ ಆಕ್ಷನ್-ಕಟ್ ಹೇಳಿರುವ 'ಬೇಡರ ಕಣ್ಣಪ್ಪ' ಚಿತ್ರ 1954ರಲ್ಲಿ ತೆರೆಕಂಡಿತ್ತು. ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆ ಪಂಡರಿ ಬಾಯಿ, ರಾಜಾ ಸುಲೋಚನ ಮತ್ತು ನರಸಿಂಹ ರಾಜು ಮಿಂಚಿದ್ದರು. ಈ ಚಿತ್ರಕ್ಕೆ ಸತತ 2 ಬಾರಿ ರಾಷ್ಟ್ರಪ್ರಶಸ್ತಿ ಲಭಿಸಿದೆ.[ಡಾ.ರಾಜ್ ಕುಮಾರ್ ಅವರು ತೀರಿಕೊಂಡ ಆ ಕ್ಷಣ...]

    'ಸತ್ಯ ಹರಿಶ್ಚಂದ್ರ'

    'ಸತ್ಯ ಹರಿಶ್ಚಂದ್ರ'

    'ಸತ್ಯ ಹರಿಶ್ಚಂದ್ರ' ಕಾವ್ಯ ಆಧಾರಿತ ಈ ಚಿತ್ರ 1965ರಲ್ಲಿ ತೆರೆ ಕಂಡಿತ್ತು. ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆ ಮತ್ತೆ ಪಂಡರಿ ಬಾಯಿ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಲವಾರು ಬಾರಿ ಇಡೀ ಕರ್ನಾಟಕದಾದ್ಯಂತ ಮರು ಬಿಡುಗಡೆ ಆಗಿತ್ತು.

    'ಕಸ್ತೂರಿ ನಿವಾಸ'

    'ಕಸ್ತೂರಿ ನಿವಾಸ'

    ನಿರ್ದೇಶಕ ದೊರೆ ಭಗವಾನ್ ನಿರ್ದೇಶನ ಮಾಡಿದ್ದ ಹಿಟ್ ಸಿನಿಮಾ 'ಕಸ್ತೂರಿ ನಿವಾಸ' ಡಾ. ರಾಜ್ ಕುಮಾರ್ ಅವರ ಸಿನಿಮಾ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಅವರಿಗೆ ದೊಡ್ಡ ಹಿಟ್ ಕೊಟ್ಟಿತ್ತು. 1971 ರಲ್ಲಿ ತೆರೆಕಂಡ ಚಿತ್ರದಲ್ಲಿ ನಟಿ ಆರತಿ, ನಟಿ ಜಯಂತಿ ಮತ್ತು ಕೆ.ಎಸ್ ಅಶ್ವಥ್ ಅವರು ಅಣ್ಣಾವ್ರಿಗೆ ಸಾಥ್ ಕೊಟ್ಟಿದ್ದರು. ಮಾತ್ರವಲ್ಲದೇ 2014 ರಲ್ಲಿ ಈ ಸಿನಿಮಾ ಕಲರ್ ಫುಲ್ ಆಗಿ ರೀ-ರಿಲೀಸ್ ಆಗಿ ಒಳ್ಳೆ ಕಲೆಕ್ಷನ್ ಮಾಡಿತ್ತು.

    'ಸಿಪಾಯಿ ರಾಮು'

    'ಸಿಪಾಯಿ ರಾಮು'

    1972ರಲ್ಲಿ ತೆರೆಕಂಡ 'ಸಿಪಾಯಿ ರಾಮು' ಚಿತ್ರಕ್ಕೆ ನಿರ್ದೇಶಕ ವೈ.ಆರ್ ಸ್ವಾಮಿ ಅವರು ನಿರ್ದೇಶನ ಮಾಡಿದ್ದಾರೆ. 'ಬರಲೇ ಇನ್ನು ಯಮುನೆ' ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಡಾ.ರಾಜ್ ಅವರಿಗೆ ನಾಯಕಿಯಾಗಿ ಲೀಲಾವತಿ ಅವರು ಕಾಣಿಸಿಕೊಂಡಿದ್ದರು. ಜೊತೆಗೆ ನಟಿ ಆರತಿ ಅವರು ಸಾಥ್ ಕೊಟ್ಟಿದ್ದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಮೂರನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತ್ತು.

    'ಬಂಗಾರದ ಮನುಷ್ಯ'

    'ಬಂಗಾರದ ಮನುಷ್ಯ'

    1972 ರಲ್ಲಿ ತೆರೆಕಂಡ 'ಬಂಗಾರದ ಮನುಷ್ಯ' ಚಿತ್ರಕ್ಕೆ ನಿರ್ದೇಶಕ ಸಿದ್ಧಲಿಂಗಯ್ಯ ಅವರು ನಿರ್ದೇಶನ ಮಾಡಿದ್ದರು. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆ ನಟಿ ಭಾರತಿ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು.

