11ನೇ ದಿನದ ಕಾರ್ಯ: ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಅಣ್ಣಾವ್ರ ಕುಟುಂಬ

ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 11 ದಿನ ಆಗಿದೆ. ಇಂದು 11ನೇ ದಿನದ ಕಾರ್ಯವನ್ನು ಅಣ್ಣಾವ್ರ ಕುಟುಂಬ ಮಾಡಲಿದ್ದು, ಇಂದು ಕುಟುಂಬಸ್ಥರಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸಲಾಗಿದೆ.

Recommended Video

ದುಃಖದಲ್ಲೆ ಪುನೀತ್‌ 11ನೇ ದಿನದ ಕಾರ್ಯದಲ್ಲಿ ಪತ್ನಿ ಮಕ್ಕಳು

ಈಗಾಲಗೇ ರಾಘವೇಂದ್ರ ರಾಜ್‌ಕುಮಾರ್ ಆದಿಯಾಗಿ ದೊಡ್ಮನೆಯ ಹಲವು ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಮುಂದಾಳತ್ವದಲ್ಲಿ 11 ನೇ ದಿನದ ಕಾರ್ಯ ಮಾಡಲು ಸಲಕ ಸಿದ್ಧತೆ ಆರಂಭವಾಗಿದೆ. ರಾಘವೇಂದ್ರ ರಾಜ್‌ಕುಮಾರ್ ಅವರ ಇಬ್ಬರು ಮಕ್ಕಳು ಬಿರುಸಿನಿಂದ ಓಡಾಡುತ್ತಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಅಪ್ಪು ಸಮಾಧಿಯನ್ನು ಹೂವುಗಳಿಂದ ಅಲಂಕೃತಗೊಳಿಸಲಾಗಿದೆ. ಅಪ್ಪುವಿನ ಇಷ್ಟದ ಆಹಾರವನ್ನು ಸಮಾಧಿಯ ಎದುರು ಇಡಲಾಗಿದೆ. ಗುಲಾಬಿ ಪಕಳೆಗಳಿಂದ ಸಮಾಧಿಯನ್ನು ಮುಚ್ಚಿ ಸಮಾಧಿಯ ಮೇಲೆ ತುಳಸಿ ಹಾರವನ್ನು ವೃತ್ತಾಕಾರದಲ್ಲಿ ಇಟ್ಟು ಅದರ ಮಧ್ಯೆ ಮಣ್ಣಿನ ಹಣತೆಯನ್ನು ಹಚ್ಚಲಾಗಿದೆ. ಪುನೀತ್ ರಾಜ್‌ಕುಮಾರ್ ಸಮಾಧಿಯ ಸುತ್ತಲೂ ಬಿಳಿ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದೆ. ಸಮಾಧಿಯ ಪಕ್ಕ ಗೋಡೆಯ ಮಾದರಿ ರಚನೆ ಮಾಡಿ ಅದರಲ್ಲಿ ಸ್ಟಾರ್ ಮಾಡಿ ಅದರ ಮಧ್ಯೆ ರಾಜಕುಮಾರ ಸಿನಿಮಾದ ಪುನೀತ್ ಚಿತ್ರವನ್ನು ಇರಿಸಲಾಗಿದೆ.

 Dr Rajkumar Family Members Performed 11th Day Pooja For Puneeth Rajkumar

ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಮಕ್ಕಳಾದ ವಂದಿತಾ ಹಾಗೂ ಧೃತಿ ಸಮಾಧಿ ಬಳಿ ಆಗಮಿಸಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ವಂದಿತಾಗೆ ಇಂದು ಪರೀಕ್ಷೆ ಇದೆ. ಅಪ್ಪನಿಗೆ ಪೂಜೆ ಸಲ್ಲಿಸಿ ವಂದಿತಾ ಪರೀಕ್ಷೆಗೆ ತೆರಳುವ ಸಂಭವ ಇದೆ.

ಶಿವರಾಜ್ ಕುಮಾರ್ ದಂಪತಿ ಅವರ ಮಕ್ಕಳು ಸಹ ಸಮಾಧಿ ಬಳಿ ಆಗಮಿಸಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಸಹೋದರ ಚಿನ್ನೇಗೌಡ ಕುಟುಂಬ, ಅವರ ಮಕ್ಕಳಾದ ಶ್ರೀಮುರಳಿ, ರಾಘವೇಂದ್ರ ರಾಜ್‌ಕುಮಾರ್ ಸಹ ಸಮಾಧಿ ಬಳಿ ಆಗಮಿಸಿದ್ದಾರೆ. ರಾಮ್‌ಕುಮಾರ್ ಕುಟುಂಬ ಸಹ ಆಗಮಿಸಿದೆ. ಅಪ್ಪು ಅವರ ಅಭಿಮಾನಿ ಆಗಿರುವ ನಟಿ, ನಿರೂಪಕಿ, ಅನುಶ್ರೀ ಸಮಾಧಿ ಬಳಿ ಆಗಮಿಸಿದ್ದಾರೆ. ಅನುಶ್ರೀ ಮುಖದಲ್ಲಿ ದುಃಖ ಎದ್ದು ಕಾಣುತ್ತಿದೆ.

 Dr Rajkumar Family Members Performed 11th Day Pooja For Puneeth Rajkumar

11ನೇ ದಿನ ಪೂಜಾ ಕಾರ್ಯಗಳು ಪ್ರಾರಂಭವಾಗಿದ್ದು, ಇನ್ನೂ ಹಲವಾರು ಗಣ್ಯರು, ಪುನೀತ್ ಅವರ ಆಪ್ತರು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕಂಠೀರವ ಸ್ಟುಡಿಯೋಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆ ವರೆಗೆ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಇನ್ಯಾರ ಪ್ರವೇಶಕ್ಕೂ ಅನುಮತಿ ಇರುವುದಿಲ್ಲ. 12 ಬಳಿಕ ಸಾರ್ವಜನಿಕರು ದರ್ಶನ ಪಡೆಯಬಹುದಾಗಿದೆ.

More from Filmibeat

English summary
11th day pooja performed by family members for Puneeth Rajkumar. Raghavendra Rajkumar, Shiva Rajkumar and many family members, friends attended pooja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X