twitter
For Quick Alerts
ALLOW NOTIFICATIONS
For Daily Alerts

ಗಂಗಾಧರ್‌ಗೆ ಡಾ.ರಾಜ್ ಕುಟುಂಬದ ಬೆಂಬಲ?

By Rajendra

Next »

« Previous

BN Gangadhar
ಇನ್ನು ರಾಜಕೀಯ ಪರವಾಗಿ ನೋಡಿದರೆ, ಭಾರತೀಯ ಜನತಾ ಪಕ್ಷದ ತಾರಾ (ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ), ಶ್ರುತಿ ಹಾಗೂ ಮದನ್ ಮಲ್ಲು ಸೇರಿದಂತೆ ಸೂರಪ್ಪ ಬಾಬು, ಮುನಿರತ್ನ, ರಾಕ್‌ಲೈನ್ ವೆಂಕಟೇಶ್ ಬೆಂಬಲ ವಿಜಯಕುಮಾರ್ ಅವರಿಗೆ ಇದ್ದೇ ಇದೆ.

ದಿವಂಗತ ನಟ ವಿಷ್ಣುವರ್ಧನ್ ಅಭಿಮಾನಿಗಳ ಕೃಪೆ ಇದ್ದರೂ ವರನಟ ಡಾ.ರಾಜ್ ಕುಮಾರ್ ಹಾಗೂ ಅಂಬರೀಶ್ ಅಭಿಮಾನಿಗಳ ಬೆಂಬಲ ಸಿಗುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮೂಲಗಳ ಪ್ರಕಾರ ಗಂಗಾಧರ್ ಅವರಿಗೆ, ಡಾ.ರಾಜ್ ಕುಮಾರ್ ಕುಟುಂಬ, ಅಂಬರೀಶ್ ಅಭಿಮಾನಿಗಳು, ನಿರ್ಮಾಪಕರಾದ ಎನ್.ಎಂ. ಸುರೇಶ್, ಶಂಕರೇಗೌಡ, ಎನ್ ಕುಮಾರ್, ಉಮೇಶ್ ಬಣಕಾರ್, ರಾಮಮೂರ್ತಿ, ನವಶಕ್ತಿ ನಾಗರಾಜ್ ಮುಂತಾದವರ ಬೆಂಬಲ ಇದೆ ಎನ್ನಲಾಗಿದೆ.

ವಿಜಯಲಕ್ಷ್ಮಿ ಗಂಗಾಧರ್ ಅವರ ಪರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೂ ಕೊನೆಯ ಕ್ಷಣದಲ್ಲಿ ಏನಾಗುತ್ತದೋ ಯಾರಿಗೆ ಗೊತ್ತು? ಗಂಗಾಧರ್ ಅವರು 500ಕ್ಕೂ ಹೆಚ್ಚು ಚಿತ್ರಗಳಿಗೆ ವಿತರಕರಾಗಿ ಕೆಲಸ ಮಾಡಿದ್ದಾರೆ.

ಇದುವರೆಗೂ ಅವರು 25 ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಜಿದ್ದು' (1983) ಅವರ ನಿರ್ಮಾಣದ ಮೊಟ್ಟ ಮೊದಲ ಚಿತ್ರ. ಎಡಿಟಿಂಗ್ ಸ್ಟುಡಿಯೋ ಒಂದರ ಮಾಲೀಕರೂ ಆಗಿರುವ ಅವರು ಈ ಹಿಂದೆ ಫಿಲಂ ಚೇಂಬರ್ ಉಪಾಧ್ಯಕ್ಷರಾಗಿದ್ದವರು. ಕನ್ನಡ ಚಿತ್ರೋದ್ಯಮದ ಹಿರಿಯ ಸದಸ್ಯರಲ್ಲಿ ಒಬ್ಬರು.

Next »

« Previous

English summary
BN Gangadhar has been a distributor for more than 500 films and has produced 25 movies. Jiddu was his first Kannada movie, for which he turned producer in 1983. He has been the Vice President of KFCC in the past.
Friday, September 28, 2012, 12:16
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X