    'ಗಂಧದ ಗುಡಿ'

    'ಗಂಧದ ಗುಡಿ'

    ಡಾ.ರಾಜ್ ಕುಮಾರ್ ಅವರ ಸಿನಿ ಕೆರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ 'ಗಂಧದ ಗುಡಿ' ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ಡಾ.ವಿಷ್ಣುವರ್ಧನ್ ಅವರು ಮಿಂಚಿದ್ದರು. 1973 ರಲ್ಲಿ ತೆರೆಕಂಡ ಈ ಸಿನಿಮಾ ತೆಲುಗು ಮತ್ತು ಹಿಂದಿ ಭಾಷೆಗೆ ರೀಮೆಕ್ ಆಗಿತ್ತು. ನಿರ್ದೇಶಕ ವಿಜಯ್ ಅವರು ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಟಿ ಕಲ್ಪನಾ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು.

    'ಶ್ರೀ ಶ್ರೀನಿವಾಸ ಕಲ್ಯಾಣ'

    'ಶ್ರೀ ಶ್ರೀನಿವಾಸ ಕಲ್ಯಾಣ'

    1974ರಲ್ಲಿ ತೆರೆಕಂಡ 'ಶ್ರೀ ಶ್ರೀನಿವಾಸ ಕಲ್ಯಾಣ' ಚಿತ್ರಕ್ಕೆ ವಿಜಯ್ ಅವರು ಆಕ್ಷನ್-ಕಟ್ ಹೇಳಿದ್ದರು. ಚಿತ್ರದಲ್ಲಿ ಡಾ.ರಾಜ್ ಅವರ ಜೊತೆ ನಟಿಯರಾದ ಬಿ.ಸರೋಜಾ ದೇವಿ ಮತ್ತು ನಟಿ ಮಂಜುಳಾ ಅವರು ಪ್ರಮುಖವಾಗಿ ಮಿಂಚಿದ್ದರು.

    'ಬಬ್ರುವಾಹನ'

    'ಬಬ್ರುವಾಹನ'

    ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ಮಿಂಚಿದ್ದ 'ಬಬ್ರುವಾಹನ' ಸಿನಿಮಾ 1977 ರಲ್ಲಿ ತೆರೆ ಕಂಡಿತ್ತು. ರಾಜಣ್ಣ ಅವರ ಜೊತೆ ನಟಿಯರಾದ ಬಿ.ಸರೋಜಾ ದೇವಿ, ಕಾಂಚನಾ, ಜಯಮಾಲಾ ಹಾಗೂ ವಜ್ರಮುನಿ ಮುಂತಾದವರು ಪ್ರಮುಖವಾಗಿ ಮಿಂಚಿದ್ದರು. ಈ ಚಿತ್ರದ ನಟನೆಗೆ ಡಾ.ರಾಜ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ನಟ ಪ್ರಶಸ್ತಿ ಲಭಿಸಿತ್ತು. ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.

    'ಭಕ್ತ ಪ್ರಹ್ಲಾದ'

    'ಭಕ್ತ ಪ್ರಹ್ಲಾದ'

    1983ರಲ್ಲಿ ತೆರೆಕಂಡ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಾಲನಟನಾಗಿ ಮಿಂಚಿದ್ದರು. ನಿರ್ದೇಶಕ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿತ್ರದಲ್ಲಿ ಅನಂತ್ ನಾಗ್, ಸರಿತಾ, ತೂಗುದೀಪ ಶ್ರೀನಿವಾಸ್ ಮುಂತಾದವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರು.

    'ಶಬ್ದವೇಧಿ'

    'ಶಬ್ದವೇಧಿ'

    ಈ ಚಿತ್ರದಲ್ಲಿ ಸಂದೀಪ್ ಪಾತ್ರಧಾರಿಯಾಗಿದ್ದ ಡಾ.ರಾಜ್ ಅವರು ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದರು. ನಟಿ ಜಯಪ್ರದ, ಸೌಕಾರ್ ಜಾನಕಿ, ಉಮಾಶ್ರೀ ಮುಂತಾದವರು ಪ್ರಮುಖವಾಗಿ ಮಿಂಚಿದ್ದರು. 2000ರಲ್ಲಿ ತೆರೆಕಂಡ ಈ ಚಿತ್ರಕ್ಕೆ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ನಿರ್ದೇಶನ ಮಾಡಿದ್ದರು. ಸುಮಾರು 6 ವರ್ಷಗಳ ಬಳಿಕ ಡಾ.ರಾಜ್ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಮತ್ತೆ ವಾಪಸಾಗಿದ್ದರು.

    English summary
    Dr Rajkumar 10th death anniversary Today April 10th. Here is the complete list of Best movies of Dr.Rajkumar.
    Tuesday, April 12, 2016, 16:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X