twitter
    For Quick Alerts
    ALLOW NOTIFICATIONS  
    For Daily Alerts

    ಈ ಬಾರಿ ರಾಜ್ ಉತ್ಸವ ಇಲ್ಲ: ಮೊದಲ ಬಾರಿ ಮಿಸ್ ಆದ ಸಂಭ್ರಮ

    |

    ಏಪ್ರಿಲ್ ತಿಂಗಳು ಕನ್ನಡಿಗರಿಗೆ ವಿಶೇಷವಾದ ತಿಂಗಳು. ಈ ತಿಂಗಳನ್ನು ಕನ್ನಡಿಗರು ರಾಜ್ ತಿಂಗಳೆಂದೆ ಕರೆಯುತ್ತಾರೆ. ಏಪ್ರಿಲ್ 24 ವರನಟ ಡಾ.ರಾಜ್ ಕುಮಾರ್ ಹುಟ್ಟಿದ ದಿನ. ಏಪ್ರಿಲ್ 12 ಡಾ.ರಾಜ್ ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ ದಿನ. ಏಪ್ರಿಲ್ ತಿಂಗಳು ಪೂರ್ತಿ ರಾಜ್ ಉತ್ಸವ ಮಾಡುತ್ತಿದ್ದರು. ಆದರೆ ಈ ಬಾರಿ ಏಪ್ರಿಲ್ ಸಂಪೂರ್ಣ ಸ್ತಬ್ಧವಾಗಿದೆ. ಲಕ್ ಡೌನ್ ಹಿನ್ನಲೆ ರಾಜ್ ಉತ್ಸವ ನಡೆಯುವುದು ಅನುಮಾನ.

    ಪ್ರತಿವರ್ಷ ಏಪ್ರಿಲ್ 12ರಂದು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಪುಣ್ಯಭೂಮಿಗೆ ಭೇಟಿ ನೀಡಿ ನೆಚ್ಚಿನ ನಟನನ್ನು ಸ್ಮರಣೆ ಮಾಡುತ್ತಿದ್ದರು. ಏಪ್ರಿಲ್ 24ರಂದು ದೊಡ್ಡ ಹಬ್ಬವನ್ನೆ ಆಚರಿಸುತ್ತಿದ್ದರು. ರಾಜ್ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಕುಟುಂಬದವರ ಜೊತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಹ ಭೇಟಿ ನೀಡಿ ರಾಜ್ ನೆನೆದು ಧನ್ಯರಾಗುತ್ತಿದ್ದರು.

    ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಅಭಿಮಾನಿಗಳು ಸಂಭ್ರಮಿಸಿ ಅನ್ನದಾನ, ರಕ್ತ ದಾನ ಸೇರಿದಂತೆ ತಮ್ಮದೆ ರೀತಿಯಲ್ಲಿ ಡಾ.ರಾಜ್ ಅವರನ್ನು ನೆನೆಯುತ್ತಾರೆ. ಈಗಾಗಲೆ ಎಲ್ಲಾ ತಯಾರಿಗಳು ನಡೆಯುತ್ತಿತ್ತು. ಆದರೆ ಈ ಬಾರಿ ಕಿಲ್ಲರ್ ಕೊರೊನಾ ರಾಜ್ ಸಂಭ್ರಮವನ್ನೂ ಕಿತ್ತುಕೊಂಡಿದೆ.

    Dr. Rajkumar Birthday May Canceled Amid Lock Down

    ಹೌದು, ಈ ಬಾರಿ ರಾಜ್ ಕುಮಾರ್ ಉತ್ಸವ ನಡೆಯುವುದು ಅನುಮಾನವಾಗಿದೆ. ಕೊರೊನಾ ಲಾಕ್ ಡೌನ್ ಇರುವ ಹಿನ್ನಲೆ ಇದೆ ಮೊದಲ ಬಾರಿಗೆ ರಾಜ್ ಸಂಭ್ರಮ ಮಿಸ್ ಆಗುತ್ತಿದೆ. ಈಗಾಗಲೆ ಅಭಿಮಾನಿಗಳು ರಾಜ್ ಸಂಭ್ರಮಕ್ಕೆ ಸಜ್ಜಾಗುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇಡೀ ಏಪ್ರಿಲ್ ತಿಂಗಳು ರಾಜ್ ಗೆ ನಮನ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಇದ್ಯಾವುದು ಕಾಣುತ್ತಿಲ್ಲ. ಕೊರೊನಾ ಲಾಕ್ ಡೌನ್ ಕಾರಣ ಎಲ್ಲಾ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ.

    English summary
    Dr. Rajkumar's birthday may be canceled amid lockdown.
    Friday, April 10, 2020, 8:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X