ದರ್ಶನ್ ಪ್ರಕಾರ 70-80ರಲ್ಲಿ 'ಕುರುಕ್ಷೇತ್ರ' ಬಂದಿದ್ರೆ 'ದುರ್ಯೋಧನ' ಇವರಾಗ್ಬೇಕಿತ್ತಂತೆ
Recommended Video
ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿ ಎಲ್ಲ ಕಡೆಯೂ ಅದ್ಭುತ ಪ್ರದರ್ಶನ ಕಾಣ್ತಿದೆ. ಕನ್ನಡದ ಮಟ್ಟಿಗೆ ಇದು ಹೊಸ ಇತಿಹಾಸ ಎಂದೇ ಹೇಳಲಾಗ್ತಿದೆ. ಅದರಲ್ಲೂ ದರ್ಶನ್ ಮಾಡಿರುವ ದುರ್ಯೋಧನ ಪಾತ್ರವಂತೂ ನೋಡುಗರಿಗೆ ಹಬ್ಬವಾಗಿದೆ.
ಸಿನಿಮಾ ನೋಡಿ ಹೊರಬಂದವರೆಲ್ಲಾ ದರ್ಶನ್ ಬಿಟ್ಟರೇ ದುರ್ಯೋಧನ ಪಾತ್ರವನ್ನ ಯಾರೂ ಮಾಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಜನ ಮಾತ್ರವಲ್ಲ ಇಂಡಸ್ಟ್ರಿಯಲ್ಲೂ ಬಹುತೇಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ನನ್ನ ಪ್ರಕಾರ' ಟ್ರೈಲರ್ ಲಾಂಚ್ ಮಾಡಿದ ದರ್ಶನ್, 70-80ರ ದಶಕದಲ್ಲಿ ಕುರುಕ್ಷೇತ್ರ ಸಿನಿಮಾ ಬಂದಿದ್ದರೇ ದುರ್ಯೋಧನ ಪಾತ್ರವನ್ನ ಯಾರ ಮಾಡಬಹುದಾಗಿತ್ತು ಎಂದು ತಿಳಿಸಿದ್ದಾರೆ. ಯಾರದು?

70-80ರಲ್ಲಿ ಕುರುಕ್ಷೇತ್ರ ಬಂದಿದ್ದರೆ....
ಒಂದು ವೇಳೆ 70-80ರ ದಶಕದಲ್ಲಿ ಕುರುಕ್ಷೇತ್ರ ಸಿನಿಮಾ ಬಂದಿದ್ದರೇ ದುರ್ಯೋಧನನ ಪಾತ್ರಕ್ಕೆ ಯಾರು ಸೂಕ್ತವಾಗುತ್ತಿದ್ದರೂ ಎಂದು ನಿಮಗೆ ಅನಿಸುತ್ತೆ ಎಂದು ನಿರೂಪಕರು ದರ್ಶನ್ ಅವರ ಬಳಿ ಕೇಳಿದ್ರು. ಅದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ''ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರು ತುಂಬಾ ಜನ ಇದ್ದಾರೆ. ಅದರಲ್ಲಿ ಅಣ್ಣಾವ್ರು ಬಿಟ್ಟು ಬೇರೆ ಯಾರೂ ಆಗ್ತಿರಲಿಲ್ಲ'' ಎಂದು ಅಣ್ಣಾವ್ರಿಗೆ ಜೈ ಎಂದಿದ್ದಾರೆ.

ಅಂದು ರಾಜ್, ಇಂದು ದರ್ಶನ್
ಆಗ ಎಂತಹದ್ದೇ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳಾದರೂ ಅದಕ್ಕೂ ಮೊದಲ ಆಯ್ಕೆ ಡಾ ರಾಜ್ ಕುಮಾರ್. ಇಂದಿನ ಸಿನಿಮಾ ರಂಗದಲ್ಲಿ ಪೌರಾಣಿಕ ಸಿನಿಮಾ ಮಾಡುವುದು ಬಹಳ ಅಪರೂಪ ಮತ್ತು ಕಷ್ಟ ಎಂದು ಹೇಳಲಾಗುತ್ತೆ. ಅಂತಹದ್ರಲ್ಲಿ ದರ್ಶನ್ ಅವರು ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ಮಾಡಿ, ಈ ಯುಗಕ್ಕೆ ಸೂಕ್ತವೆನಿಸಿಕೊಂಡಿದ್ದಾರೆ.

ಇಂತಹ ಚಿತ್ರಗಳಿಗೆ ಕ್ಯೂ ಇರಲ್ಲ
ಸಾಮಾನ್ಯವಾಗಿ ದರ್ಶನ್ ಕಾಲ್ ಶೀಟ್ ಬೇಕು ಅಂದ್ರೆ ಒಂದು ಕ್ಯೂ ಇರುತ್ತೆ. ಒಬ್ಬರು ಆದ್ಮೇಲೆ ಇನ್ನೊಬ್ಬರಿಗೆ. ಆದ್ರೆ, ಪೌರಾಣಿಕ ಮತ್ತು ಐತಿಹಾಸಿಕ ಸ್ಕ್ರಿಪ್ಟ್ ಬಂದ್ರೆ ಆ ಕ್ಯೂ ಬ್ರೇಕ್ ಮಾಡಿ ಮೊದಲು ಆಧ್ಯತೆ ಕೊಡ್ತಾರೆ ದರ್ಶನ್. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಆಗಿದ್ದು ಇದೇ ರೀತಿ.

ಗಂಡುಗಲಿ ಮದಕರಿ ನಾಯಕ
ಕುರುಕ್ಷೇತ್ರ ಸಿನಿಮಾ ಮುಗಿಸಿ ರಾಬರ್ಟ್ ಆರಂಭಿಸಿರುವ ದರ್ಶನ್, ಇದಾದ ಬಳಿಕ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ.


Click it and Unblock the Notifications











