'ಮಯೂರ' ರೂಪದ ಕೇಕ್ ನಲ್ಲಿ ಮಿಂಚುತ್ತಿರುವ ಡಾ ರಾಜ್

By Bharath Kumar

ಡಾ ರಾಜ್ ಕುಮಾರ್ ಅಂದ್ರೆನೇ ಹಾಗೆ. ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳ ಮೇಲೆ ಪ್ರಭಾವ ಬೀರುತಿರುತ್ತಾರೆ. ಅಭಿಮಾನಿಗಳು ಕೂಡ ಅಷ್ಟೇ ಅಣ್ಣಾವ್ರ ಮೇಲಿನ ಅಭಿಮಾನದಿಂದ ಒಂದಲ್ಲ ಒಂದು ರೀತಿ ಅಭಿಮಾನ ಮೆರೆಯುತ್ತಾರೆ.

ಡಾ ರಾಜ್ ಬಗ್ಗೆ ಏನಪ್ಪಾ ಅಂತಹ ಸುದ್ದಿ ಅಂದ್ರಾ....ವರನಟ ರಾಜ್ ಕುಮಾರ್ ಈಗ ಕೇಕ್ ಅವತಾರದಲ್ಲಿ ನಿಮ್ಮ ಮುಂದೆ ಬರ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ 43ನೇ ಅಂತರಾಷ್ಟ್ರೀಯ ಕೇಕ್ ಪ್ರದರ್ಶನದಲ್ಲಿ ಡಾ ರಾಜ್ ಕುಮಾರ್ ಕಂಗೊಳಿಸಲಿದ್ದಾರೆ.

Dr Rajkumar Cake at International Cake Exhibition

ಚಿತ್ರಕೃಪೆ: ಚಿತ್ರಲೋಕ

ಹೌದು, ರಾಜ್ ಕುಮಾರ್ ಅಭಿನಯಿಸಿದ್ದ 'ಮಯೂರ' ಚಿತ್ರದ ಮಯೂರನಂತೆ ಅಣ್ಣಾವ್ರ ಕೇಕ್ ಸಿದ್ದವಾಗಿದೆ. ಈ ಕೇಕ್ ಸುಮಾರು 5.7 ಅಡಿ ಎತ್ತರ ಇದೆ. ವಿಶೇಷ ಅಂದ್ರೆ ರಾಜ್ ಅವರು ಕೂಡ 5.7 ಅಡಿ ಎತ್ತರ ಇದ್ರು. ಅದಕ್ಕಾಗಿಯೇ ಅಷ್ಟೇ ಎತ್ತರಯಿರುವ ಕೇಕ್ ಮಾಡಿದ್ದಾರೆ.

Dr Rajkumar Cake at International Cake Exhibition

ಅಂದ್ಹಾಗೆ, ಈ ಕೇಕ್ ತಯಾರಿಸಿರುವುದು ಶಂಕರ್ ನಾಗ್ ಅಭಿಮಾನಿ ಟ್ರಸ್ಟ್. ಒಂದೇ ವಾರದಲ್ಲಿ 'ಮಯೂರ' ಕೇಕ್ ತಯಾರಿಸಿದ್ದಾರೆ. ಡಿಸೆಂಬರ್ 17ರಂದು ಈ ಕೇಕ್ ನ್ನ ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು. ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅಣ್ಣಾವ್ರ ಈ ಕೇಕ್ ನ್ನ ಅನಾವರಣಗೊಳಿಸಲಿದ್ದಾರೆ. ತದ ನಂತರ ಡಿಸೆಂಬರ್ 18ರಿಂದ ನಡೆಯಲಿರುವ ಅಂತರಾಷ್ಟ್ರೀಯ 'ಮಯೂರ' ಕೇಕ್ ಪ್ರದರ್ಶನವಾಗಲಿದೆ.

More from Filmibeat

English summary
Shankar nag memorial trust is organising Dr Rajkumar 3D Cake at Kanteerava Studio on December 17th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X