twitter
    For Quick Alerts
    ALLOW NOTIFICATIONS  
    For Daily Alerts

    ಡಾ.ರಾಜ್ ಕುಮಾರ್ ವಿಶ್ವಕೋಶ ಬೆಲೆ ರು.15,೦೦೦

    By Rajendra
    |

    ವರನಟ, ಕರ್ನಾಟಕ ರತ್ನ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಕುರಿತು ಈಗಾಗಲೆ ಹಲವಾರು ಪುಸ್ತಕಗಳು, ಕೃತಿಗಳು ಪ್ರಕಟವಾಗಿವೆ. ಇದುವರೆಗೂ ರಾಜ್ ಕುರಿತು 70ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗಿವೆ.

    ಇದೇ ಮೊದಲ ಬಾರಿಗೆ ಡಾ.ರಾಜ್ ಕುಮಾರ್ ಕುರಿತ ಸಮಗ್ರ ಚರಿತ್ರೆಯನ್ನು ಹೊರತಂದಿದ್ದಾರೆ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ. ಒಟ್ಟು 2110 ಪುಟಗಳ 2 ಸಂಪುಟಗಳಲ್ಲಿ 'ಡಾ.ರಾಜ್‌ ಕುಮಾರ್ ಚರಿತ್ರೆ' ಹೊರತಂದಿದ್ದಾರೆ. [ಡಾ.ರಾಜ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ]

    ಈ ಬೃಹತ್ ಗ್ರಂಥದ ಬಗ್ಗೆ ಮಾತನಾಡಿರುವ ಡಾ.ಬರಗೂರು ರಾಮಚಂದ್ರಪ್ಪ, "ಇದೊಂದು ಭಿನ್ನ, ವಿಶಿಷ್ಟ ಹಾಗೂ ವೈವಿಧ್ಯಮಯ" ಎಂದಿದ್ದಾರೆ. ಈ ಗ್ರಂಥಕ್ಕೆ ಬೇಕಾದ ಮಾಹಿತಿ ಕಲೆಹಾಕಲು ರುಕ್ಕೋಜಿ ಅವರು 15 ವರ್ಷಗಳ ಕಾಲ ಶ್ರಮಿಸಿದ್ದಾರೆ. 150ಕ್ಕಿಂತಲೂ ಹೆಚ್ಚು ರಾಜ್ ಒಡನಾಡಿಗಳನ್ನು ಸಂಪರ್ಕಿಸಿದ್ದಾರೆ.

    ನಟ, ನಟಿಯರು, ತಂತ್ರಜ್ಞರ ಅನಿಸಿಕೆಗಳು, ಅಭಿಪ್ರಾಯಗಳು, ಸೂಕ್ಷ್ಮ ವಿಚಾರಗಳನ್ನು ದಾಖಲಿಸಲಾಗಿದೆ. ರಾಜ್ ಅಭಿನಯದ ಚಿತ್ರಗಳು ಅರ್ಧಕ್ಕೆ ನಿಂತುಹೋಗಿದ್ದು, ರಾಜ್ ಅವರು 16 ಸಂಗೀತ ಕಚೇರಿಗಳನ್ನು ನಡೆಸಿದ್ದು ಈ ರೀತಿಯ ಹಲವಾರು ಅಪರೂಪದ, ವೈವಿಧ್ಯಮಯ ಸಂಗತಿಗಳ ಆಗರ ಈ ಗ್ರಂಥ.

    ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಈ ಗ್ರಂಥದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದು ವಿಶ್ವಕ್ಕೇ ಮಾದರಿ ಎಂದಿದ್ದಾರೆ. ಇದನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವಂತೆ ಸಲಹೆಯನ್ನೂ ನೀಡಿದ್ದಾರೆ. ಚಂದ್ರಶೇಖರ ಕಂಬಾರ ಅವರು ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಅಭಿನಯಿಸದೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ರಾಜ್ ಗೆ ಸಲ್ಲುತ್ತದೆ ಎಂದಿದ್ದಾರೆ.

    Dr. Rajkumar Encyclopaedia
    ಈ ಕೃತಿ ನವೆಂಬರ್ ತಿಂಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮೊದಲ ಸಂಪುಟ 1080 ಪುಟ ಹೊಂದಿದ್ದು, ಇದರಲ್ಲಿ 4120 ಛಾಯಾಚಿತ್ರಗಳಿವೆ. ಎರಡನೇ ಸಂಪುಟ 1060 ಪುಟ ಹೊಂದಿದ್ದು, 4190 ಛಾಯಾಚಿತ್ರಗಳನ್ನು ಒಳಗೊಂಡಿವೆ.

    ಪುಸ್ತಕ ಲೋಕಾರ್ಪಣಾ ಸಮಿತಿ ಈ ಎರಡು ಸಂಪುಟಗಳ ಗ್ರಂಥ ಹೊರತರಲು 87 ಲಕ್ಷ ರೂ. ವೆಚ್ಚ ಮಾಡಿದೆ. ಮುಖಬೆಲೆ 15 ಸಾವಿರ. ಆದರೆ ರಿಯಾಯಿತಿ ದರದಲ್ಲಿ ರು. 7500ಕ್ಕೆ ನೀಡಲಾಗುತ್ತದೆ. ಈ ಕೃತಿ ನಿಮ್ಮ ಎರಡೂ ಕೈ ಸೇರಲು ನವೆಂಬರ್ ವರೆಗೂ ಕಾಯಲೇಬೇಕು. (ಫಿಲ್ಮಿಬೀಟ್ ಕನ್ನಡ)

    English summary
    An encyclopaedia on Dr Rajkumar authored by Doddahulluru Rukkoji, the project cost `87 lakh. The first volume of the book which has 1,080 pages has 4,120 photos that gives details on the history of Dr Rajkumar’s films. The second volume that has 1,060 pages has 4,190 photos.
    Thursday, September 25, 2014, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X