»   » ಶಿವಣ್ಣನ ಹೇರ್ ಸ್ಟೈಲ್ ನ ಫಾಲೋ ಮಾಡಿದ್ರಂತೆ ಡಾ.ರಾಜ್, ಯಾವ ಚಿತ್ರದಲ್ಲಿ?

ಶಿವಣ್ಣನ ಹೇರ್ ಸ್ಟೈಲ್ ನ ಫಾಲೋ ಮಾಡಿದ್ರಂತೆ ಡಾ.ರಾಜ್, ಯಾವ ಚಿತ್ರದಲ್ಲಿ?

Posted By:
Subscribe to Filmibeat Kannada
ಶಿವರಾಜ್ ಕುಮಾರ್ ಹೇರ್ ಸ್ಟೈಲ್ ನ ಫಾಲೋ ಮಾಡಿದ್ರಂತೆ ಅಣ್ಣಾವ್ರು | Filmibeat Kannada

ಡಾ.ರಾಜ್ ಕುಮಾರ್ ಅವರ ಆದರ್ಶ, ಅವರ ಪಾತ್ರಗಳು, ಅವರ ಸರಳತೆ ಹೀಗೆ ಪ್ರತಿಯೊಂದನ್ನ ಇಂದಿನ ಜನಾಂಗ ಫಾಲೋ ಮಾಡ್ತಿದೆ. ಇಂಡಸ್ಟ್ರಿಗೆ ಬರುವ ಪ್ರತಿಯೊಬ್ಬರು ಅಣ್ಣಾವ್ರ ಮಾರ್ಗವನ್ನ ಅನುಸರಿಸಿ ಬರ್ತಿದ್ದಾರೆ.

ಆದ್ರೆ, ನಿಮಗೆ ಗೊತ್ತಿಲ್ಲದ ಒಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ, ಡಾ.ರಾಜ್ ಕುಮಾರ್ ಅವರು ಶಿವಣ್ಣನ ಸ್ಟೈಲ್ ನ ಫಾಲೋ ಮಾಡಿದ್ರಂತೆ. ಶಿವಣ್ಣನ ಹೇರ್ ಸ್ಟೈಲ್ ನೋಡಿ ತಮ್ಮ ಒಂದು ಚಿತ್ರದಲ್ಲಿ ಅಳವಡಿಸಿಕೊಂಡಿದ್ದರಂತೆ. ಆ ಚಿತ್ರ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿದೆ.

ಈ ವಿಷ್ಯವನ್ನ ಡಾ.ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ 'ಟಗರು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಹಾಗಿದ್ರೆ, ಶಿವಣ್ಣನ ಆ ಹೇರ್ ಸ್ಟೈಲ್ ಹೇಗಿತ್ತು? ಆ ಚಿತ್ರ ಯಾವುದು ಎಂದು ತಿಳಿಯಲು ಮುಂದೆ ಓದಿ....

ಶಿವಣ್ಣನ ಹೇರ್ ಸ್ಟೈಲ್ ಫಾಲೋ ಮಾಡಿದ ರಾಜ್

ಡಾ ರಾಜ್ ಕುಮಾರ್ ಅಭಿನಯಿಸಿದ್ದ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ಅವರ ಹೇರ್ ಸ್ಟೈಲ್ ನ ಅಳವಡಿಸಿಕೊಂಡಿದ್ದರಂತೆ. ಶಿವಣ್ಣನ ಆಗಿನ ಸಮಯದಲ್ಲಿ ಮಾಡಿಕೊಂಡಿದ್ದ ಹೇರ್ ಸ್ಟೈಲ್ ನೋಡಿ ರಾಜ್ ಹೀಗೊಂದು ಪ್ರಯತ್ನ ಮಾಡಿದ್ದರಂತೆ. ಅದು ಯಶಸ್ಸು ಕೂಡ ಆಯಿತು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿಕೊಂಡರು.

ಪುಟ್ಟ ಪೋರನಿಗೆ ತಲೆಬಾಗಿದ 'ಅಣ್ಣಾವ್ರ' ಮಕ್ಕಳು

ಯಾವ ಚಿತ್ರದಲ್ಲಿ ಈ ಸ್ಟೈಲ್ ಮಾಡಲಾಗಿತ್ತು?

1974ರಲ್ಲಿ ಬಿಡುಗಡೆಯಾಗಿದ್ದ 'ಬಂಗಾರದ ಪಂಜರ' ಚಿತ್ರಕ್ಕಾಗಿ ಶಿವಣ್ಣನ ಹೇರ್ ಸ್ಟೈಲ್ ನ ಫಾಲೋ ಮಾಡಿದ್ರಂತೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಅವರು ಮುಗ್ದ ಹಳ್ಳಿ ಯುವಕನಾಗಿ ಕಾಣಿಸಿಕೊಂಡಿದ್ದರು. ಆರತಿ, ಬಾಲಕೃಷ್ಣ, ಕೆ.ಎಸ್ ಆಶ್ವಥ್, ಪಂಡಿರಿ ಬಾಯಿ ಸೇರಿದಂತೆ ಹಲವರು ಅಭಿನಯಿಸಿದ್ದರು.

ಹುಷಾರು... ಈ 'ಟಗರು'ಗೆ ಮೈ ತುಂಬ ಸಿಕ್ಕಾಪಟ್ಟೆ ಪೋಗರು

ಶಿವಣ್ಣನ ಹೇರ್ ಸ್ಟೈಲ್ ಹೇಗಿತ್ತು?

ಆದ್ರೆ, ಆ ಸಮಯದಲ್ಲಿ ಶಿವಣ್ಣ ಹೇರ್ ಸ್ಟೈಲ್ ಹೇಗಿತ್ತು ಎನ್ನುವ ಬಗ್ಗೆ ಗೊತ್ತಿಲ್ಲ. ಆದ್ರೆ, ಬಂಗಾರದ ಪಂಜರ ಚಿತ್ರದಲ್ಲಿ ಶಿವಣ್ಣನ ಹೇರ್ ಸ್ಟೈಲ್ ನ ಅಣ್ಣಾವ್ರ ಅಳವಡಿಸಿಕೊಂಡಿದ್ದರು ಎನ್ನುವುದು ವಾಸ್ತವ.

ಶಿವಣ್ಣನ 'ಟಗರು' ಈ ವರ್ಷ ಫೀಲ್ಡ್ ಗೆ ಇಳಿಯುವುದಿಲ್ಲ.!

ಡಾ.ರಾಜ್ ಗೂ 'ಟಗರು' ಚಿತ್ರಕ್ಕೆ ಸಂಬಂಧ.!

ಇನ್ನು 'ಬಂಗಾರದ ಪಂಜರ' ಚಿತ್ರದಲ್ಲಿ ರಾಜ್ ಕುಮಾರ್ ಅವರು 'ಮೈಲಾರಿ' ಎಂಬ 'ಟಗರು' ಪಾತ್ರ ಗಮನ ಸೆಳೆದಿತ್ತು. ಈಗ ಶಿವಣ್ಣ ಅಭಿನಯದಲ್ಲಿ ಟಗರು ಎಂಬ ಸಿನಿಮಾ ಮೂಡಿ ಬರುತ್ತಿರುವುದು ಡಾ.ರಾಜ್ ಅಭಿಮಾನಿಗಳಿಗೆ ಸಂತಸ ನೀಡಿದೆ.

ಟೀಸರ್ ಲಾಂಚ್ ಗೂ ಮುನ್ನ ಶಿವಣ್ಣ-ಮಾನ್ವಿತಾ ಏನ್ ಮಾಡಿದ್ರು ಗೊತ್ತಾ?

English summary
Kannada Actor Raghavendra Rajkumar said that Dr. Rajkumar also followed Shivaraj Kumar's hairstyle. 'ಬಂಗಾರದ ಪಂಜರ' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಹೇರ್ ಸ್ಟೈಲ್ ನ್ನ ರಾಜ್ ಕುಮಾರ್ ಫಾಲೋ ಮಾಡಿದ್ದರಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X