twitter
    For Quick Alerts
    ALLOW NOTIFICATIONS  
    For Daily Alerts

    ಮೊದಲ ಹೆಜ್ಜೆಯಲ್ಲೇ ಯಶಸ್ಸು ಗಳಿಸಿ ಅಣ್ಣಾವ್ರ ಮೊಮ್ಮಗ

    By Pavithra
    |

    ಕಲಾವಿದರ ಮಕ್ಕಳು ಚಿತ್ರರಂಗದಲ್ಲೇ ಗುರುತಿಸಿಕೊಳ್ಳಬೇಕು ಎನ್ನುವ ನಿಯಮವೇನಿಲ್ಲ. ತಮ್ಮ ತಾತ, ತಂದೆ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಸಿನಿಮಾರಂಗದಲ್ಲಿ ಅದ್ಬುತ ಕಲಾವಿದರಾಗಿ ಗುರುತಿಸಿಕೊಂಡಿದ್ದರು ಡಾ ರಾಜ್ ಕುಮಾರ್ ಅವರ ಕಿರಿಯ ಮೊಮ್ಮಗ ಯುವ ರಾಜ್ಕುಮಾರ್ ಮಾತ್ರ ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ ಕ್ಷೇತ್ರ. ಕನ್ನಡಿಗರು ಕೆ ಎ ಎಸ್ ಹಾಗೂ ಐ ಎ ಎಸ್ ಪರೀಕ್ಷೆಗಳಿಗೆ ತರಬೇತಿ ಪಡೆಯಲು ದೆಹಲಿಗೆ ಹೋಗಬೇಕಿತ್ತು.

    ನಮ್ಮದಲ್ಲದ ಊರಿನಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುವುದು ತುಂಬಾ ಕಷ್ಟ ಎಂದು ತಿಳಿದ ಡಾ ರಾಜ್ ಕುಟುಂಬಸ್ಥರು ಬೆಂಗಳೂರಿನಲ್ಲಿ ಅಣ್ಣಾವ್ರ ಹೆಸರಿನಲ್ಲಿ ಡಾ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಆರಂಭ ಮಾಡಿದರು. ಪ್ರಾರಂಭವಾದ ಒಂದೇ ವರ್ಷದಲ್ಲಿ ರಾಜ್ಯದ ಜನರು ಮೆಚ್ಚುವಂತಹ ಕೆಲಸವನ್ನ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ ಮಾಡಿದ್ದಾರೆ.

    Dr Rajkumar Civil Service Academy has trained 16 people selected for IAS

    ಹೆಸರು ಬದಲಾಯಿಸಿಕೊಂಡ ಅಣ್ಣಾವ್ರ ಮೊಮ್ಮಗ ಗುರು ರಾಜ್ ಕುಮಾರ್ಹೆಸರು ಬದಲಾಯಿಸಿಕೊಂಡ ಅಣ್ಣಾವ್ರ ಮೊಮ್ಮಗ ಗುರು ರಾಜ್ ಕುಮಾರ್

    ಈ ವರ್ಷ ರಾಜ್ಯದಿಂದ ಐಎಎಸ್ ಗೆ ಆಯ್ಕೆ ಆಗಿರುವ 28 ಜನರ ಪೈಕಿ 16 ಜನರು ಡಾ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ಸಂದರ್ಶನಕ್ಕಾಗಿ ತರಬೇತಿ ಪಡೆದಿದ್ದರು ಎನ್ನುವುದು ಖುಷಿಯ ವಿಚಾರವಾಗಿದೆ. ಐಎಎಸ್ ನ ಅಂತಿಮ ಪರೀಕ್ಷೆಯಲ್ಲಿ ಆಯ್ಕೆಯಾದ ಬಳಿಕ ನಡೆಯುವ ಸಂದರ್ಶನಕ್ಕೆ ಸಿದ್ಧಗೊಳ್ಳಲು ರಾಜ್ ಕುಮಾರ್ ಅಕಾಡೆಮಿಯಲ್ಲಿ ಅಣಕು ಸಂದರ್ಶನ ನಡೆಸಲಾಗಿದೆ. ಅಣಕು ಸಂದರ್ಶನದಲ್ಲಿ ಯುಪಿಎಸ್ ಸಿ ಗೆ ಸಂದರ್ಶನದ ಸವಾಲುಗಳನ್ನ ಹೇಳಿಕೊಡಲಾಗುತ್ತದೆ.

    Dr Rajkumar Civil Service Academy has trained 16 people selected for IAS

    ಇಷ್ಟು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಯಶಸ್ಸು ಕೀರ್ತಿಗಳಿಸಿದ ಡಾ ರಾಜ್ ಕುಟುಂಬಸ್ಥರು ಈಗ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರು ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ.

    ಹೆಸರು ಬದಲಾವಣೆ ಗುಟ್ಟು ಬಿಚ್ಚಿಟ್ಟ ರಾಜ್ ಮೊಮ್ಮಗಹೆಸರು ಬದಲಾವಣೆ ಗುಟ್ಟು ಬಿಚ್ಚಿಟ್ಟ ರಾಜ್ ಮೊಮ್ಮಗ

    English summary
    Dr Rajkumar Civil Service Academy has trained 16 people selected for IAS. Rajkumar Civil Service Academy is run by Raj Kumar's grandson Yuvraj Raj Kumar.
    Sunday, April 29, 2018, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X