For Quick Alerts
  ALLOW NOTIFICATIONS  
  For Daily Alerts

  ಚಂದನವನದ ಎಂಟ್ರಿಗೆ ಸಜ್ಜಾದ ಡಾ.ರಾಜ್ ರವರ ಮತ್ತೊಬ್ಬ ಮೊಮ್ಮಗ!

  By Suneel
  |

  ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ಕುಟುಂಬದಿಂದ ಸದ್ಯದಲ್ಲಿ ನಾಲ್ವರು ನಾಯಕ ನಟರು ಸಿನಿಮಾ ಕ್ಷೇತ್ರದಲ್ಲಿದ್ದಾರೆ. ಈಗ ಅವರೊಟ್ಟಿಗೆ ಸೇರಲು ಡಾ.ರಾಜ್‌ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಸಜ್ಜಾಗಿದ್ದಾರೆ.

  ಡಾ.ರಾಜ್‌ ಕುಮಾರ್ ರವರ ಕಿರಿಯ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್‌ಕುಮಾರ್ ದಂಪತಿಯ ಪುತ್ರ ಧೀರೆನ್ ರಾಮ್‌ಕುಮಾರ್ ರವರು ಈಗ ಚಂದನವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರಂತೆ. ಅಲ್ಲದೇ ಸಿನಿರಂಗಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಯಲ್ಲೂ ತೊಡಗಿದ್ದಾರಂತೆ.

  ಇತ್ತೀಚೆಗಷ್ಟೇ ವ್ಯಾಸಂಗ ಮುಗಿಸಿರುವ ಧೀರೆನ್ ರಾಮ್‌ಕುಮಾರ್ ಅವರಿಗೆ ಒಂದೆರಡು ಪ್ರಾಜೆಕ್ಟ್‌ಗಳು ಬಂದಿವೆಯಂತೆ. ಆದರೆ ಧೀರೆನ್ ಯಾವುದನ್ನು ಇನ್ನೂ ಫೈನಲ್ ಮಾಡಿಲ್ಲವಂತೆ. ಸದ್ಯದಲ್ಲಿ ಅಭಿನಯ ತರಂಗದ ಗೌರಿ ದತ್ ರವರ ಬಳಿ ರಂಗಭೂಮಿ ಕಲೆಯನ್ನು, ಜೈ ಎನ್ನುವವರ ಬಳಿ ನೃತ್ಯವನ್ನು ಕಲಿಯುತ್ತಿದ್ದು, ಫೈಟ್ಸ್ ತರಗತಿಗೂ ಹೋಗುತ್ತಿದ್ದಾರಂತೆ.

  ಧೀರೆನ್ ತಮ್ಮ ತಂದೆ ರಾಮ್‌ಕುಮಾರ್ ಅವರ ಬಳಿಯು ನಟನೆ ಬಗ್ಗೆ ಕೇಳಿದ್ದು, ಅವರ ಮಾವಂದಿರ ಸಿಂಪ್ಲಿಸಿಟಿ ಮತ್ತು ಹಾರ್ಡ್‌ವರ್ಕ್‌ ನೋಡಿ ಒಬ್ಬ ನಟನಿಗೆ ಇರಬೇಕಾದ ಹಲವು ಗುಣಗಳನ್ನು ತಿಳಿದುಕೊಂಡಿದ್ದಾರಂತೆ. ಸದ್ಯ ನಟನೆಗೆ ಬೇಕಾದ ಹಲವು ಕಲೆಗಳ ಅಭ್ಯಾಸದಲ್ಲಿರುವ ಧೀರೆನ್ ಸಂಪೂರ್ಣ ತಯಾರಿಯ ನಂತರ ಕ್ಲಾಸ್ ಮತ್ತು ಮಾಸ್ ಆಡಿಯನ್ಸ್ ಇಬ್ಬರಿಗೂ ಉತ್ತಮ ಮನರಂಜನೆ ನೀಡುವ ಚಿತ್ರದಲ್ಲಿ ನಟಿಸಲಿದ್ದಾರಂತೆ.

  English summary
  Kannada Actor Dr.Rajkumar grandson Dheeren Ramkumar Sandalwood entry very soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X