ಧನ್ಯಾ ರಾಮ್‌ಕುಮಾರ್ ತೆಲುಗು, ತಮಿಳಿಗೆ ಎಂಟ್ರಿಗೆ ಮುಹೂರ್ತ ಫಿಕ್ಸ್!

ಕನ್ನಡದ ವರನಟ ಡಾ.ರಾಜಕುಮಾರ್ ಕುಟುಂಬದಿಂದ ಅವರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ರಾಜ್‌ಕುಮಾರ್ ಮಗಳ ಮಗಳು ಧನ್ಯಾ ರಾಮ್‌ಕುಮಾರ್ ಮೊದಲ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. 'ನಿನ್ನ ಸನಿಹಕೆ' ಸಿನಿಮಾದ ಮೂಲಕ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.

ರಾಜಕುಮಾರ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದು, ಬಿಗ್ ಪರದೆ ಮೇಲೆ ಕಾಣಿಸಿಕೊಂಡ ಮೊದಲ ನಟಿ ಧನ್ಯಾ ರಾಮ್‌ಕುಮಾರ್. ಧನ್ಯಾ ಉತ್ತಮ ಕಲಾವಿದೆ ಎನ್ನುವುದನ್ನು ತಮ್ಮ ಮೊದಲ ಸಿನಿಮಾದ ಮೂಲಕ ಈಗಾಗಲೇ ಸಾಬೀತು ಮಾಡಿದ್ದಾರೆ.

'ನಿನ್ನ ಸನಿಹಕೆ' ಚಿತ್ರದ ಬಳಿಕ ಧನ್ಯಾ ಅವರನ್ನು ಹುಡುಕಿಕೊಂಡು ಸಾಲು-ಸಾಲು ಸಿನಿಮಾಗಳು ಬರುತ್ತಿವೆ. ಕನ್ನಡದಲ್ಲಿ ಕೂಡ ಒಂದಷ್ಟು ಕಥೆಗಳನ್ನು ಕೇಳಿ ಸಿನಿಮಾವನ್ನು ಒಪ್ಪಿಕೊಂಡಿರುವ ಧನ್ಯಾ, ತಮಿಳು ಮತ್ತು ತೆಲುಗಿಗೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ.

ತೆಲುಗು- ತಮಿಳಿಗೆ ಧನ್ಯಾ ರಾಮ್‌ಕುಮಾರ್ ಎಂಟ್ರಿ!

ತೆಲುಗು- ತಮಿಳಿಗೆ ಧನ್ಯಾ ರಾಮ್‌ಕುಮಾರ್ ಎಂಟ್ರಿ!

ನಟಿ ಧನ್ಯಾ ರಾಮ್‌ಕುಮಾರ್‌ಗೆ ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಸಾಲು-ಸಾಲು ಸಿನಿಮಾ ಆಫರ್‌ಗಳು ಅಲ್ಲಿಂದಲೇ ಬರುತ್ತಿವೆಯಂತೆ. ಆದರೆ ಕಥೆಯನ್ನು ಕೇಳಿ, ಅಳೆದು ತೂಗಿ ತಮಗೆ ಸರಿಹೊಂದುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಧನ್ಯಾ. ಸದ್ಯ ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲೂ ಕೂಡ ಧನ್ಯಾ ರಾಮ್‌ಕುಮಾರ್ ಸಿನಿಮಾ ಮಾಡಲಿದ್ದಾರೆ.

ಸದ್ಯದಲ್ಲೇ ತಮಿಳು, ತೆಲುಗು ಸಿನಿಮಾ ಪ್ರಕಟ!

ಸದ್ಯದಲ್ಲೇ ತಮಿಳು, ತೆಲುಗು ಸಿನಿಮಾ ಪ್ರಕಟ!

ಇನ್ನು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಬೇರೆ ಬೇರೆ ಸಿನಿಮಾಗಳನ್ನು ಮಾಡುತ್ತಿದ್ದು ಕಥೆಯನ್ನು ಕೇಳಿ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಕೊನೆಯ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ದಿನದಲ್ಲಿ ಸಿನಿಮಾವನ್ನು ಪ್ರಕಟ ಮಾಡಲಾಗುತ್ತದೆ. ಈ ಮಾಹಿತಿಯನ್ನು ಆಯಾ ಸಿನಿಮಾ ತಂಡಗಳು ಅಧಿಕೃತವಾಗಿ ಪ್ರಕಟಗೊಳಿಸಲಿವೆ. ಇದಕ್ಕೆ ಸಕಲ ಸಿದ್ಧತೆ ಕೂಡ ನಡೆದಿವೆ.

ಕನ್ನಡದಲ್ಲೂ ಕೂಡ ಬ್ಯುಸಿಯಾಗಿರುವ ಧನ್ಯಾ!

ಕನ್ನಡದಲ್ಲೂ ಕೂಡ ಬ್ಯುಸಿಯಾಗಿರುವ ಧನ್ಯಾ!

ಧನ್ಯಾ ರಾಮ್‌ಕುಮಾರ್ ಕನ್ನಡದಲ್ಲಿ ಕೂಡ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ನಿನ್ನ ಸನಿಹಕೆ' ಸಿನಿಮಾದ ಬಳಿಕ 'ಕಾಲಾಪತ್ಥರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟಿ ಧನ್ಯಾ. ಈ ವಿಚಾರವನ್ನು ಚಿತ್ರತಂಡ ಈಗಾಗಲೇ ಪ್ರಕಟ ಮಾಡಿದೆ. ಇದರ ಜೊತೆಗೆ ಮತ್ತೊಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ ಧನ್ಯಾ. ಅದು ಕೊಡ ಸದ್ಯದಲ್ಲೇ ಪ್ರಕಟಗೊಳ್ಳಲಿದೆ.

ಧನ್ಯಾಗೆ ಬೆನ್ನುಲುಬಾಗಿ ನಿಂತ ರಾಜ್‌ಕುಟುಂಬ!

ಧನ್ಯಾಗೆ ಬೆನ್ನುಲುಬಾಗಿ ನಿಂತ ರಾಜ್‌ಕುಟುಂಬ!

ಧನ್ಯಾ ರಾಮ್‌ಕುಮಾರ್ ಸದಾ ಹೇಳುವಂತೆ ಆಕೆಗೆ ತನ್ನ ಕುಟುಂಬವೇ ಬೆನ್ನೆಲುಬಾಗಿ ನಿಂತಿದೆ. ರಾಜ್‌ಕುಮಾರ್ ಕುಟುಂಬದ ಹೆಸರು ಬಹಳ ದೊಡ್ಡದು. ಹಾಗಾಗಿ ಧನ್ಯಾ ರಾಮ್‌ಕುಮಾರ್ ಸದಾ ಹೇಳುವುದು ಒಂದೇ ಮಾತು. ಕುಟುಂಬದ ಹೆಸರನ್ನು ಉಳಿಸುತ್ತೇನೆ ಎಂದು. ಅಂತೆಯೇ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಬೇಕು ಎನ್ನುವ ಆಸೆಯನ್ನು ಕೂಡ ರಾಜ್‌ಕುಟುಂಬ ನೆರವೇರಿಸಿ ಜೊತೆಗೆ ನಿಂತಿದೆ.

More from Filmibeat

English summary
Dr.Rajkumar Grand Daughter Dhanya Ramkumar All Set to Enter Tamil, Telugu films,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X