»   » ಸದಾಶಿವ ಬ್ರಹ್ಮಾವರ್ ಗೆ ನೆರವು ನೀಡಲು ಮುಂದಾದ ಡಾ.ರಾಜ್ ಕುಟುಂಬ

ಸದಾಶಿವ ಬ್ರಹ್ಮಾವರ್ ಗೆ ನೆರವು ನೀಡಲು ಮುಂದಾದ ಡಾ.ರಾಜ್ ಕುಟುಂಬ

Posted By:
Subscribe to Filmibeat Kannada

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರ ಅಸಹಾಯಕತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಕನ್ನಡದ ನಟರು ನೆರವಿಗೆ ಆಗಮಿಸಿದ್ದಾರೆ. ಕಿಚ್ಚ ಸುದೀಪ್ ನಂತರ ಈಗ ಡಾ ರಾಜ್ ಕುಮಾರ್ ಕುಟುಂಬ ಸದಾಶಿವ ಬ್ರಹ್ಮಾವರ್ ಅವರಿಗೆ ಸಹಾಯ ಮಾಡಲು ಮುಂದಾಗಿದೆ.

ಹೌದು, ಈ ವಿಷ್ಯ ತಿಳಿದ ಶಿವರಾಜ್ ಕುಮಾರ್ ಅಭಿಮಾನಿ ಹಾಗೂ 'ಟಗರು' ಚಿತ್ರದ ನಿರ್ಮಾಪಕ ಶ್ರೀಕಾಂತ್ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿರುವ ಶ್ರೀಕಾಂತ್, ಮೊದಲು ಅವರು ಸಿಗಲಿ ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ.

Dr Rajkumar Family is rushing to help Sadashiva Brahmavar
Dr. Rajkumar Fans Upset On Shiva Rajkumar Fans | Filmibeat Kannada

ಸದಾಶಿವ ಬ್ರಹ್ಮಾವರ್ ಅವರು ಡಾ.ರಾಜ್ ಕುಮಾರ್ ಬಹುತೇಕ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದರು. ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಮಾರ್, ಪುನೀತ್ ರಾಜ್ ಕುಮಾರ್ ಚಿತ್ರಗಳಲ್ಲಿ ನಟಿಸಿದ್ದರು.

English summary
Dr Rajkumar Family is rushing to help senior Actor Sadashiva Brahmavar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada