twitter
    For Quick Alerts
    ALLOW NOTIFICATIONS  
    For Daily Alerts

    'ಮಯೂರ' ರೂಪದ ಕೇಕ್ ನಲ್ಲಿ ಮಿಂಚುತ್ತಿರುವ ಡಾ ರಾಜ್

    By Bharath Kumar
    |

    ಡಾ ರಾಜ್ ಕುಮಾರ್ ಅಂದ್ರೆನೇ ಹಾಗೆ. ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳ ಮೇಲೆ ಪ್ರಭಾವ ಬೀರುತಿರುತ್ತಾರೆ. ಅಭಿಮಾನಿಗಳು ಕೂಡ ಅಷ್ಟೇ ಅಣ್ಣಾವ್ರ ಮೇಲಿನ ಅಭಿಮಾನದಿಂದ ಒಂದಲ್ಲ ಒಂದು ರೀತಿ ಅಭಿಮಾನ ಮೆರೆಯುತ್ತಾರೆ.

    ಡಾ ರಾಜ್ ಬಗ್ಗೆ ಏನಪ್ಪಾ ಅಂತಹ ಸುದ್ದಿ ಅಂದ್ರಾ....ವರನಟ ರಾಜ್ ಕುಮಾರ್ ಈಗ ಕೇಕ್ ಅವತಾರದಲ್ಲಿ ನಿಮ್ಮ ಮುಂದೆ ಬರ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ 43ನೇ ಅಂತರಾಷ್ಟ್ರೀಯ ಕೇಕ್ ಪ್ರದರ್ಶನದಲ್ಲಿ ಡಾ ರಾಜ್ ಕುಮಾರ್ ಕಂಗೊಳಿಸಲಿದ್ದಾರೆ.

    ಬೆಂಗಳೂರಿನ ಗಾಂಧಿನಗರದ ರಸ್ತೆ ಇನ್ನು ಮುಂದೆ 'ವಜ್ರೇಶ್ವರಿ' ರಸ್ತೆ ಆಗಲಿದೆಬೆಂಗಳೂರಿನ ಗಾಂಧಿನಗರದ ರಸ್ತೆ ಇನ್ನು ಮುಂದೆ 'ವಜ್ರೇಶ್ವರಿ' ರಸ್ತೆ ಆಗಲಿದೆ

    Dr Rajkumar Cake at International Cake Exhibition

    ಚಿತ್ರಕೃಪೆ: ಚಿತ್ರಲೋಕ

    ಹೌದು, ರಾಜ್ ಕುಮಾರ್ ಅಭಿನಯಿಸಿದ್ದ 'ಮಯೂರ' ಚಿತ್ರದ ಮಯೂರನಂತೆ ಅಣ್ಣಾವ್ರ ಕೇಕ್ ಸಿದ್ದವಾಗಿದೆ. ಈ ಕೇಕ್ ಸುಮಾರು 5.7 ಅಡಿ ಎತ್ತರ ಇದೆ. ವಿಶೇಷ ಅಂದ್ರೆ ರಾಜ್ ಅವರು ಕೂಡ 5.7 ಅಡಿ ಎತ್ತರ ಇದ್ರು. ಅದಕ್ಕಾಗಿಯೇ ಅಷ್ಟೇ ಎತ್ತರಯಿರುವ ಕೇಕ್ ಮಾಡಿದ್ದಾರೆ.

    Dr Rajkumar Cake at International Cake Exhibition

    ಅಂದ್ಹಾಗೆ, ಈ ಕೇಕ್ ತಯಾರಿಸಿರುವುದು ಶಂಕರ್ ನಾಗ್ ಅಭಿಮಾನಿ ಟ್ರಸ್ಟ್. ಒಂದೇ ವಾರದಲ್ಲಿ 'ಮಯೂರ' ಕೇಕ್ ತಯಾರಿಸಿದ್ದಾರೆ. ಡಿಸೆಂಬರ್ 17ರಂದು ಈ ಕೇಕ್ ನ್ನ ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು. ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅಣ್ಣಾವ್ರ ಈ ಕೇಕ್ ನ್ನ ಅನಾವರಣಗೊಳಿಸಲಿದ್ದಾರೆ. ತದ ನಂತರ ಡಿಸೆಂಬರ್ 18ರಿಂದ ನಡೆಯಲಿರುವ ಅಂತರಾಷ್ಟ್ರೀಯ 'ಮಯೂರ' ಕೇಕ್ ಪ್ರದರ್ಶನವಾಗಲಿದೆ.

    ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ 'ಅಣ್ಣಾವ್ರ ಮೊಮ್ಮಗ'ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ 'ಅಣ್ಣಾವ್ರ ಮೊಮ್ಮಗ'

    English summary
    Shankar nag memorial trust is organising Dr Rajkumar 3D Cake at Kanteerava Studio on December 17th.
    Saturday, December 16, 2017, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X