»   » ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ಶಾಸ್ತ್ರೀಯ ನೃತ್ಯ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಂತಾರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆ 'ಹೌಸ್ ಫುಲ್' ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು, ವರನಟ ಡಾ.ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬವನ್ನು ಈ ಮೂಲಕ ವಿಶಿಷ್ಟವಾಗಿ ಆಚರಿಸಲು ಯೋಜನೆ ಹಾಕಿಕೊಂಡಿದೆ.[ಕಲಾರತ್ನ ಡಾ.ರಾಜ್ ಅಭಿನಯದ ಅತ್ಯುತ್ತಮ 10 ಚಿತ್ರಗಳು]

Dr. Rajkumar 88th Birthday anniversary: Classical Dance Programme

ದಿನಾಂಕ 24ನೇ ಏಪ್ರಿಲ್ 2016 ಭಾನುವಾರ ಸಂಜೆ 6 ಘಂಟೆಗೆ ಸೇವಾ ಸದನ, ಮಲ್ಲೇಶ್ವರಂ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕನ್ನಡದ ಮೇರು ನಟ 'ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.[ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು]

ಈ ಕಾರ್ಯಕ್ರಮದಲ್ಲಿ 1960 ಮತ್ತು 70ರ ದಶಕದ ಶಾಸ್ತ್ರೀಯ ನೃತ್ಯ ಆಧಾರಿತ ಕನ್ನಡ ಹಾಡುಗಳಿಗೆ ಬೆಂಗಳೂರಿನ ಪ್ರಮುಖ ಕ್ಲಾಸಿಕಲ್ ನೃತ್ಯಗಾರ್ತಿಯರು ಹಾಗೂ ನೃತ್ಯಗಾರರಾದ ಡಾ.ರಕ್ಷಿ ಕಾರ್ತಿಕ್, ದೇವರಾಜ್, ಶುಭದಾ ಪ್ರಭಾಕರ್, ಶ್ವೇತಾ ಪುರೋಹಿತ್, ಸಿಂಧು ಪುರೋಹಿತ್, ಐಶ್ವರ್ಯ ವಿ, ಹೇಮಲತಾ, ನಿಧಿ ಶೇಷಾದ್ರಿ, ನವ್ಯ ಶ್ರಿ, ಸ್ವಾತಿ ಮುಂತಾದವರು ಹೆಜ್ಜೆ ಹಾಕಲಿದ್ದಾರೆ.[ಮತ್ತೆ ತೆರೆಯ ಮೇಲೆ 'ಬಬ್ರುವಾಹನ'ನ ಘರ್ಜನೆ]

ಕಾರ್ಯಕ್ರಮದಲ್ಲಿ ಸಾಹಿತಿ ಹೆಚ್.ಎಸ್ ವೆಂಕಟೇಶ್ ಮೂರ್ತಿ, ನಟಿ ಸುಧಾರಾಣಿ ಮತ್ತು ಖ್ಯಾತ ನೃತ್ಯಗಾತಿ ಸೌಂದರ್ಯ ಅವರು ಹಾಜರಿರುತ್ತಾರೆ.

-
ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು

ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳು

-
-
-
-
ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

ಡಾ.ರಾಜ್ ಹುಟ್ಟುಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ
-
English summary
Classical Dance Program Dr. Rajkumar Nruthya vibhya inmemory of legendary Padmabushana Dr. Rajkumar on his 88th Birthdayanniversary. The event Organised by International arts and cultural foundation Bangalore. On 24 th April (Sunday), at 6 pm. At Sevasadana, Malleshwaram, 14th Cross, Bengaluru-560003
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada