'ನಿನ್ನ ಸನಿಹಕೆ' ಅಂತಿರೋದೇಕೆ ಡಾ.ರಾಜ್ ಮೊಮ್ಮಗಳು ಧನ್ಯಾ

ವರನಟ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ವಿಷಯ ಎಲ್ಲರಿಗೂ ಗೊತ್ತಿರುವುದೆ. ಇತ್ತೀಚಿಗಷ್ಟೆ ಚೊಚ್ಚಲ ಚಿತ್ರದ ಬಗ್ಗೆ ಬಹಿರಂಗ ಪಡಿಸಿದ್ದರು ಧನ್ಯಾ. ನಟ ಸೂರಜ್ ಗೌಡ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಧನ್ಯಾ ಮೊದಲ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿರಲಿಲ್ಲ.

ಆದ್ರೀಗ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಈ ರೋಮ್ಯಾಂಟಿಕ್ ಚಿತ್ರಕ್ಕೆ 'ನಿನ್ನ ಸನಿಹಕೆ' ಎಂದು ನಾಮಕರಣ ಮಾಡಿದೆ ಚಿತ್ರತಂಡ. 'ನಿನ್ನ ಸನಿಹಕೆ' ಚಿತ್ರಕ್ಕೆ ಯುವ ಪ್ರತಿಭೆ ಸುಮನ್ ಜಾದುಗರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಇರುವ ಸುಮನ್ 'ನಿನ್ನ ಸನಿಹಕೆ' ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.

ಅಂದ್ಹಾಗೆ 'ನಿನ್ನ ಸನಿಹಕೆ' ಚಿತ್ರದಲ್ಲಿ ನಟ ಸೂರಜ್ ಅಭಿನಯಿಸುವ ಜೊತೆಗೆ ಕಥೆ ಕೂಡ ಬರೆದಿದ್ದಾರೆ. ಇದರ ಜೊತೆಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ನಿರ್ದೇಶನದ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದಾರಂತೆ. ಒಟ್ಟಾರೆ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಸೂರಜ್.

dr.Rajkumar grand daughter Dhanya Ramkumar and actor Suraj Gowda film titled Ninna Sanihake

ಈಗಾಗಲೆ 'ನಿನ್ನ ಸನಿಹಕೆ' ಚಿತ್ರದ ಪೋಟೋಶೂಟ್ ಮಾಡಿಸಲಾಗಿದ್ದು ಧನ್ಯಾ ಮತ್ತು ಸೂರಜ್ ಫೋಟೋಗಳು ವೈರಲ್ ಆಗಿವೆ. ಚಿತ್ರಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರುವ 'ನಿನ್ನ ಸನಿಹಕೆ' ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರಲಿದ್ದು ಚಿತ್ರೀಕರಣ ಕೂಡ ಆಗಸ್ಟ್ ನಲ್ಲಿಯೆ ಪ್ರಾರಂಭವಾಗಲಿದೆ.

More from Filmibeat

English summary
Kannada legend actor dr.Rajkumar grand daughter Dhanya Ramkumar and actor Suraj Gowda film titled 'Ninna Sanihake'. This film is directed by Suman jadugar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X