»   » ಡಾ. ರಾಜ್‌ ಕುಟುಂಬದಿಂದ ಐಎಎಸ್ ಆಕಾಂಕ್ಷಿಗಳಿಗೆ ವಿನೂತನ ಕೊಡುಗೆ

ಡಾ. ರಾಜ್‌ ಕುಟುಂಬದಿಂದ ಐಎಎಸ್ ಆಕಾಂಕ್ಷಿಗಳಿಗೆ ವಿನೂತನ ಕೊಡುಗೆ

Posted By:
Subscribe to Filmibeat Kannada

ಕರ್ನಾಟಕದ ಗ್ರಾಮೀಣ ಭಾಗದ ರೈತರು ಮತ್ತು ಕಾರ್ಮಿಕ ವರ್ಗದ ಬಡ ಮಕ್ಕಳು ಸಿವಿಲ್ ಸರ್ವೀಸ್ ಮತ್ತು ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆಂದು ಬೇರೆ ರಾಜ್ಯಗಳಿಗೆ ಧಾವಿಸುತ್ತಿದ್ದಾರೆ. ಅಲ್ಲಿ ದುಂದು ವೆಚ್ಚ ಮಾಡಿ ತರಬೇತಿ ಪಡೆಯುವುದರ ಜೊತೆಗೆ ನಾನಾ ತರಹದ ಅನಾನುಕೂಲಗಳನ್ನು ಎದುರಿಸುತ್ತಿದ್ದಾರೆ. ಇಂತಹ ಹಲವು ಅಂಶಗಳನ್ನು ಗಮನಿಸಿ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಕುಟುಂಬದವರು, ಕಡಿಮೆ ದರದಲ್ಲಿ ಕನ್ನಡಿಗರಿಗೆ ಗುಣಮಟ್ಟದ ತರಬೇತಿ ನೀಡಲು "ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್" ಎಂಬ ಸಂಸ್ಥೆಯನ್ನು ತೆರೆದಿದೆ.

ಅಂದಹಾಗೆ ಕಡಿಮೆ ದರದಲ್ಲಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅವಕಾಶ ವಿರುವ "ಡಾ. ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್" ಸಂಸ್ಥೆ ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರವಿದ್ದು, ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಅಡ್ಮಿಷನ್ ಪ್ರಕ್ರಿಯೆ ಆರಂಭವಾಗುತ್ತಿದೆ. ಆಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಫೆಬ್ರವರಿ ಮೂರನೇ ವಾರದಿಂದ ತರಗತಿಗಳು ಪ್ರಾರಂಭವಾಗುವ ಯೋಜನೆ ಮಾಡಲಾಗಿದೆ ಅಂತೆ.

'Dr.Rajkumar Academy For Civil Services' Opened For IAS aspirants

ತರಬೇತಿ ಯಾರಿಂದ ಸಿಗಲಿದೆ?

ಡಾ.ರಾಜ್ ಕುಮಾರ್ ಕುಟುಂಬದವರು ತೆರೆದಿರುವ "ಡಾ.ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್" ಸಂಸ್ಥೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಯುಪಿಎಸ್‌ಸಿ ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಆಗಿ ಬಂದು ಮಾರ್ಗದರ್ಶನ ನೀಡಲಿದ್ದಾರಂತೆ.

'Dr.Rajkumar Academy For Civil Services' Opened For IAS aspirants

"ಡಾ.ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್" ಸಂಸ್ಥೆ ಉದ್ದೇಶ

ದೊಡ್ಮನೆ ಸಂಸ್ಥೆ ಇಂದ ವರನಟ ಡಾ.ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕದವರಿಗಾಗಿ ಕನ್ನಡದ ನೆಲದಲ್ಲಿ ಗುಣಮಟ್ಟದ ಐಎಎಸ್ ತರಬೇತಿ ಸಂಸ್ಥೆ ತೆರೆದಿರುವುದು ಸಾವಿರಾರು ಐಎಎಸ್ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಕನ್ನಡದ ನೆಲವೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಆಗಬೇಕು ಎಂಬುದೇ ಅಕಾಡೆಮಿಯ ಉದ್ದೇಶವಾಗಿದೆ.

ಪ್ರತಿ ಐದು ಅಭರ್ಥಿಗಳಿಗೆ ಮೆಂಟರ್ಶಿಪ್ ಸೇವೆ, 24*7 ಗ್ರಂಥಾಲಯ ವ್ಯವಸ್ಥೆ, ಯುಪಿಎಸ್‌ಸಿ ಪರೀಕ್ಷೆ ಗಳಿಗೆ ಸಬಂಧಪಟ್ಟ ಎಲ್ಲಾ ರೀತಿಯ ಸ್ಟಡಿ ಮೆಟೀರಿಯಲ್‌ ಗಳನ್ನು ಅಕಾಡೆಮಿಯಲ್ಲಿ ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ: 9108448444, 9108449444

English summary
'Dr.Rajkumar Academy For Civil Services' Opened For help to IAS aspirants. a Premium institute that aims to provide affordable and quality coaching for Civil Service aspirants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada