»   » 'ಬಂಗಾರದ ಮನುಷ್ಯ'ನ ಬಂಗಾರದಂತಹ ಚಿತ್ರಗಳು

'ಬಂಗಾರದ ಮನುಷ್ಯ'ನ ಬಂಗಾರದಂತಹ ಚಿತ್ರಗಳು

Posted By:
Subscribe to Filmibeat Kannada

ಕನ್ನಡ ಕುಲಕೋಟಿಯ ಆರಾಧ್ಯ ದೈವ ವರನಟ ಡಾ.ರಾಜ್ ಕುಮಾರ್ ಬಗ್ಗೆ ಬರೆಯಬೇಕೆಂದರೆ ಎಲ್ಲಿಂದ ಆರಂಭಿಸಬೇಕು ಎಂಬ ಗೊಂದಲ ಪ್ರತಿಯೊಬ್ಬರನ್ನು ಕಾಡುತ್ತದೆ. ಅವರ ಸಂಪೂರ್ಣ ಚಿತ್ರಣವನ್ನು ಕೊಡುವುದು ಕಷ್ಟಸಾಧ್ಯ. ಆದರೂ ಅವರ ಬದುಕಿನ ಕೆಲವೊಂದು ಅವಿಸ್ಮರಣೀಯ ಘಟನೆಗಳ ಮೇಲೊಮ್ಮೆ ಕಣ್ಣಾಡಿಸಬಹುದು.

ಇಂದು ರಾಜಣ್ಣ ನಮ್ಮೊಂದಿಗೆ ಇದ್ದಿದ್ದರೆ 84ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕನ್ನಡ ಚಿತ್ರೋದ್ಯಮವೇ ಅವರ ಬೆನ್ನ ಹಿಂದಿರುತ್ತಿತ್ತು. ಸದಾಶಿವನಗರದ ಅವರ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಹೇಗಿರುತ್ತಿತ್ತು ಎಂದು ಒಮ್ಮೆ ನೆನಸಿಕೊಳ್ಳಿ. ಮೈ ಪುಳಕಗೊಳ್ಳುತ್ತದೆ.

ಇಂದು ರಾಜಣ್ಣ ನಮ್ಮೊಂದಿಗೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಸದಾ ಕಾಡುತ್ತಿರುತ್ತವೆ. ಅವರ ಹುಟ್ಟುಹಬ್ಬದ ನಿಮಿತ್ತ ಅವರ ಕೆಲವು ಅಪರೂಪದ ಫೋಟೋಗಳನ್ನು ನೋಡಿ ಕಣ್ತುಬಿಕೊಳ್ಳೋಣ ಬನ್ನಿ. ಅಣ್ಣಾವ್ರ ಫೋಟೋಗಳನ್ನು ನೋಡುತ್ತಿದ್ದರೆ ಕಾಲ ಹಿಂದಕ್ಕೆ ಸರಿದಂತೆ ಭಾಸವಾಗುತ್ತದೆ.

ಹುಟ್ಟುಹಬ್ಬದಂದು ಮೊಮ್ಮಗನ ಗ್ರ್ಯಾಂಡ್ ಎಂಟ್ರಿ

ಅಣ್ಣಾವ್ರ ಹುಟ್ಟುಹಬ್ಬದಂದು ಅವರ ಮೊಮ್ಮಗ ಬೆಳ್ಳಿಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಕಂಠೀರವ ವಿನಯ್ ರಾಜ್ ಚಿತ್ರ ಏಪ್ರಿಲ್ 24ರಂದು ಆರಂಭವಾಗುತ್ತಿದೆ. ಚಿತ್ರದ ಬಗೆಗಿನ ಗುಟ್ಟುನ್ನು ರಾಜ್ ಕುಟುಂಬಿಕರು ಬಿಟ್ಟುಕೊಟ್ಟಿಲ್ಲ.

ಶಿವರಾಜ್ ಕುಮಾರ್ ಹೊಸ ಚಿತ್ರ ಶುರು

ಇನ್ನೊಂದು ಕಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ ಆರ್ಯನ್ ಶುರುವಾಗುತ್ತಿದೆ. ಈ ಚಿತ್ರದ ನಾಯಕಿ ಗೋಲ್ಡನ್ ಗರ್ಲ್ ರಮ್ಯಾ ಎಂಬುದು ವಿಶೇಷ. ರಾಜೇಂದ್ರ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ಇದೇ ಶುಕ್ರವಾರ(ಏ.26) ಆಪರೇಷನ್ ಡೈಮಂಡ್ ರಾಕೆಟ್

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಈ ಬಾರಿ ಅವರ ಹಳೆಯ ಚಿತ್ರ 'ಆಪರೇಷನ್ ಡೈಮಂಡ್ ರಾಕೆಟ್' ಬಿಡುಗಡೆಯಾಗುತ್ತಿದೆ. ರಾಜ್ ಜೊತೆ ಪದ್ಮಪ್ರಿಯಾ, ಚಂದ್ರಲೇಖಾ ಹಾಗೂ ವಜ್ರಮುನಿ ಅಭಿನಯಿಸಿದ್ದಾರೆ. ಬೆಂಗಳೂರಿನ ಮೇನಕಾ ಚಿತ್ರಮಂದಿರದಲ್ಲಿ 10.30, 4.30 ಹಾಗೂ 7.30 ಶೋಗಳನ್ನು ವೀಕ್ಷಿಸಬಹುದು.

