For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ 92ನೇ ಜನ್ಮದಿನ: ಪುನೀತ್ ರಿಂದ ಹೃದಯಸ್ಪರ್ಶಿ ಗೀತೆಯ ಕೊಡುಗೆ

  |

  ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಇಂದು (ಏಪ್ರಿಲ್ 24) ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟಿದ ದಿನ. ಅಭಿಮಾನಿಗಳು 92ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.

  ಅಪ್ಪನಿಗೆ Puneeth Rajkumar ರಿಂದ ಹೃದಯಸ್ಪರ್ಶಿ ಗೀತೆಯ ಕೊಡುಗೆ | Filmibeat Kannada

  ಆದರೆ ಕಳೆದ ವರ್ಷದಿಂದ ರಾಜ್ ಅದ್ದೂರಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಕೊರೊನಾ ಹಾವಳಿಯಿಂದ ವರನಟನ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಕುಳಿತು ಸಂಭ್ರಮಿಸಬೇಕಾಗಿದೆ. ಈ ವರ್ಷವಾದರೂ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿದೆ.

  ಹೊರ ರಾಜ್ಯದಲ್ಲಿ ಬಿಡುಗಡೆ ಆದ ಮೊದಲ ಕನ್ನಡ ಸಿನಿಮಾಕ್ಕೆ ಸಿಕ್ಕಿತ್ತು ವೈಭವದ ಸ್ವಾಗತಹೊರ ರಾಜ್ಯದಲ್ಲಿ ಬಿಡುಗಡೆ ಆದ ಮೊದಲ ಕನ್ನಡ ಸಿನಿಮಾಕ್ಕೆ ಸಿಕ್ಕಿತ್ತು ವೈಭವದ ಸ್ವಾಗತ

  ಈಗಾಗಲೆ ಅಭಿಮಾನಿಗಳು ಕಂಠೀರವ ಸ್ಟುಡಿಯೋದ ರಾಜ್ ಕುಮಾರ್ ಸ್ಮಾರಕದ ಬಳಿ ಬಂದು ಜಮಾಯಿಸುತ್ತಿದ್ದರು. ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸಿ ವರನಟನನ್ನು ನೆನೆದು ಧನ್ಯರಾಗುತ್ತಿದ್ದರು. ಆದರೆ ಈ ವರ್ಷವೂ ಯಾರು ಸಹ ಮನೆಯಿಂದ ಹೊರಬರುವ ಹಾಗಿಲ್ಲ. ಹಾಗಾಗಿ ಇದ್ದ ಜಾಗದಲ್ಲಿಯೇ ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ.

  ಅಭಿಮಾನಿಗಳಿರಲಿ ಕುಟುಂಬದವರು ಸಹ ಸ್ಮಾರಕದ ಬಳಿ ಹೋಗಿ ಪೂಜೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷವೂ ಕರ್ಫ್ಯೂ ಇರುವುದರಿಂದ ಮನೆಯಿಂದ ಹೊರಬರುವ ಹಾಗಿಲ್ಲ. ಹಾಗಾಗಿ ಮನೆಯಲ್ಲಿಯೇ ರಾಜ್ ಫೋಟೋಗೆ ಪೂಜೆ ಮಾಡಿ ಸರಳವಾಗಿ ಹುಟ್ಟುಹಬ್ಬ ಆಚರಿಸಲಿದ್ದಾರೆ.

  ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪ್ಪಾಜಿ ಹುಟ್ಟುಹಬ್ಬದ ಪ್ರಯುಕ್ತ ಹಾಡಿನ ಮೂಲಕ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. 'ಬಡವರ ಬಂಧು' ಸಿನಿಮಾದ ಹಾಡನ್ನು ಹಾಡುವ ಮೂಲಕ ಅಭಿಮಾನಿಗಳನ್ನು ಸಂತಸ ಪಡಿಸಿದ್ದಾರೆ. 'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿವೆ...' ಹಾಡನ್ನು ಹೇಳಿ ಪುಟ್ಟ ಕಾಣಿಕೆ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನು ಅಪ್ಪು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪುನೀತ್ ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  English summary
  The birthday of Kannada legend Dr.Rajkumar celebrated in a simple way due to covid-19 surge. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X