twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಪ್ರಕಾರ 70-80ರಲ್ಲಿ 'ಕುರುಕ್ಷೇತ್ರ' ಬಂದಿದ್ರೆ 'ದುರ್ಯೋಧನ' ಇವರಾಗ್ಬೇಕಿತ್ತಂತೆ

    |

    Recommended Video

    ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡ ದರ್ಶನ್..! | Darshan

    ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿ ಎಲ್ಲ ಕಡೆಯೂ ಅದ್ಭುತ ಪ್ರದರ್ಶನ ಕಾಣ್ತಿದೆ. ಕನ್ನಡದ ಮಟ್ಟಿಗೆ ಇದು ಹೊಸ ಇತಿಹಾಸ ಎಂದೇ ಹೇಳಲಾಗ್ತಿದೆ. ಅದರಲ್ಲೂ ದರ್ಶನ್ ಮಾಡಿರುವ ದುರ್ಯೋಧನ ಪಾತ್ರವಂತೂ ನೋಡುಗರಿಗೆ ಹಬ್ಬವಾಗಿದೆ.

    ಸಿನಿಮಾ ನೋಡಿ ಹೊರಬಂದವರೆಲ್ಲಾ ದರ್ಶನ್ ಬಿಟ್ಟರೇ ದುರ್ಯೋಧನ ಪಾತ್ರವನ್ನ ಯಾರೂ ಮಾಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಜನ ಮಾತ್ರವಲ್ಲ ಇಂಡಸ್ಟ್ರಿಯಲ್ಲೂ ಬಹುತೇಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    'ನನ್ನ ಪ್ರಕಾರ' ಟ್ರೈಲರ್ ಲಾಂಚ್ ಮಾಡಿದ ದರ್ಶನ್, 70-80ರ ದಶಕದಲ್ಲಿ ಕುರುಕ್ಷೇತ್ರ ಸಿನಿಮಾ ಬಂದಿದ್ದರೇ ದುರ್ಯೋಧನ ಪಾತ್ರವನ್ನ ಯಾರ ಮಾಡಬಹುದಾಗಿತ್ತು ಎಂದು ತಿಳಿಸಿದ್ದಾರೆ. ಯಾರದು?

    70-80ರಲ್ಲಿ ಕುರುಕ್ಷೇತ್ರ ಬಂದಿದ್ದರೆ....

    70-80ರಲ್ಲಿ ಕುರುಕ್ಷೇತ್ರ ಬಂದಿದ್ದರೆ....

    ಒಂದು ವೇಳೆ 70-80ರ ದಶಕದಲ್ಲಿ ಕುರುಕ್ಷೇತ್ರ ಸಿನಿಮಾ ಬಂದಿದ್ದರೇ ದುರ್ಯೋಧನನ ಪಾತ್ರಕ್ಕೆ ಯಾರು ಸೂಕ್ತವಾಗುತ್ತಿದ್ದರೂ ಎಂದು ನಿಮಗೆ ಅನಿಸುತ್ತೆ ಎಂದು ನಿರೂಪಕರು ದರ್ಶನ್ ಅವರ ಬಳಿ ಕೇಳಿದ್ರು. ಅದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ''ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರು ತುಂಬಾ ಜನ ಇದ್ದಾರೆ. ಅದರಲ್ಲಿ ಅಣ್ಣಾವ್ರು ಬಿಟ್ಟು ಬೇರೆ ಯಾರೂ ಆಗ್ತಿರಲಿಲ್ಲ'' ಎಂದು ಅಣ್ಣಾವ್ರಿಗೆ ಜೈ ಎಂದಿದ್ದಾರೆ.

    'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಅಪ್ಪು ಪಾತ್ರವನ್ನ ಇವರು ಮಾಡಬೇಕಿತ್ತಂತೆ.! 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಅಪ್ಪು ಪಾತ್ರವನ್ನ ಇವರು ಮಾಡಬೇಕಿತ್ತಂತೆ.!

    ಅಂದು ರಾಜ್, ಇಂದು ದರ್ಶನ್

    ಅಂದು ರಾಜ್, ಇಂದು ದರ್ಶನ್

    ಆಗ ಎಂತಹದ್ದೇ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳಾದರೂ ಅದಕ್ಕೂ ಮೊದಲ ಆಯ್ಕೆ ಡಾ ರಾಜ್ ಕುಮಾರ್. ಇಂದಿನ ಸಿನಿಮಾ ರಂಗದಲ್ಲಿ ಪೌರಾಣಿಕ ಸಿನಿಮಾ ಮಾಡುವುದು ಬಹಳ ಅಪರೂಪ ಮತ್ತು ಕಷ್ಟ ಎಂದು ಹೇಳಲಾಗುತ್ತೆ. ಅಂತಹದ್ರಲ್ಲಿ ದರ್ಶನ್ ಅವರು ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ಮಾಡಿ, ಈ ಯುಗಕ್ಕೆ ಸೂಕ್ತವೆನಿಸಿಕೊಂಡಿದ್ದಾರೆ.

    ದರ್ಶನ್ 'ಕುರುಕ್ಷೇತ್ರ' ಒಂದು ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?ದರ್ಶನ್ 'ಕುರುಕ್ಷೇತ್ರ' ಒಂದು ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

    ಇಂತಹ ಚಿತ್ರಗಳಿಗೆ ಕ್ಯೂ ಇರಲ್ಲ

    ಇಂತಹ ಚಿತ್ರಗಳಿಗೆ ಕ್ಯೂ ಇರಲ್ಲ

    ಸಾಮಾನ್ಯವಾಗಿ ದರ್ಶನ್ ಕಾಲ್ ಶೀಟ್ ಬೇಕು ಅಂದ್ರೆ ಒಂದು ಕ್ಯೂ ಇರುತ್ತೆ. ಒಬ್ಬರು ಆದ್ಮೇಲೆ ಇನ್ನೊಬ್ಬರಿಗೆ. ಆದ್ರೆ, ಪೌರಾಣಿಕ ಮತ್ತು ಐತಿಹಾಸಿಕ ಸ್ಕ್ರಿಪ್ಟ್ ಬಂದ್ರೆ ಆ ಕ್ಯೂ ಬ್ರೇಕ್ ಮಾಡಿ ಮೊದಲು ಆಧ್ಯತೆ ಕೊಡ್ತಾರೆ ದರ್ಶನ್. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಆಗಿದ್ದು ಇದೇ ರೀತಿ.

    ರಾಜಮೌಳಿ 'ಮಹಾಭಾರತ'ದಲ್ಲಿ ದರ್ಶನ್ 'ದುರ್ಯೋಧನ'.?ರಾಜಮೌಳಿ 'ಮಹಾಭಾರತ'ದಲ್ಲಿ ದರ್ಶನ್ 'ದುರ್ಯೋಧನ'.?

    ಗಂಡುಗಲಿ ಮದಕರಿ ನಾಯಕ

    ಗಂಡುಗಲಿ ಮದಕರಿ ನಾಯಕ

    ಕುರುಕ್ಷೇತ್ರ ಸಿನಿಮಾ ಮುಗಿಸಿ ರಾಬರ್ಟ್ ಆರಂಭಿಸಿರುವ ದರ್ಶನ್, ಇದಾದ ಬಳಿಕ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ.

    English summary
    If Kurukshetra movie came in 70-80s, dr rajkumar is the best choice to play duryodhan role said darshan.
    Thursday, August 15, 2019, 16:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X