ಅಬಿಮಾನಿಗ ದೇವರುಗಳು ಕೊಟ್ಟ ಬಿರುದು

ಕರ್ನಾಟಕ ರತ್ನ, ನಟಸಾರ್ವಭೌಮ, ವರನಟ, ರಸಿಕರ ರಾಜ, ಕನ್ನಡದ ಕಣ್ಮಣಿ, ಕೆಂಟಕಿ ಕರ್ನಲ್, ಮೇರು ನಟ, ನಾಡೋಜ, ಕಲಾ ಕೌಸ್ತುಭ ಹೀಗೆ ಅಣ್ಣಾವ್ರು ಅಭಿಮಾನಿಗಳಿಂದ ನಾನಾ ಬಿರುದುಗಳಿಂದ ಕರೆಸಿಕೊಂಡಿದ್ದಾರೆ.

ಬಂಗಾರದ ಮನುಷ್ಯನ ಮಗುವಿನಂತಹ ಮನಸ್ಸು

'ಬಂಗಾರದ ಮನುಷ್ಯ'ನ ಕೈಗೆ ಮಗು ಸಿಕ್ಕಿದರೆ ಅವರು ಅಷ್ಟೇ ಅಕ್ಷರಶಃ ಮಗುವಾಗುತ್ತಿದ್ದರು. ಈ ಅಪರೂಪದ ಚಿತ್ರವನ್ನು ನೋಡುತ್ತಿದ್ದರೆ ಇನ್ನೂ ನೋಡುತ್ತಿರೋಣ ಅನ್ನಿಸುತ್ತದೆ ಅಲ್ಲವೆ? ಚಿತ್ರ ಕಪ್ಪು ಬಿಳುಪಾದರೂ ಎಂಥಹಾ ಆಕರ್ಷಣೆ ಇದೆ.

ಎಂಜಿ ರಾಮಚಂದ್ರನ್ ಪ್ರೀತಿ ಅಭಿಮಾನಕ್ಕೆ ಸಾಕ್ಷಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಎಂ.ಜಿ.ರಾಮಚಂದ್ರನ್ ಅವರು ರಾಜ್ ಅವರನ್ನು ಅಭಿಮಾನಿಸುತ್ತಿದ್ದರು. ರಾಜ್ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಅಭಿಮಾನ ಇತ್ತು ಎಂಬುದಕ್ಕೆ ಈ ಫೋಟೋ ಸಾಕಲ್ಲವೆ?

ನಗುತಾ ನಗುತಾ ಬಾಳೂ ನೂರು ವರುಷಾ

ಕುಟುಂಬದಲ್ಲಿ ಎಲ್ಲರೊಡೆನೆಯೂ ಅಣ್ಣಾವ್ರು ಎಷ್ಟು ಸಲುಗೆಯಿಂದ ಇರುತ್ತಿದ್ದರು ಎಂಬುದಕ್ಕೆ ನಿದರ್ಶನ ಈ ಫೋಟೋ. ನಗುತಾ ನಗುತಾ ಬಾಳೂ ನೀನು ನೂರು ವರುಷಾ ಎಂಬ ಹಾಡು ನೆನಪಾಗುತ್ತದೆಯಲ್ಲವೆ?

ಗುಂಡುರಾವ್ ಕೈಲಿ ನೆನಪಿನ ಕಾಣಿಕೆ

ಗಂಧದ ಗುಡಿ (1973) ಚಿತ್ರ 25 ವಾರಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಗುಂಡುರಾವ್ ಅವರ ಕೈಲಿ ನೆನಪಿನ ಕಾಣಿಕೆ ಸ್ವೀಕರಿಸುತ್ತಿರುವ ಅಪರೂಪದ ಕ್ಷಣಗಳು. ರಾಜ್ ಅಭಿನಯದ 150ನೇ ಚಿತ್ರ ಇದು.

ರಾಜ್ ಆರೋಗ್ಯದ ಗುಟ್ಟು ಯೋಗಾಭ್ಯಾಸ

ರಾಜ್ ಅವರು ನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿದ್ದರು. ಅವರ ಆರೋಗ್ಯದ ಗುಟ್ಟು ಬಹುಶಃ ಇದೇ ಇರಬೇಕು. ವಿವಿಧ ಯೋಗಾಸಗಳನ್ನು ಮಾಡುತ್ತಿದ್ದ ರಾಜ್ ಅವರ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ.

ಎದುರಾಳಿ ಮಣ್ಣುಮುಕ್ಕುವುದು ಗ್ಯಾರಂಟಿ

ಕೈಲಿ ಬ್ಯಾಟ್ ಹಿಡಿದ ಭಂಗಿ ನೋಡಿದರೆ ಸಿಕ್ಕರ್ಸ್ ಗ್ಯಾರಂಟಿ ಎಂಬಂತಿದೆ ಈ ಫೋಟೋ. ರಾಜ್ ಅವರ ಅಪರೂಪದ ಫೋಟೋಗಳಲ್ಲಿ ಇದೂ ಒಂದು. ಅವರು ನಿಂತಿರುವ ಗತ್ತು, ಕೊಟ್ಟಿರುವ ಪೋಸು ಯಾವ ಕ್ರಿಕೆಟಿಗನಿಗೂ ಕಡಿಮೆ ಇಲ್ಲ ಬಿಡಿ.

ಎಂಪಿ ಶಿವಶಂಕರ್ ಜೊತೆ ಅಣ್ಣಾವ್ರು

ಎಂಪಿ ಶಿವಶಂಕರ್ ಅವರೊಂದಿಗೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಗಂಧದಗುಡಿ ಭಾಗ 2ರಲ್ಲಿ ಅಭಿನಯಿಸಿದ ಸಂದರ್ಭದಲ್ಲಿ ತೆಗೆದಂತಹ ಚಿತ್ರ. ಅಣ್ಣಾವ್ರು ಚಿತ್ರೀಕರಣ ನೋಡಿ ಪುಳಕಿತರಾದ ಸಂದರ್ಭ.

ಆಪ್ತಮಿತ್ರರು ಪದಕ್ಕೆ ಈ ಫೋಟೋ ಅನ್ವರ್ಥ

ಆಹಾ ಎಂಥಹಾ ಜೋಡಿ. ಆಪ್ತಮಿತ್ರರು ಎಂಬ ಪದಕ್ಕೆ ಈ ಫೋಟೋ ಅನ್ವರ್ಥ. ಚಿ.ಉದಯಶಂಕರ್ ಹಾಗೂ ರಾಜ್ ಅವರ ಅಪರೂಪದ ಫೋಟೋ. ಉದಯಶಂಕರ್ ಅವರು ರಾಜ್ ಅವರ ಪಾತ್ರವನ್ನು ಗಮನದಲ್ಲಿಟ್ಟುಕೊಂಡೇ ಗೀತೆ ರಚಿಸುತ್ತಿದ್ದರು ಎನ್ನಿಸುತ್ತದೆ.

ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ

ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ. ರೋಷಾಗ್ನಿ ಜ್ವಾಲೆ ಉರಿದುರಿದು. ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ. ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ. ಅಶ್ವಮೇಧ ಅಶ್ವಮೇಧ ... ಈ ರೀತಿ ಹಾಡಿಗೆ ಎಷ್ಟು ಎನರ್ಜಿ ಬೇಕು ಎಂದು ಒಮ್ಮೆ ಯೋಚಿಸಿ.

ಜನರಿಂದ ನಾನು ಮೇಲೆ ಬಂದೆ ಜನರನ್ನೆ ನನ್ನ ದೇವರೆಂದೆ

ಜನರಿಂದ ನಾನು ಮೇಲೆ ಬಂದೆ ಜನರನ್ನೆ ನನ್ನ ದೇವರೆಂದೆ ಜನರಿದ್ದರೆ ನನ್ನ ಬೆನ್ನ ಹಿಂದೆ ಹೋರಾಡಲು ನಾನೆಂದು ಮುಂದೆ, ಈ ದೇವರು ಮಾಡಿದ ಅಜ್ಞೆ ನಾ ಮೀರುವುದುಂಟೇನು, ಈ ಮಣ್ಣಲಿ ಹುಟ್ಟಿದ ಋಣವ ನಾ ಮರೆಯುವುದುಂಟೇನು ಛೆ ಛೆ ಆಗದು ಆಗದು ...

English summary
Cultural icon of Kannada Late Dr. RajKumar golden photos. The state celebrating Dr.Raj birthday on 24th April. Dr Rajkumar's birthday will witness a re-release of his film, Operation Diamond Rocket. The film, starring Dr Rajkumar, Padmapriya, Chandralekha and Vajramuni, will be screened at Bangalore's Menaka Theatre at 10.30 am, 4.30 pm, and 7.30 pm.
Please Wait while comments are loading...